ದೇವಾಲಯದ ಮೂಲಸ್ಥಾನದಲ್ಲಿ ವಿಶೇಷ ಪೂಜೆ
ಸಮೀಪದ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಬೆಳಗ್ಗೆ ಶ್ರೀ ಅಮ್ಮನವರ ದೇವಾಲಯದ ಮೂಲಸ್ಥಾನದಲ್ಲಿ ಶ್ರೀ ಸ್ವರ್ಣಾಂಬ ದೇವಿಗೆ ವಿವಿಧ ರೀತಿಯ ಅಭಿಷೇಕಗಳು, ಸಾಂಪ್ರದಾಯಿಕ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬಳಿಕ ದೇವಾಲಯದಲ್ಲಿನ ಕಲ್ಯಾಣ ಮಂಟಪದಲ್ಲಿ ಕನ್ನಿಕಾ ಪೂಜಾ, ಪುರಸ್ಸರ, ಕಲ್ಯಾಣೋತ್ಸವ ನೆರವೇರಿಕೆ ಬಳಿಕ ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವರುಗಳೊಂದಿಗೆ ಮೆರವಣಿಗೆ ನಡೆಯಿತು.ಅಮ್ಮನವರು ದೇವಾಲಯದ ಆವರಣಕ್ಕೆ ಮೆರವಣಿಗೆ ಬರುತ್ತಿದ್ದಂತೆ ಮಹಿಳೆಯರು ಅಮ್ಮನವರಿಗೆ ಇಷ್ಟವಾದ ಅರಿಶಿಣ ಕುಂಕುಮ ಎರಚುವ ಮೂಲಕ ದೇವರ ಜೊತೆ ಭಕ್ತರು, ದೇವಾಲಯದ ಪ್ರಾಂಗಣವೇ ಕುಂಕುಮದೊಂದಿಗೆ ತೊಯ್ದು ಹೋಯಿತು. ಆ ಬಳಿಕ ಶ್ರೀ ಅಮ್ಮನವರನ್ನು ಮಧ್ಯಾಹ್ನ12.30ರ ಧನುರ್ ಲಗ್ನದಲ್ಲಿ ರಥಧಲ್ಲಿ ಕೂರಿಸುತಿದ್ದಂತೆ ಸಾವಿರಾರು ಭಕ್ತರು ರಥವನ್ನು ಎಳೆದರು. ಬಿಸಿಲನ್ನು ಲೆಕ್ಕಿಸದೆ ಸೇರಿದ್ದ ಸಾವಿರಾರು ಭಕ್ತರು ಶ್ರೀ ಅಮ್ಮನವರ ದರ್ಶನ ಪಡೆದು ಕುಣಿದು ಕುಪ್ಪಳಿಸಿದರು.
18ಕೆಕೆಡಿಯು1.
ಕಡೂರು ಸಮೀಪದ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯವರ ದಿವ್ಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.