ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳ ಪರಿಶ್ರಮ ಅನನ್ಯ

KannadaprabhaNewsNetwork |  
Published : Jul 18, 2024, 01:32 AM IST
ದೊಡ್ಡಬಳ್ಳಾಪುರದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಡಾ.ಶಾರದಾ ಉದ್ಘಾಟಿಸಿದರು. ಬಿ.ಎಸ್.ಚಂದ್ರಶೇಖರ್ ಮತ್ತಿತರರಿದ್ದಾರೆ. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಸಂಘಟನೆಗಳು ಜನಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ವಿಶಿಷ್ಟವಾಗಿ ಕಾರ್ಯನಿರ್ವಹಿಸುವ ಅವಕಾಶ ಇದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್‌ ಹೇಳಿದರು.

ದೊಡ್ಡಬಳ್ಳಾಪುರ: ಸಂಘಟನೆಗಳು ಜನಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ವಿಶಿಷ್ಟವಾಗಿ ಕಾರ್ಯನಿರ್ವಹಿಸುವ ಅವಕಾಶ ಇದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್‌ ಹೇಳಿದರು.

ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ದಿನಪತ್ರಿಕೆ ಹಂಚುವ ಮಕ್ಕಳಿಗೆ ಪುಸ್ತಕ, ಲೇಖನ ಪರಿಕರಗಳ ವಿತರಣೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸಂಸ್ಥೆಯ ಮೂಲಕ ನಿತ್ಯ ದಾಸೋಹ ಸೇವೆ ನಡೆಯುತ್ತಿದ್ದು, ಹಲವು ದಾನಿಗಳು ಇದಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ನೋಟ್‌ ಪುಸ್ತಕ ಹಾಗೂ ಲೇಖನ ಪರಿಕರಗಳನ್ನು ವಿತರಿಸಲಾಗುತ್ತಿದೆ. ನಿತ್ಯದ ಸುದ್ದಿಗಳನ್ನು ಜನತೆಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಎಷ್ಟು ಗಣನೀಯವೋ ಅದೇ ರೀತಿ ಸುದ್ದಿಪತ್ರಿಕೆ ಹಂಚುವ ವಿತರಕರು ಹಾಗೂ ಮನೆಮನೆಗೆ ತಲುಪಿಸುವ ಮಕ್ಕಳ ಕೊಡುಗೆಯೂ ಅಪಾರ ಎಂದರು.

ಬೆಂ.ಗ್ರಾ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್‌ ಮಾತನಾಡಿ, ಕನ್ನಡ ಸಂಘಟನೆಗಳು ವಿಭಿನ್ನವಾಗಿ ತನ್ನ ಆಶಯಗಳ ಸಾಕಾರಕ್ಕೆ ಶ್ರಮಿಸುವ ಅವಕಾಶಗಳಿದ್ದು, ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವುದು ಅಗತ್ಯ. ಪತ್ರಿಕೆ ಹಂಚುವ ಮಕ್ಕಳ ಶೈಕ್ಷಣಿಕ ಮುನ್ನಡೆಗೆ ಪ್ರೋತ್ಸಾಹದಾಯಕವಾಗಿ ಪುಸ್ತಕಗಳ ವಿತರಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಮಳೆ, ಚಳಿಯನ್ನೂ ಲೆಕ್ಕಿಸದೆ ಪತ್ರಿಕೆ ಹಂಚುತ್ತಲೇ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇತರೆ ಮಕ್ಕಳಿಗೂ ಮಾದರಿ. ಪೋಷಕರ ಬಡತನ ಅರಿತುಕೊಂಡ ಮಕ್ಕಳ ತಮ್ಮ ಶ್ರಮದಿಂದ ಕಟ್ಟಿಕೊಳ್ಳುವ ಬದುಕು ಕಟ್ಟಿಕೊಳ್ಳುವ ಆಲೋಚನೆ ಮಕ್ಕಳ ಶ್ರದ್ಧೆಯನ್ನು ತಿಳಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್, ಮೆಳೇಕೋಟೆಯ ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್, ಮಕ್ಕಳ ತಜ್ಞ ವೈದ್ಯ ಡಾ.ಸುಭಾಶ್‌ ಶಿಂಪಿಗೇರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಉಪ್ಪಾರ, ಶಿಕ್ಷಕಿ ಜಿ.ರೂಪಶ್ರೀ, ಕುಸ್ತಿ ತರಬೇತುದಾರ ಪೈಲ್ವಾನ್‌ ಚೌಡಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿ ಡಾ.ಶಾರದಾ ನಾಗಾನಾಥ್ ಉದ್ಘಾಟಿಸಿದರು. ಮಂಜುನಾಥ್‌ ಸುಗಟೂರು, ಬಾಲೆಪುರ ಮಂಜಣ್ಣ, ಜಗದೀಶ್‌ ಬೂದಿಹಾಳ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದ್, ಚೇತನ್‌ಗೌಡ, ಸುಭಾಷ್‌ಚಂದ್ರ, ದೊಡ್ಡೇಗೌಡ, ಅಲ್ತಾಫ್‌, ರಂಜಿತ್, ನರೇಂದ್ರ, ಸುರೇಶ್‌ ದಾವಣಗೆರೆ ಮತ್ತಿತರರಿದ್ದರು.

17ಕೆಡಿಬಿಪಿ1-ದೊಡ್ಡಬಳ್ಳಾಪುರದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಡಾ.ಶಾರದಾ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಚಂದ್ರಶೇಖರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ