ಹಿಂದೂ ಸಮಾಜ ಕಟ್ಟುತ್ತಿರುವ ಅಷ್ಟ ಮಠಾಧೀಶರು: ಯಶ್ಪಾಲ್ ಸುವರ್ಣ

KannadaprabhaNewsNetwork |  
Published : Oct 12, 2025, 01:02 AM IST
11ಪರ್ಯಾಯಬ್ರಹ್ಮಾವರದಲ್ಲಿ ಶಿರೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ಭಾವಿ ಪರ್ಯಾಯ ಶಿರೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿ ತಯಾರಿಗಳ ಬಗ್ಗೆ ಬ್ರಹ್ಮಾವರ ವಲಯದ ಸಭೆ ಶನಿವಾರ ಬ್ರಹ್ಮಾವರ ಉನ್ನತಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಭಾವಿ ಪರ್ಯಾಯ ಶಿರೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿ ತಯಾರಿಗಳ ಬಗ್ಗೆ ಬ್ರಹ್ಮಾವರ ವಲಯದ ಸಭೆ ಶನಿವಾರ ಬ್ರಹ್ಮಾವರ ಉನ್ನತಿ ಸಭಾಂಗಣದಲ್ಲಿ ನಡೆಯಿತು.ಪರ್ಯಾಯ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ಮಠದ ಸ್ವಾಮೀಜಿಗಳು ಕೃಷ್ಣನ ಪೂಜೆಯಲ್ಲದೆ ಹಿಂದೂ ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಶಿರೂರು ಮಠ ಹಿಂದಿನಿಂದಲೂ ಹಿಂದೂ ಸಮಾಜ ಕಟ್ಟಲು ಶ್ರಮಿಸಿದೆ. ಆದ್ದರಿಂದ ಶಿರೂರು ಮಠದ ಪರ್ಯಾಯ ಉಡುಪಿಯ ಜನತೆಯ ಪರ್ಯಾಯ ಆಗಬೇಕು ಮತ್ತು ನಾಡ ಹಬ್ಬದ ರೀತಿಯಲ್ಲಿ ಆಚರಿಸಬೇಕು ಹಾಗಾಗಿ ತಮ್ಮ ನಿಸ್ವಾರ್ಥ ಸಂಪೂರ್ಣ ಸಹಕಾರ ಅಗತ್ಯ ಎಂದರು.ಶಿರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ಮಾತನಾಡಿ, ಶಿರೂರು ಮಠದ ಪರ್ಯಾಯ ಸಂದರ್ಭದಲ್ಲಿ ಕೃಷ್ಣನ ಸೇವೆಗೆ ಎಲ್ಲರ ಪ್ರೀತಿಯ ಸಹಕಾರ ಅಗತ್ಯ. ನಮ್ಮ ಪರ್ಯಾಯವನ್ನು ಚಂದ ಮಾಡಲು ಹಿಂದೂ ಸಮಾಜ ಒಟ್ಟಾಗಿ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸಮಿತಿಯ ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಪ್ರಮುಖರಾದ ಉಮೇಶ್ ನಾಯ್ಕ್, ರಾಜೀವ್ ಕುಲಾಲ್, ಸಂದೀಪ್ ಮಂಜ, ಮೋಹನ್ ಭಟ್, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.ಕಮಲಾಕ್ಷ ಹೆಬ್ಬಾರ್ ನಿರೂಪಿಸಿದರು. ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿದರು. ನಳಿನಿ ಪ್ರದೀಪ್ ರಾವ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು