ಇಂದಿರಾ ಗಾಂಧಿ ಪುಣ್ಯಸ್ಮರಣೆ ಅರ್ಥಪೂರ್ಣಗೊಳಿಸುವ ಪ್ರಯತ್ನ ಶ್ಲಾಘನೀಯ

KannadaprabhaNewsNetwork |  
Published : Nov 02, 2026, 03:00 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಕಾಂಗ್ರೆಸ್ ಸೇವಾದಳ ಹಾಗೂ ಯಂಗ್ ಬ್ರಿಗೇಡ್ ಸೇವಾದಳದಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

- ಶಾಸಕ ಎಚ್.ಡಿ. ತಮ್ಮಯ್ಯ । ಇಂದಿರಾ ಪುಣ್ಯಸ್ಮರಣೆ । ಕಾಂಗ್ರೆಸ್ ಸೇವಾದಳದಿಂದ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಕಾಂಗ್ರೆಸ್ ಸೇವಾದಳ ಹಾಗೂ ಯಂಗ್ ಬ್ರಿಗೇಡ್ ಸೇವಾದಳದಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ನಡೆದ ಶಿಬಿರಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿ ಮಾತನಾಡಿ ವಿದ್ಯಾದಾನ ಶ್ರೇಷ್ಠ ಎನ್ನಲಾಗುತ್ತದೆ. ಆದರೂ ರಕ್ತದಾನ ಮತ್ತು ಅಂಗಾಂಗ ದಾನಗಳು ಮತ್ತೊಬ್ಬರ ಪ್ರಾಣ ಉಳಿಸುವ ಅತ್ಯಂತ ಮಹತ್ವದ ಸೇವೆ. ಇಂದಿರಾ ಗಾಂಧಿ ಅವರನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ ಅವರ ಪುಣ್ಯಸ್ಮರಣೆಯನ್ನು ರಕ್ತದಾನದಂತಹ ಜನಪರ ಸೇವೆ ಮೂಲಕ ಅರ್ಥಪೂರ್ಣಗೊಳಿಸಿರುವ ಸೇವಾದಳದ ಕಾರ್ಯಕರ್ತರ ಪ್ರಯತ್ನ ಶ್ಲಾಘನೀಯ ಎಂದರು.ಇಂದಿರಾ ಗಾಂಧಿ ಅವರೊಂದಿಗಿನ ತಮ್ಮ ಕುಟುಂಬದ ಭಾವನಾತ್ಮಕ ಸಂಬಂಧ ಸ್ಮರಿಸಿದ ಅವರು, 1978ರಲ್ಲಿ ತಮ್ಮ ಅಜ್ಜ ಹೆಗಲ ಮೇಲೆ ಕೂರಿಸಿಕೊಂಡು ಹಿರೇಮೂಲರಿನಲ್ಲಿ ಇಂದಿರಾ ಗಾಂಧಿ ಅವರನ್ನು ತೋರಿಸಿದ್ದನ್ನು ನೆನಪಿಸಿಕೊಂಡರು. 1995 ರಲ್ಲಿ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಇಂದಿರಾ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಭಾವುಕ ರಾಗಿದ್ದೆ ಎಂದು ತಿಳಿಸಿದರು.ದೇಶದ ಇತಿಹಾಸದಲ್ಲಿ ಸುಮಾರು 16 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ಇಂದಿರಾ ಗಾಂಧಿ ಬಡತನ ನಿರ್ಮೂಲನೆ, ಅನಕ್ಷರತೆ ನಿವಾರಣೆ ಹಾಗೂ ದೇಶದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದರು. ''''''''ಗರೀಬಿ ಹಠಾವೋ'''''''' ಘೋಷಣೆ, 20 ಅಂಶಗಳ ಕಾರ್ಯಕ್ರಮಗಳ ಮೂಲಕ ಜನಪರ ಯೋಜನೆಗಳಿಗೆ ಒತ್ತು ನೀಡಿದ್ದರು. 1971ರ ಭಾರತ-ಪಾಕಿ ಸ್ತಾ ನ ಯುದ್ಧದ ಸಂದರ್ಭದಲ್ಲಿ ತೋರಿದ ನಾಯಕತ್ವ ಹಾಗೂ ಬಾಂಗ್ಲಾದೇಶದ ಉದಯದಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಸ್ಮರಿಸಿದರು.ಕರ್ನಾಟಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಂಡ ಭೂಸುಧಾರಣೆ ಕಾಯ್ದೆ ಹಾಗೂ ಉಳು ವವನಿಗೆ ಭೂಮಿ ಐತಿಹಾಸಿಕ ಕ್ರಮದ ಹಿಂದೆ ಇಂದಿರಾ ಗಾಂಧಿ ಮಾರ್ಗದರ್ಶನ ಮತ್ತು ಪ್ರೇರಣೆ ಇತ್ತು. ಅವರ ಆದರ್ಶ ಹಾಗೂ ಜನಪರ ಚಿಂತನೆಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ನ. 19ರಂದು ಅವರ ಜನ್ಮದಿನದ ಅಂಗವಾಗಿ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಅಧಿಕಾರ ಸ್ವೀಕಾರ ಸಮಾರಂಭ ಆಯೋಜಿಸಲು ಪಕ್ಷ ನಿರ್ಧರಿಸಿದ್ದು, ರಾಜ್ಯಮಟ್ಟದ ನಾಯಕರನ್ನು ಆಹ್ವಾನಿಸುವ ಪ್ರಯತ್ನ ನಡೆ ಯುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಬಸವರಾಜ್ ಮಾತನಾಡಿ, ಶಿಬಿರ ಪಕ್ಷಾತೀತವಾಗಿ ಆಯೋಜಿ ಸಲಾಗಿದೆ. 60ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಗುರಿ ಹೊಂದಲಾಗಿದೆ ಎಂದರು.ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಸುಕೇಶ್ ಮಾತನಾಡಿ, ಇಂದಿರಾ ಗಾಂಧಿ ಸ್ಮರಣೆಯನ್ನು ಜನಪರ ಸೇವಾ ಕಾರ್ಯ ದ ಮೂಲಕ ಅರ್ಥಪೂರ್ಣಗೊಳಿಸುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ತನೋಜ್ ನಾಯ್ಡ್, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಸೇವಾದಳದ ಮಾಜಿ ಅಧ್ಯಕ್ಷ ಸಿಲ್ವರ್ ಸ್ಟಾರ್, ಸುನೀಲ್, ಮಧು, ಸಂತೋಷ್, ಕುಸುಮಾ ಭರತ್, ಶ್ರೀಕಾಂತ್, ರೂಬಿನ್ ಮೋಸೆಸ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್