ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಡಾ ರಾಜ್‌ಕುಮಾರ್ ಬಡಾವಣೆಯಲ್ಲಿನ ಬಸವ ಮಂಟಪದ ಆವರಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿ, ನೂರಾರು ವರ್ಷಗಳ ಹಿಂದೆ ಅನೇಕ ಶರಣರು ಕಾಯಕ ಮಾಡುತ್ತಲೇ ಸಮಾಜದ ಅಂಕು ಡೊಂಕು ತಿದ್ದುತ್ತಲೇ ವಚನಗಳನ್ನು ರಚನೆ ಮಾಡಿದರು. ಆ ಮೂಲಕ ಸಮ ಸಮಾಜವನ್ನು ಸೃಷ್ಠಿ ಮಾಡಿದರು ಎಂದರು.
ಲಿಂಗಾಯತ ಶಬ್ದದ ಹಿಂದೆ ಶಬ್ದವೇ ಇಲ್ಲದ ವೀರಶೈವ ಎಂಬುದು ಸದ್ದಿಲ್ಲದೇ ಸೇರಿಕೊಂಡಿರುವುದು ಸಮಾಜ ಒಡೆಯುವ ಕುತಂತ್ರವಾಗಿದ್ದು ಯಾರೂ ಆ ಸತ್ಯ ಹೇಳುತ್ತಿಲ್ಲ ಎಂದು ಟೀಕೆ ಮಾಡಿದ ರುದ್ರಮುನಿಯವರು ಮಲೇಬೆನ್ನೂರು ಪಟ್ಟಣದಲ್ಲಿ ಬಸವ ಮಂಟಪ ನಿರ್ಮಾಣ ಮಾಡುತ್ತಿರುವುದು ಪಟ್ಟಣದ ನಾಗರಿಕರ ಪುಣ್ಯವಾಗಿದೆ, ಇಲ್ಲಿಂದಲೇ ವಚನಗಳನ್ನು ಹಳ್ಳಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡೋಣ ಎಂದರು.ಬಸವ ದಳದ ಮುಖಂಡ ವೈ ನಾರೇಶಪ್ಪ ಮಾತನಾಡಿ ದಾವಣಗೆರೆಯಲ್ಲಿ ಸೆ ೧೫ರಂದು ಬಸವ ಸಂಸ್ಕೃತಿ ಅಭಿಯಾನ ಜರುಗಲಿದ್ದು ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಾವೆಲ್ಲ ಒಂದು ಬದ್ದತೆಯಿಂದ ಶರಣರಂತೆ ಸೇವಾ ಕಾರ್ಯದಲ್ಲಿ ಸಾಗೋಣ. ಲಿಂಗಾಯತ ಧರ್ಮವನ್ನು ಉಳಿಸಿ ನಾಡಿನ ಎತ್ತರಕ್ಕೆ ಬೆಳೆಸೋಣ ಎಂದರು.
ಪುರಸಭಾ ಸದಸ್ಯ ಬಿ ವೀರಯ್ಯ ಮಾತನಾಡಿ, ನಮ್ಮ ಗ್ರಾಮೀಣ ಭಾಗದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ ಶರಣರಿಗೆ ಗೌರವ ಸಲ್ಲಿಸೋಣ ಎಂದರು.