ಹಬ್ಬ ಸಹೋದರತ್ವ, ಸಾಂಸ್ಕೃತಿಕ ಪರಂಪರೆಯ ಪ್ರತೀಕ: ಶಾಂತಲಿಂಗ ಶ್ರೀ

KannadaprabhaNewsNetwork |  
Published : Oct 12, 2026, 02:00 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಹಬ್ಬಗಳ ಮೂಲ ಆಶಯವನ್ನು ಅರಿತು, ಅವುಗಳ ಪಾವಿತ್ರ್ಯವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಸಂಸ್ಕಾರ ನೀಡಬೇಕು.

ಜೀವನ ದರ್ಶನ 63ನೇ ಮಾಲಿಕೆ ಹಾಗೂ ಕಾಶಿ ವಿಶ್ವನಾಥನ ಪಾಲಕಿ ಸೇವೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಗದಗ

ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ಮಾನವೀಯ ಮೌಲ್ಯ, ಸಹೋದರತ್ವ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಹಬ್ಬಗಳ ಮೂಲ ಆಶಯವನ್ನು ಅರಿತು, ಅವುಗಳ ಪಾವಿತ್ರ್ಯವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಸಂಸ್ಕಾರ ನೀಡಬೇಕು ಎಂದು ಶಿರೋಳ ಭೈರನಹಟ್ಟಿಯ ತೋಂಟದಾರ್ಯ ಮಠ ಹಾಗೂ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಗದಗ ನಗರದ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಏರ್ಪಡಿಸಿದ್ದ ಜೀವನ ದರ್ಶನ 63ನೇ ಮಾಲಿಕೆ ಹಾಗೂ ಕಾಶಿ ವಿಶ್ವನಾಥನ ಪಾಲಕಿ ಸೇವೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

12ನೇ ಶತಮಾನದ ಬಸವಾದಿ ಶಿವಶರಣರು ವಚನಗಳ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಸರ್ವರ ಕಲ್ಯಾಣದ ಸಂದೇಶ ಸಾರಿದರು. ಮಹಿಳೆಯರಿಗೆ ಗೌರವಯುತ ಸ್ಥಾನ ಕಲ್ಪಿಸಿ, ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು. ಅಕ್ಕಮಹಾದೇವಿ, ಮುಕ್ತಾಯಕ್ಕ ಸೇರಿದಂತೆ ಶರಣೆಯರ ವಚನಗಳು ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿವೆ. ಶರಣರ ಸಮಾನತೆಯ ಆಶಯಗಳು ಸಂವಿಧಾನದ ಮೌಲ್ಯಗಳೊಂದಿಗೂ ಸಾಮ್ಯ ಹೊಂದಿವೆ ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಮಹಿಳೆಯರು ಮತ್ತು ಹಬ್ಬದ ದಿನಗಳು ವಿಷಯವಾಗಿ ಮಾತನಾಡಿದರು. ಇದೇ ಸಂದರ್ಭ ಸಹಕಾರ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಸಿ.ಕೆ. ಮಾಳಶೆಟ್ಟಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಮೇಶ ಚಲವಾದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತರಾದ ಮಾಳಶೆಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ನಿವೃತ್ತ ತಹಶೀಲ್ದಾರ್ ಎ.ಟಿ. ನರೇಗಲ್ಲ ಸಮಿತಿಯ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಪ್ರಸಾದ ಸೇವೆ ವಹಿಸಿಕೊಂಡಿದ್ದ ಗದಗ-ಬೆಟಗೇರಿ ನಗರಸಭೆಯ ನಿವೃತ್ತ ಪೌರಾಯುಕ್ತ ಜಗದೀಶ್ಚಂದ್ರ ನಾಡಗೌಡರ, ನಿವೃತ್ತ ಶಿಕ್ಷಕ ದೇವೇಂದ್ರಪ್ಪ ಅಂಗಡಿ, ನಿವೃತ್ತ ನೌಕರ ಜಿ.ವಿ. ಇಟಗಿ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿ.ಬಿ. ತಿರ್ಲಾಪೂರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ವಿಶಾಲಾಕ್ಷಿ ಕಲ್ಲನಗೌಡ್ರ ಪ್ರಾರ್ಥಿಸಿದರು, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಸ್ವಾಗತಿಸಿ ಪರಿಚಯಿಸಿದರು. ಬಿ.ಎಚ್. ಗರಡಿಮನಿ ನಿರೂಪಿಸಿದರು, ಸಂಗೀತಾ ಕುರಿ ವಂದಿಸಿದರು. ಸುದರ್ಶನ ಹಾನಗಲ್ಲ, ಎಸ್.ಎಸ್. ಪಾಳೇಗಾರ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ಎಸ್.ಎಸ್. ಪಾಟೀಲ, ಪ್ರಾ. ವಿ.ವೈ. ಮಕ್ಕಣ್ಣವರ, ಡಾ. ಎಂ.ಎನ್. ಕಾಮನಹಳ್ಳಿ, ಡಾ.ಎಸ್.ಎನ್. ವೆಂಕಟಾಪೂರ, ಕೆ.ಬಿ. ಕೊಣ್ಣೂರ, ಪ್ರೇಮಾ ಗುಳಗೌಡ್ರ, ಪುಷ್ಪಾ ಭಂಡಾರಿ, ಕವಿತಾ ಹಾದಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಶೆ ಮುಕ್ತ ಜೀವನ ಅಳವಡಿಸಿಕೊಳ್ಳಿ: ವೀಣಾ
ಕಾಂಗ್ರೆಸ್ಸಿಗೆ ಪಾಠ ಕಲಿಸಲು ಸಕಾಲ: ಜೋಶಿ