ಶಿವ ಶರಣೆ ಮಲ್ಲಮ್ಮಳ ಸಂಸಾರದ ಬದುಕು ಇಂದಿಗೂ ಪ್ರಸ್ತುತ: ಸಂಸದ ಡಾ.ಉಮೇಶ ಜಾಧವ ಅಭಿಮತ

KannadaprabhaNewsNetwork |  
Published : May 04, 2025, 01:32 AM IST
                          -೦- ಪೋಟೊ: ಕಾಳಗಿ ಫೋಟೋಕಾಳಗಿ ತಾಲೂಕಿನ ಗೋಟುರ ಗ್ರಾಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮವನ್ನು ಮಾಜಿ ಸಂಸದ ಉಮೇಶ್ ಜಾಧವ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಭರಮರೆಡ್ಡಿ ಅವರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ವಿವಾಹವಾಗಿ ಪತಿಯ ಮುಗ್ದತೆ ಸಾಧು ಸ್ವಭಾವನ್ನು ಅರಿತು, ಸಂಸಾರದಲ್ಲಿ ರೆಡ್ಡಿಯನ್ನು ದೇವರಂತೆ ಉಪಚರಿಸಿ ಪ್ರತಿಯೊಂದು ಕ್ಷಣಕ್ಕೂ ಸನ್ಮಾರ್ಗದತ್ತ ಕೊಂಡ್ಯೊಯ್ದ ಶಿವ ಶರಣೆ ಮಲ್ಲಮ್ಮಳ ಸಂಸಾರದ ಬದುಕು ಇಂದಿಗೂ ಪ್ರಸ್ತುತವಾಗಿದೆ ಎಂದು ಕಲಬುರಗಿ ಮಾಜಿ ಸಂಸದ ಡಾ.ಉಮೇಶ ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಳಗಿ

ಭರಮರೆಡ್ಡಿ ಅವರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ವಿವಾಹವಾಗಿ ಪತಿಯ ಮುಗ್ದತೆ ಸಾಧು ಸ್ವಭಾವನ್ನು ಅರಿತು, ಸಂಸಾರದಲ್ಲಿ ರೆಡ್ಡಿಯನ್ನು ದೇವರಂತೆ ಉಪಚರಿಸಿ ಪ್ರತಿಯೊಂದು ಕ್ಷಣಕ್ಕೂ ಸನ್ಮಾರ್ಗದತ್ತ ಕೊಂಡ್ಯೊಯ್ದ ಶಿವ ಶರಣೆ ಮಲ್ಲಮ್ಮಳ ಸಂಸಾರದ ಬದುಕು ಇಂದಿಗೂ ಪ್ರಸ್ತುತವಾಗಿದೆ ಎಂದು ಕಲಬುರಗಿ ಮಾಜಿ ಸಂಸದ ಡಾ.ಉಮೇಶ ಜಾಧವ ಹೇಳಿದರು.

ಕಾಳಗಿ ತಾಲೂಕಿನ ಗೋಟುರ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ 12 ದಿನಗಳ ಪರ್ಯಂತ ನಡೆಯುವ ಬಸವ ಚರಿತಾಮೃತ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೋಸಳ್ಳಿ ಹಿರೇಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರು ಆರ್ಶಿವಚನ ನೀಡಿದ ಅವರು, ದೇವಸ್ಥಾನದ ಅಧ್ಯಕ್ಷ ರಾಮ ಪಾಟೀಲರವರು ಮುತುವರ್ಜಿ ವಹಿಸಿ ಗೋಟುರ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಿಸಿರುವುದು ಗ್ರಾಮದ ಜನತೆಯ ಸೌಭಾಗ್ಯವೇ ಸರಿ. ಅದರಲ್ಲಿ ನಾಡಿನ ಪ್ರಖ್ಯಾತ ಪ್ರವಚನ ಯೋಗಿ ತಿಮ್ಮಾಪುರ ಮುದಗಲ ಶ್ರೀ ಮಠದ ಡಾ।ಮಹಾಂತಸ್ವಾಮಿಗಳ ವಾಕ್ಯ ರಚನೆಯಲ್ಲಿ ಮೂಡಿ ಬರುವ ಬಸವ ಚರಿತಾಮೃತ ಪುರಾಣ ಕೇಳಲು ಭಕ್ತರ ಭಾಗ್ಯಕ್ಕೆ ಪಾರವೇ ಇಲ್ಲ ಎಂದು ಹೇಳಿದರು.

ಭರತನೂರ ವಿರಕ್ತ ಮಠದ ಪೂಜ್ಯ ಚಿಕ್ಕಗುರುನಂಜೇಶ್ವರ ಸ್ವಾಮಿಜಿ, ಅಣೀವೀರಭದ್ರೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಧನಂಜಯ ಹಿರೇಮಠ, ಅರವಿಂದ ಚವ್ಹಾಣ, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅದ್ಯಕ್ಷ ರಾಮನಗೌಡ ಪಾಟೀಲ, ಮುರುಘಯ್ಯ ಭರತನೂರ, ಗ್ರಾಪಂ ಅಧ್ಯಕ್ಷ ಶಿವಕುಮಾರ ಕಮಕನೂರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ, ಭೂದಾನಿ ಶಿವಶರಣಪ್ಪ ಕಮಲಾಪುರ, ಮಲ್ಲಿನಾಥ ಪಾಟೀಲ, ಪರಮೇಶ್ವರ ಮಡಿವಾಳ, ಗೋವಿಂದರೆಡ್ಡಿ ರಾಜಾಪುರ, ಪ್ರಕಾಶರೆಡ್ಡಿ ರಾಜಾಪುರ, ಪ್ರಭು ಭಾವಿ, ಕಾಮರೆಡ್ಡಿ, ಅಮೃತರೆಡ್ಡಿ‌ ಕೋಡ್ಲಿ, ಮಹೇಶ ಶೇಗಾಂವಕರ, ರಾಮರೆಡ್ಡಿ ಪಾಟೀಲ, ಬಸರೆಡ್ಡಿ ಹೋಸಳ್ಳಿ, ಮಲ್ಲಿಕಾರ್ಜುನ ರೆಡ್ಡಿ ಕೋಡ್ಲಾ, ಶರಣಯ್ಯ ಸ್ವಾಮಿ ಮುದನೂರ ಇದ್ದರು. ಹುಬ್ಬಳ್ಳಿ ಶಂಕರಯ್ಯ ಸ್ವಾಮಿ ಪ್ರಾರ್ಥಿಸಿದರು. ಬಸವರಾಜ ಹೊನ್ನಿಗನ್ನೂರ ತಬಲಾ ಸೇವೆ, ರವಿಕುಮಾರ ಮೈಸೂರು ವಯೋಲಿನ ಸಲ್ಲಿಸಿದರು. ಶಿಕ್ಷಕ ಸಿದ್ದಾರೆಡ್ಡಿ ಭರತನೂರ ನೀರುಪಿಸಿ ವಂದಿಸಿದರು.

...................

ಕಾಳಗಿ ತಾಲೂಕಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಿರ್ಮಾಣವಾಗಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಗೊಟುರ ಗ್ರಾಮದ ಭಕ್ತರ ಸುದೈವ. ಭರತನೂರ ವಿರಕ್ತ ಮಠದ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 8 ಗಂಟೆಗೆ ಮುದಗಲ ಮಹಾಂತ ಪೂಜ್ಯರು ವಾಚಿಸುವ ಬಸವ ಪುರಾಣವನ್ನು ಆಲಿಸಲು ತಾಲೂಕಿನ ಭಕ್ತರೆಲ್ಲರು ಆಗಮಿಸಿ ಸದುಪಯೋಗ ಪಡೆದು ಪ್ರಸಾದ ಸ್ವೀಕರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರಿ.

ರಾಮನಗೌಡ ಪಾಟೀಲ ಗೋಟುರ, ದೇವಸ್ಥಾನ ಸಮಿತಿ ಅಧ್ಯಕ್ಷ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ