ಸಮ ಸಮಾಜದ ಕನಸು ಗ್ಯಾರಂಟಿಯಿಂದ ನನಸಾಗುತ್ತಿದೆ : ಶಾಸಕ ಕೆ . ರಾಘವೇಂದ್ರ ಹಿಟ್ನಾಳ

KannadaprabhaNewsNetwork | Updated : Nov 26 2024, 10:56 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗಗಳ ಜನರನ್ನು ಸಮಾನವಾಗಿ ತಲುಪುತ್ತಿವೆ.

 ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಜಿಪಂ ವ್ಯಾಪ್ತಿಯ ದದೇಗಲ್, ಹಲಿಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಗುನ್ನಲ್ಲಿ, ವರತಟ್ನಾಳ ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ಅಂದಾಜು ಮೊತ್ತ ₹4.5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗಗಳ ಜನರನ್ನು ಸಮಾನವಾಗಿ ತಲುಪುತ್ತಿವೆ. ಇದರಿಂದ ಸಮ ಸಮಾಜದ ಕನಸು ನನಸಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಕೆಲವರ ಬದುಕಿಗೆ ನೆರವಾಗಿವೆ. ಬಡ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ ಆಗಿವೆ. ಹೀಗೆ ವಿವಿಧ ರೀತಿಯಲ್ಲಿ ನಮ್ಮ ಯೋಜನೆಗಳು ಜನರ ಬದುಕನ್ನ ಸುಸ್ಥಿರಗೊಳಿಸುವಲ್ಲಿ ಪರಿಣಾಮಕಾರಿಯಾಗಿವೆ ಎಂದರು.

ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ನೂತನ ಅಕ್ಷರ ದಾಸೋಹದ ಕೊಠಡಿ ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸಿದರು. ಈ ಸಂದರ್ಭ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲ್ಬಿ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ್ ದದೇಗಲ್, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರನ ಮುನಿರಬಾದ್, ಮುಖಂಡರಾದ ಹನುಮರೆಡ್ಡಿ ಹಂಗನಕಟ್ಟಿ, ವಿರುಪಣ್ಣ ನವೋದಯ, ನಿಂಗಪ್ಪ ಯತ್ನಟ್ಟಿ, ಹನುಮಂತ ಹಳ್ಳಿಕೇರಿ, ದೇವಪ್ಪ ವದಗನಾಳ, ವಿರುಪಾಕ್ಷಿ ಚಿಕ್ಕಸಿಂದೋಗಿ, ಶಿವಪ್ಪ ಗುನ್ನಳ್ಳಿ, ವಸಂತ ವರತಟ್ನಾಳ, ಮಲ್ಲು ಪೂಜಾರ್, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರಿದ್ದರು.

Share this article