ಹುಲ್ಲಹಳ್ಳಿ: ನಮ್ಮ ದೇಶಕ್ಕೆ ಎರಡು ಕಣ್ಣುಗಳೆಂದರೆ ಒಬ್ಬರೈತ ಹಾಗೂ ಮತ್ತೊಬ್ಬ ನಮ್ಮ ದೇಶ ಕಾಯುವ ಸೈನಿಕರು ಎಂದು ಕಂತೆ ಮಾದೇಶ್ವರ ಬೆಟ್ಟದ ಶೀಲಾ ಮಠಾಧ್ಯಕ್ಷರಾದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ರೈತರು ಕಷ್ಟಪಟ್ಟು ದುಡಿದರೂ ಅವರಿಗೆ ಸರಿಯಾದ ನ್ಯಾಯಯುತವಾದ ಬೆಲೆಗಳು ಸಿಗುತ್ತಿಲ್ಲ, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಇಂದು ರೈತರ ಮಕ್ಕಳಿಗೆ ಹೆಣ್ಣನ್ನು ಕೊಡಲು ಹಿಂಜರಿಯುತ್ತಿದ್ದಾರೆ. ರೈತರ ಮಕ್ಕಳು ಎಂದರೆ ತಂದೆ ತಾಯಿಗಳು ತಮ್ಮ ಹೆಣ್ಣು ಮಕ್ಕಳನ್ನು ಕೊಡಲು ಇಷ್ಟಪಡುತ್ತಿಲ್ಲ ಎಂದರು. ರೈತರ ಸಮಸ್ಯೆಗಳು ಹಾಗೂ ಬದುಕಿನ ಬಗ್ಗೆ ಜಾಗೃತಿ ಮೂಡಿಸಿದರು.
ಸಾಮೂಹಿಕ ನಾಯಕತ್ವ ಜಿಲ್ಲಾ ಮಂಡಳಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸಾಮೂಹಿಕ ನಾಯಕತ್ವ ಎಂದರೆ ಎಲ್ಲರೂ ನಾಯಕರೇ ಎಂದರ್ಥ, ಮೊದಲು ನಾವುಗಳು ರೈತರು ಒಗ್ಗಟ್ಟನ್ನು ತೋರಿಸಬೇಕು, ಯಾವುದೇ ಭಿನ್ನಾಭಿಪ್ರಾಯಗಳು ಇರಬಾರದು, ರೈತರು ಸಂಘಟಿತರಾಗುವ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವ ಜತೆಗೆ ತಮ್ಮ ಬೆಳೆಗಳಿಗೆ ನ್ಯಾಯಯುತವಾದ ಬೆಲೆಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಮುಂದಾಗಬೇಕು ಎಂದರು.ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಂಜು ಕಿರಣ್, ಮಂಡಳಿ ಅಧ್ಯಕ್ಷ ಪಾಪಣ್ಣ, ಮಹೇಶ್, ಬಸವಣ್ಣ, ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷ ಚನ್ನಪ್ಪಾಜಿ ನಾಯಕ, ಗೌಡಿಕೆ ಶಿವಕುಮಾರ್, ಕೇಟಿ ನಟರಾಜು, ರಾಜನ ಸಿದ್ದಯ್ಯ, ಟಿ.ಎಂ. ಬಸವರಾಜಪ್ಪ, ಶಿವಕುಮಾರ್, ರಾಜೇಂದ್ರ, ಮಹದೇವ ಪ್ರಸಾದ್, ಶಿವಣ್ಣ, ಬಸವಣ್ಣ, ರತ್ನಮ್ಮ, ರಾಣಿ ಹಾಗೂ ತರಗನಹಳ್ಳಿ ಗ್ರಾಮಸ್ಥರು ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ರೈತರ ಮುಖಂಡರು ಇದ್ದರು.