ಕನ್ನಡಪ್ರಭ ವಾರ್ತೆ ವಿಜಯಪುರ
ಕಾರ್ಮಿಕರು ದೇಶದ ಆಸ್ತಿ, ಕಾರ್ಮಿಕರ ಶ್ರಮದ ಫಲವಾಗಿಯೇ ದೇಶ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತದೆ ಎಂದು ಜೆಡಿಎಸ್ ಹಿರಿಯ ನಾಯಕಿ ಡಾ.ಸುನೀತಾ ಚವ್ಹಾಣ ಹೇಳಿದರು.ತಾಲೂಕಿನ ಯೋಗಾಪುರ ಶ್ರೀ ಹನುಮಾನ ದೇವಸ್ಥಾನದ ಆವರಣದಲ್ಲಿ ಬೃಹತ್ ಕಾರ್ಮಿಕರ ಸಮ್ಮೇಳನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ಈ ದೇಶದ ಅಮೂಲ್ಯ ಸಂಪತ್ತು. ಕಾರ್ಮಿಕರ ಕಲ್ಯಾಣದಲ್ಲಿಯೇ ದೇಶದ ಸಮೃದ್ಧಿ ಅಡಗಿದೆ. ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ದೊರಕಬೇಕಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಕಟ್ಟುವಲ್ಲಿ ಕಾರ್ಮಿಕರೇ ಆಧಾರ, ಪ್ರತಿ ಅಭಿವೃದ್ಧಿ ಕಾಮಗಾರಿ ಹಿಂದೆ ಕಾರ್ಮಿಕನ ಶ್ರಮವಿದೆ, ಕೋವಿಡ್ ಮೊದಲಾದ ಕಾಲಘಟ್ಟದಲ್ಲಿ ಶ್ರಮಿಕ ವರ್ಗದ ಕೊಡುಗೆ ಅನನ್ಯ, ಅಪಾರ ಎಂದು ಶ್ಲಾಘಿಸಿದರು.ಫೆ.೧೧ ರಂದು ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ವಿಜಯಪುರ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳ ಉಳಿವಿಗಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ದಿಂಡವಾರ ಗಚ್ಚಿನ ಮಠದ ಪಟ್ಟದ ದೇವರು ಕುಮಾರಲಿಂಗ ಶಿವಾಚಾರ್ಯರು, ಹುಲಜಂತಿ ಪಟ್ಟದ ದೇವರಾದ ಮಹಾಲಿಂಗರಾಯ ಮಹಾರಾಜರು, ಯೋಗಾಪುರ ದರ್ಗಾ ಸಾಹೇಬರಾದ ಸೈಯ್ಯದ ಸಿಬ್ಬತ್ ಉಲ್ಲಾ ಖಾದ್ರಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಯುವಧುರೀಣ ರಾಜು ಜಾಧವ, ಹಿರಿಯ ನ್ಯಾಯವಾದಿ ತುಳಶಿರಾಮ ಸೂರ್ಯವಂಶಿ, ಡಾ.ಸಲಿಮ ರಾಜಶೇಖ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ, ದೇವು ಪರಸನಳ್ಳಿ, ಧರೆಪ್ಪ ಅರ್ಧಾವೂರ, ವಿಜಯಲಕ್ಷ್ಮೀ ನಾಗಶೆಟ್ಟಿ, ನಿರ್ಮಲಾ ಅವಟಿ, ಅಕ್ಷತಾ ಚಲವಾದಿ, ದಕ ಪರಶುರಾಮ ಪವಾರ, ಸುಲೇಮನ ಓತಗೆರಿ, ದತ್ತಸಿಂಹ ರಜಪೂತ, ನಬಿರಸುಲ ಗುಡ್ನಾಳ, ಆನಂದ ಜಂಬಗಿ, ಪ್ರಭು ಪರಸನಳ್ಳಿ, ಮಲ್ಲಿಕಾಜುನ ಹಳ್ಳದ, ಶಿವು ಹಿರೇಕುರಬರ, ಬಸವರಾಜ ಚಿಮ್ಮಲಗಿ, ಶರಣಬಸವ ಕೊನಳ್ಳಿ ಮುಂತಾದವರು ಇದ್ದರು.
ಪ್ರಕಾಶ ರಜಪೂತ ಕಾರ್ಯಕ್ರಮ ಸ್ವಾಗತಿಸಿದರು. ಕುಮಾರಿ ಪೂಜಾ ವೀರಶೆಟ್ಟಿ ನಿರೂಪಿಸಿದರು. ದಾವೂದ ಹತ್ತರಕಿಹಾಳ ವಂದಿಸಿದರು.