ಚನ್ನಪಟ್ಟಣ: ಅಯ್ಯನಗುಡಿ ದನಗಳ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕೆಂಗಲ್ ಅಂಜನೇಯಸ್ವಾಮಿ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದ್ದು, ಜಾತ್ರೆಯಲ್ಲಿ ರಾಸುಗಳ ಗಜ್ಜೆ ಸಪ್ಪಳ ಜೋರಾಗಿಯೇ ಕೇಳಿ ಬರುತ್ತಿದೆ.
ದೇವಸ್ಥಾನದ ಆವರಣ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ರಾಸುಗಳನ್ನು ಕಟ್ಟಲಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ವಿವಿಧ ತಳಿಯ ರಾಸುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿಂದೆ ನಗರದ ಕುಡಿನೀರು ಕಟ್ಟೆಯವರೆಗೂ ರಾಸುಗಳನ್ನು ಕಟ್ಟಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜಾತ್ರೆ ಗತವೈಭವವನ್ನು ಕಳೆದುಕೊಂಡಿದ್ದರೂ ಆಸಕ್ತ ರೈತರು ರಾಸುಗಳೊಂದಿಗೆ ಆಗಮಿಸಿದ್ದಾರೆ.
ವಿವಿಧ ತಳಿಯ ರಾಸುಗಳು:ಸುಗ್ಗಿಹಬ್ಬ ಸಂಕ್ರಾಂತಿಯ ಆರಂಭಗೊಳ್ಳುವ ರಾಜ್ಯದ ಮೊದಲ ರಾಸುಗಳ ಜಾತ್ರೆ ಎಂಬ ಹಿರಿಮೆಗೆ ಪಾತ್ರವಾಗಿರುವ ಕೆಂಗಲ್ ದನಗಳ ಜಾತ್ರೆ ಪಾತ್ರವಾಗಿದೆ. ರೈತರು ಈ ಜಾತ್ರೆಗೆ ರಾಸುಗಳನ್ನು ಕೊಳ್ಳಲು ಮತ್ತು ಜಾನುವಾರುಗಳನ್ನು ಮಾರಾಟ ಮಾಡಲು ಆಗಮಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ವಿವಿಧ ತಳಿಯ ರಾಸುಗಳನ್ನು ಕಾಣಬಹುದಾಗಿದೆ.
ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ:
ಹಳ್ಳಕಾರ್ ಹಸುಗಳ ಆಕರ್ಷಣೆ:
ಲಕ್ಷಗಟ್ಟಲೇ ಮೌಲ್ಯದ ರಾಸುಗಳು:
ಬಾಕ್ಸ್....................
ಅಯ್ಯನಗುಡಿ ಜಾತ್ರೆಯಲ್ಲಿ ರಾಸುಗಳ ಪ್ರದರ್ಶನ, ಮಾರಾಟ ಹಾಗೂ ಖರೀದಿಯ ಜತೆಗೆ ಉತ್ತಮ ರಾಸುಗಳ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ರೈತರು ತಾವು ಸಾಕಿರುವ ಉತ್ತಮ ರಾಸುಗಳೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬೇರೆ ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವರ್ಗದ ಮೂರು ಅತ್ಯುತ್ತಮ ರಾಸುಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡುವ ಜತೆಗೆ ರಾಸುಗಳ ಮಾಲೀಕರನ್ನು ಸನ್ಮಾನಿಸಲಾಗುವುದು.
ಕೋಟ್.................
ಸಂಕ್ರಾಂತಿಗೆ ನಡೆಯುವ ಕೆಂಗಲ್ ದನಗಳ ಜಾತ್ರೆ ಬಹಳ ವಿಶಿಷ್ಟವಾದದ್ದು. ಕೋವಿಡ್‌ನಿಂದ ಕಳೆದ ಕೆಲ ವರ್ಷಗಳಿಂದ ಜಾತ್ರೆ ಕಳೆಗುಂದಿತ್ತು. ಇದೀಗ ಈ ಬಾರಿ ಜಾತ್ರೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ತಳಿಯ ರಾಸುಗಳೊಂದಿಗೆ ರೈತರು ಆಗಮಿಸಿರುವುದು ಸಂತಸ ತರಿಸಿದೆ.-ವಿ.ಬಿ.ಚಂದ್ರು, ಮಾಜಿ ಅಧ್ಯಕ್ಷರು, ಕೆಂಗಲ್ ಆಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ಪೋಟೊ೧೬ಸಿಪಿಟಿ೧:ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಾತ್ರೆಗೆ ಆಗಮಿಸಿರುವ ರಾಸುಗಳು ಹಾಗೂ ರೈತರು.
ಪೊಟೋ೧೬ಸಿಪಿಟಿ೨:ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಟ್ಟಿರುವ ರಾಸುಗಳು.
ಪೋಟೊ೧೬ಸಿಪಿಟಿ೩:ಡೊಳ್ಳುಕುಣಿತ, ಜಾನಪದ ಕಲಾಮೇಳದ ಜೊತೆ ಜಾತ್ರೆಗೆ ಆಗಮಿಸಿದ ಎತ್ತಿನ ಜೋಡಿ.