ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕಡಿಮೆಯಾಗಲಿದೆ 110 ಕಿ.ಮೀ. ಅಂತರ !

KannadaprabhaNewsNetwork |  
Published : Jul 08, 2025, 12:32 AM ISTUpdated : Jul 08, 2025, 11:51 AM IST
ಕ್ಯಾಪ್ಷನ7ಕೆಡಿವಿಜಿ31 ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ನಿಲ್ದಾಣಗಳು | Kannada Prabha

ಸಾರಾಂಶ

ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ಮಾರ್ಚ್- 2027ರೊಳಗೆ ಮುಗಿಸುವಂತೆ ದಾವಣಗೆರೆಯ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ದಾವಣಗೆರೆ: ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ಮಾರ್ಚ್- 2027ರೊಳಗೆ ಮುಗಿಸುವಂತೆ ದಾವಣಗೆರೆಯ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಹೊಸ ಮಾರ್ಗವು ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರ ಅಂತರವನ್ನು 65 ಕಿ.ಮೀ.ನಷ್ಟು ಕಡಿಮೆ ಮಾಡುತ್ತದೆ. ಈ ರೈಲು ಮಾರ್ಗದ ಅಂತಿಮ ಸಮೀಕ್ಷೆ ಮುಗಿದಿದೆ ಮತ್ತು ದಾವಣಗೆರೆ ಮತ್ತು ತುಮಕೂರು ಕಡೆಯಿಂದ ಕಾಮಗಾರಿ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಹೊಸ ರೈಲು ಮಾರ್ಗದಿಂದ ಉಪಯೋಗಗಳು:

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 110 ಕಿ.ಮೀ. ಅಂತರ ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಹೊಸ ಸ್ಥಳಗಳು ರೈಲು ಸಂಪರ್ಕವನ್ನು ಪಡೆಯುತ್ತವೆ. ಬೆಂಗಳೂರು-ಅರಸಿಕೆರೆ-ಶಿವಮೊಗ್ಗ ಮಾರ್ಗದಲ್ಲಿ ರೈಲು ಸಂಚಾರ 50% ರಷ್ಟು ಕಡಿಮೆಯಾಗುತ್ತದೆ. ಶಿವಮೊಗ್ಗವು ಬೆಂಗಳೂರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದು. ಅಲ್ಲದೇ, ಬೆಂಗಳೂರಿನಿಂದ ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿ ಇರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ 35% ಕಡಿಮೆ ಆಗುತ್ತದೆ. ಇದರ ಪರಿಣಾಮ ಪ್ರಸ್ತುತ ಹರಿಹರ- ಬೀರೂರು- ಅರಸಿಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆ ಆಗುವುದರಿಂದ ಹೆಚ್ಚಿನ ಸರಕು ಸಾಗಣೆಯೂ ಮಾಡಬಹುದು. ಪ್ರಯಾಣದ ದೂರ ಕಡಿಮೆ ಆಗುವುದರಿಂದ, ಇಂಧನ ಮತ್ತು ಸಾಕಷ್ಟು ಪ್ರಯಾಣ ಸಮಯ ಉಳಿಸಬಹುದು ಎಂದು ತಿಳಿಸಿದ್ದಾರೆ.

ಐತಿಹಾಸಿಕ ಚಿತ್ರದುರ್ಗದ ಕೋಟೆ ನೋಡಲು ದೇಶ- ವಿದೇಶದಿಂದ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲ ಆಗುತ್ತದೆ. ಹೆಚ್ಚಿನ ಆದಾಯವೂ ಸಂಗ್ರಹವಾಗಲಿದೆ. ದಾವಣಗೆರೆಗೆ, ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಹಾಗೂ ಊರಕೇರೆಗೆ ರೈಲು ಸಂಪರ್ಕ ಕಲ್ಪಿಸದಂತಾಗುತ್ತದೆ ಎಂದು ತಿಳಿಸಿದ್ದಾರೆ. 

PREV
Read more Articles on