ಶೋಷಿತ ಸಮುದಾಯದ ಅನುಭವಗಳ ದ್ರವ್ಯ ಮೊದಲ ಜೋಡು

KannadaprabhaNewsNetwork |  
Published : Sep 07, 2025, 01:00 AM IST
ಸಾಹಿತಿ ಬಂಜಗೆರೆಜಯಪ್ರಕಾಶ್ ಹೇಳಿದರು.ನಗರದರೋಟರಿಭವನದಲ್ಲಿ ಬೆಂಗಳೂರು ಒನ್ ವೀಲರ್ ಪ್ರಕಾಶನ, ರೋಟರಿಸಂಸ್ಥೆ ಸಹಯೋಗದಲ್ಲಿ ಕಥೆಗಾರ ಮಧುಕರ ಮಳವಳ್ಳಿ ಅವರ’ ಮೊದಲಜೋಡು’ ಕಥಾಸಂಕಲನವನ್ನು ಲೋಕಾರ್ಪಣೆ ಮಾಡಿ | Kannada Prabha

ಸಾರಾಂಶ

ಲಿತ, ಅಲ್ಪಸಂಖ್ಯಾತ, ಹಿಂದುಳಿದವರು, ಪರಿಶಿಷ್ಟ ರ್ಗಗಳ ಒಳಗಿರುವ ನೋವುಗಳನ್ನು ಚಿತ್ರಿಸಿರುವ ’ಮೊದಲಜೋಡು’ ಕಥಾಸಂಕಲನ ನೊಂದ ಸಮುದಾಯಗಳ ಅನುಭವಗಳ ದ್ರವ್ಯ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ದಲಿತ, ಅಲ್ಪಸಂಖ್ಯಾತ, ಹಿಂದುಳಿದವರು, ಪರಿಶಿಷ್ಟ ರ್ಗಗಳ ಒಳಗಿರುವ ನೋವುಗಳನ್ನು ಚಿತ್ರಿಸಿರುವ ’ಮೊದಲಜೋಡು’ ಕಥಾಸಂಕಲನ ನೊಂದ ಸಮುದಾಯಗಳ ಅನುಭವಗಳ ದ್ರವ್ಯ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಬೆಂಗಳೂರು ಒನ್ ವೀಲರ್ ಪ್ರಕಾಶನ, ರೋಟರಿ ಸಂಸ್ಥೆ ಸಹಯೋಗದಲ್ಲಿ ಕಥೆಗಾರ ಮಧುಕರ ಮಳವಳ್ಳಿ ಅವರ’ ಮೊದಲಜೋಡು’ ಕಥಾಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಮರಾಠಿ ಸಾಹಿತ್ಯದಲ್ಲಿ ೫೦ ವರ್ಷಗಳ ಹಿಂದೆ ೨ ದಲಿತ ಆತ್ಮಕಥನಗಳು ಪ್ರಕಟಗೊಂಡವು. ಆ ಸಂದರ್ಭದಲ್ಲಿ ದೇಶಾದ್ಯಂತ ಪ್ರಶಂಸೆಗಳು ವ್ಯಕ್ತವಾದವು. ಕುವೆಂಪು ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು ಕಾದಂಬರಿ ಪ್ರಕಟವಾಗುವವರಗೆ ದಲಿತ ಸಮುದಾಯದಲ್ಲಿ ಒಂದು ರೀತಿಯ ಮೌನ ಆವರಿಸಿತ್ತು, ದೇವನೂರು ಮಹಾದೇವ, ಸಿದ್ದಲಿಂಗಯ್ಯ ಅವರ ಕಿರುಬೆರಳಿನಿಂದ ಮೂಡಿಬಂದ ಬರಹಗಳು ದಲಿತ ಸಮುದಾಯದಲ್ಲಿ ಸಂಚಲನ ಉಂಟು ಮಾಡಿದವುಎಂದರು.

ಮಧುಕರ ಮಳವಳ್ಳಿ ಅವರ’ ಮೊದಲ ಜೋಡು’ ಕಥಾಸಂಕಲನದಲ್ಲಿ ೧೦ ಕವಿತೆಗಳಿದ್ದು, ೨ ಕವಿತೆಗಳು ಸುಖಾಂತ್ಯವಾಗಿ ಕೊನೆಗೊಳ್ಳಲಿವೆ. ಮೊದಲು ಜೋಡಿನಿಂದ ಆರಂಭವಾಗುವ ಕಥಾಸಂಕಲನ ಬೂಟು ಹಾಕುವರೆಗೆ ಕೊನೆಯಾಗಲಿದೆ.

ಜೋಡುಮೆಟ್ಟಿದಾಗ ಸಹಿಸುವ ಸ್ಥಿತಿ, ಜೋಡಿನಿಂದ ಬೂಟುಹಾಕಿದಾಗ ನೋಡಿ, ಸಹಿಸುವ ಜನರ ಮನಸ್ಥಿತಿ ದಲಿತರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದರ ಆತ್ಮಾವಲೋಕನ ಇಂದಿನ ಅಗತ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಹೊಸ ಹೊಸ ಸಾಹಿತಿಗಳು ಬರುತ್ತಿದ್ದು, ಹೊಸ ಸಾಹಿತಿಗಳ ಹೊಸ ನೀರು, ಕನ್ನಡ ಸಾಹಿತ್ಯವನ್ನು ವಿಸ್ತಾರಗೊಳಿಸುತ್ತಿವೆ, ಅದರಲ್ಲೂ ಶೇ. ೭೫ಕ್ಕೂ ಹೆಚ್ಚು ಶೋಷಿತರ, ನೊಂದವರ ಧ್ವನಿಯಾಗಿ ಅವರ ಅವರ ನೋವು ನಲಿವುಗಳುಳ್ಳ ಸಾಹಿತ್ಯ ಹೊರ ಬರುತ್ತಿರುವುದು ಹೆಮ್ಮೆಯ ವಿಷಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸದಾಗಿ ಸಾಹಿತ್ಯ ಬರೆಯುವವರ ಸಂಖ್ಯೆ ಹೆಚ್ಚಾಗಬೇಕು, ಅವರು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಬೇಕು ಎಂದರು.ಜಿಲ್ಲಾ ಉತ್ಸವ ಆಯೋಜಿಸಿ ಚಾಮರಾಜನಗರಜಿಲ್ಲೆ ಸಾಂಸ್ಕೃತಿಕವಾಗಿ ಜಾನಪದಕಲೆಗಳಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಮಂಟೇಸ್ವಾಮಿ, ಮಹದೇಶ್ವರ ಕಾವ್ಯ ಜಿಲ್ಲೆಯ ಅಸ್ಮಿತೆಯಾಗಿವೆ, ಆ ನಿಟ್ಟಿನಲ್ಲಿ ರಾಜ್ಯಸರ್ಕಾರ ಮುಂದಿನ ದಿನಗಳಲ್ಲಿ ಜಿಲ್ಲಾ ಉತ್ಸವ ಆಯೋಜನೆ ಮಾಡಬೇಕು, ಜಿಲ್ಲಾ ಉಸ್ತುವಾರಿ ಸಚಿವರು ,ಶಾಸಕರು ಸರ್ಕಾರದ ಗಮನಸೆಳೆಯಬೇಕು ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.

ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಸ್ವಾಮಿಪೊನ್ನಾಚಿ ಮಾತನಾಡಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಸಾಹಿತಿಗಳು ಬರೆದ ೬ ಕೃತಿಗಳು ಚಾಮರಾಜನಗರ ಸೇರಿದಂತೆ ಮೈಸೂರಿನಲ್ಲಿ ಲೋಕಾರ್ಪಣೆಯಾಗಿವೆ. ಚಾಮರಾಜನಗರದಲ್ಲಿ ಸಾಹಿತ್ಯದ ಸುಗ್ಗಿಯೇ ಆರಂಭವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಹಿತಿ ಕೆ.ವೆಂಕಟರಾಜು ಮಾತನಾಡಿದರು. ಕೃಷ್ಣಮೂರ್ತಿ, ಗುರುರಾಜು ತಂಡದವರು ಜಾಗೃತಿಗೀತೆಗಳನ್ನು ಹಾಡಿದರು. ರೋಟರಿ ಅಧ್ಯಕ್ಷ ಕಾಗಲವಾಡಿಚಂದ್ರು, ಕಾರ್ಯದರ್ಶಿ ಸಿದ್ದರಾಜು, ಸಾಹಿತಿ ರವಿಕುಮಾರ್ ಬಾಗೆ, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಕಥೆಗಾರ ಮಧುಕರ ಮಳವಳ್ಳಿ ಭಾಗವಹಿಸಿದ್ದರು.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500