ಬಸವಪುತ್ಥಳಿ ವಿಚಾರದಲ್ಲಿ ಜಿಲ್ಲಾಡಳಿತದ ಬೊಂಬಾಟ್ ಗೇಮ್ !

KannadaprabhaNewsNetwork | Published : Oct 9, 2024 1:33 AM

ಸಾರಾಂಶ

The game of the district administration in Basavaputthali!

-ಹಣ ದುರುಪಯೋಗ ವರದಿ ಮುಚ್ಚಿಡಲು ಜಿಲ್ಲಾಡಳಿತ ಪ್ಲಾನ್ । ಪರಿಶೀಲನೆ ಮುಗಿದು ಆರು ತಿಂಗಳಾದರೂ ದೂರುದಾರರ ಕೈಗೆ ತಲುಪದ ವರದಿ

----

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಬಸವಕೇಂದ್ರ ಮುರುಘಾ ಮಠದಿಂದ ನಿರ್ಮಿಸಲಾಗುತ್ತಿರುವ 323 ಅಡಿ ಎತ್ತರದ ಬಸವ ಪುತ್ಥಳಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಬಳಕೆಗೆ ಸಂಬಂಧಿಸಿದಂತೆ ಸಿದ್ದಪಡಿಸಲಾದ ಪರಿಶೀಲನಾ ವರದಿ ಮುಚ್ಚಿಡಲು ಜಿಲ್ಲಾಡಳಿತ ಯತ್ನಿಸುತ್ತಿದೆಯೇ? ಇಲ್ಲವೇ ಯಾವುದಾದರೂ ಹೊಸ ಗೇಮ್ ಶುರು ಮಾಡಲು ಮುಂದಾಗಿದೆಯೇ?

ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿರುವ ಈ ವೇಳೆ ಇಂತಹದೊಂದು ಅನುಮಾನ ಮಾಡಿದ್ದು ಜಿಲ್ಲಾಡಳಿತದ ನಡೆಗಳ ವಿಮರ್ಶಿಸುವಂತಾಗಿದೆ. ಬಸವಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಳಕೆ ಕುರಿತ ಪರಿಶೀಲನಾ ವರದಿ ಸಿದ್ದವಾಗಿ ಆರು ತಿಂಗಳಾಗಿದ್ದರೂ ಅತ್ತ ಸರ್ಕಾರಕ್ಕೂ ಸಲ್ಲಿಕೆಯಾಗಿಲ್ಲ, ಇತ್ತ ದೂರುದಾರರ ಕೈಗೂ ನೀಡಲಾಗಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಳೆಯುತ್ತಾ ಕುಳಿತಿದೆ.....ಬಾಕ್ಸ್‌......

ಏನಿದು ಪರಿಶೀಲನಾ ವರದಿ

ಮುರುಘಾಮಠದಿಂದ ನಿರ್ಮಿಸಲಾಗುತ್ತಿರುವ 323 ಅಡಿ ಎತ್ತರದ ಬಸವ ಪುತ್ಥಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ 35 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ. ಇದಲ್ಲದೇ ಖಾಸಗಿ ವಲಯದಿಂದಲೂ ದೇಣಿಗೆ ಹರಿದು ಬಂದಿದೆ. ಅನುದಾನ ಬಿಡುಗಡೆಗೂ ಅಲ್ಲಿ ಆಗಿರುವ ಕಾಮಗಾರಿಗೆ ತಾಳೆಯಾಗುತ್ತಿಲ್ಲವೆಂಬ ಗಂಭೀರ ಅಂಶವ ಮುಂದಿಟ್ಟುಕೊಂಡು ಮಾಜಿ ಸಚಿವ ಹೆಚ್.ಏಕಾಂತಯ್ಯ ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ದೂರು ನೀಡಿ ವಾಸ್ತವಾಂಶದ ವರದಿ ನೀಡುವಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪರಿಶೀಲನಾ ತಂಡ(ಉಪ ಸಮಿತಿ) ರಚಿಸಿ ತಿಂಗಳೊಳಗೆ ವರದಿ ನೀಡುವಂತೆ ತಾಕೀತು ಮಾಡಿದ್ದರು.

-----

ಆರಂಭದಲ್ಲಿ ನೂರು ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಕೋರಿ ಸಲ್ಲಿಸಾದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿತ್ತು. ಇಷ್ಟೇ ಅಡಿ ಎತ್ತರದ ಬಸವಪುತ್ಥಳಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಪುತ್ಥಳಿ ಎತ್ತರವನ್ನು ನೂರರಿಂದ 323 ಅಡಿಗೆ ಎತ್ತರಿಸಲಾಗಿತ್ತು. 323 ಅಡಿ ಎತ್ತರದ ಪುತ್ಥಳಿಗೆ ಕನಿಷ್ಟವೆಂದರೂ 1500 ಕೋಟಿಗೂ ಹೆಚ್ಚು ಮೊತ್ತಬೇಕಾಗಿತ್ತು. ಇಷ್ಟೊದು ದುಬಾರಿ ಪುತ್ಥಳಿ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ನೈಜ ಪ್ರಸ್ತಾಪಗಳು ಕಂಡಿರಲಿಲ್ಲ. ಸರ್ಕಾರ ಕೂಡಾ ಪರಿಶೀಲಿಸುವ ಉಸಾಬರಿಗೆ ಹೋಗದೆ ಅನುದಾನ ಬಿಡುಗಡೆ ಮಾಡಿತ್ತು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದ ತಂಡ ಕಾಮಗಾರಿಯ ಭೌತಿಕ ಹಾಗೂ ಆರ್ಥಿಕ ಅಂಶ ಹಾಗೂ ಅನುದಾನ ಬಿಡುಗಡೆ ಪ್ರಮಾಣ ಎಲ್ಲವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿತ್ತು. ರು. 24.50 ಕೋಟಿ ವೆಚ್ಚಕ್ಕೆ ನಂಬಲರ್ಹ ದಾಖಲೆಗಳಿಲ್ಲ ಎಂಬ ಸಂಗತಿ ಮೇ.7, 2024 ರಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಲ್ಲಿಸಲಾದ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರು. ಸಾಲದೆಂಬಂತೆ ಬಸವಪುತ್ಥಳಿ ಅನುದಾನ ಬಳಕೆ ಸರ್ಕಾರದಿಂದಲೇ ಸಮಗ್ರ ತನಿಖೆ ಮಾಡಬೇಕೆಂಬ ಶಿಪಾರಸು ಕೂಡಾ ವರದಿ ಒಳಗೊಂಡಿತ್ತು. ಈ ಸಂಬಂಧ ಕನ್ನಡಪ್ರಭ ತನ್ನ ಸರಣಿ ವರದಿ(ಬಸವಪುತ್ಥಳಿ ಪುರಾಣ)ಯಲ್ಲಿ ವ್ಯಕ್ತಪಡಿಸಿದ ಎಲ್ಲ ಅನುಮಾನಗಳ ಉಪ ಸಮಿತಿ ವರದಿ ಪುಷ್ಟೀಕರಿಸಿದಂತಿತ್ತು.

375 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೇಕಾದ 280.20 ಕೋಟಿ ಅಂದಾಜು ವೆಚ್ಚಕ್ಕೆ ಸರ್ಕಾರ ನೀಡಿದ 35 ಕೋಟಿ ರುಪಾಯಿ ಹೊರತಾಗಿ ಬೇರೆ ಅನುದಾನ ಕ್ರೋಡೀಕರಣಕ್ಕೆ ಮುರುಘಾಮಠದ ಬಳಿ ಯೋಜನೆಗಳಿಲ್ಲ. ಪ್ರಯತ್ನ ಕೂಡಾ ಮಾಡಲಾಗಿಲ್ಲ. ಉಳಿಕೆ 240.20 ಕೋಟಿ ರುಪಾಯಿ ಅನುದಾನ ಲಭ್ಯತೆ ಮಠದ ಬಳಿ ಇಲ್ಲ. ಸರ್ಕಾರದ ಅನುದಾನ ಬ್ಯಾಕ್ ಎಂಡ್ ಪಾವತಿಗಾಗಿ ಕಾಯ್ದಿರಿಸದೆ ಆರಂಭಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ಸರ್ಕಾರದ ಅನುದಾನ Unfruitful(ಫಲಪ್ರದವಾಗದ) ಎಂದು ಪರಿಗಣಿಸಬಹುದಾಗಿದೆ ಎಂಬ ಅಂಶವ ವರದಿಯಲ್ಲಿ ಪ್ರಧಾನವಾಗಿ ಬಿಂಬಿಸಲಾಗಿದೆ.

ಬಸವಪುತ್ಥಳಿ ಅನುದಾನ ಪರಿಶೀಲಿಸಿ ವರದಿ ನೀಡವಂತೆ ಮಾಜಿ ಸಚಿವ ಹೆಚ್.ಏಕಾಂತಯ್ಯ ನೀಡಿದ ದೂರಿನನ್ವಯವೇ ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಉಪ ಸಮಿತಿ ರಚಿಸಿದ್ದರು. ಆದರೆ, ಈ ಉಪ ಸಮಿತಿ ವರದಿಯ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರೂ ಇದುವರೆಗೂ ದೂರುದಾರ ಹೆಚ್.ಏಕಾಂತಯ್ಯ ಅವರಿಗೆ ನೀಡಲಾಗಿಲ್ಲ. ಹಾಗಾಗಿ, ಜಿಲ್ಲಾಡಳಿತದ ನಡೆಯ ಅನುಮಾನದಲ್ಲಿ ನೋಡುವಂತಾಗಿದೆ.

----------

ಪೋಟೋ ಕ್ಯಾಪ್ಷನ್‌

ಚಿತ್ರದುರ್ಗ ಮುರುಘಾಮಮಠದ ಹಿಂಭಾಗ ಬಸವ ಪುತ್ಥಳಿ ನಿರ್ಮಾಣದ ಪಾದದ ಕುರುಹುಗಳು.

--------

ಫೋಟೋ ಫೈಲ್ ನೇಮ್-8 ಸಿಟಿಡಿ1.......ಕೋಟ್‌.......

ಬಸವ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಬಳಕೆ, ಕಾಮಗಾರಿಪ್ರಗತಿ ಕುರಿತಂತೆ ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಪತ್ರ ಬರೆದು ವಾಸ್ತವಾಂಶದ ವರದಿ ಕೋರಿದೆ. ಪತ್ರ ಬರೆದು ಆರು ತಿಂಗಳಾಗುತ್ತಾ ಬಂದರೂ ಇದವರೆಗೂ ನನ್ನ ಕೈಗೆ ವರದಿ ತಲುಪಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ನೆನಪಿನೋಲೆ ಕೂಡಾ ಬರೆದಿದ್ದೇನೆ.

-ಹೆಚ್. ಏಕಾಂತಯ್ಯ, ಮಾಜಿ ಸಚಿವ (ಫೈಲ್ ನೇಮ್-ಏಕಾಂತಯ್ಯ)

Share this article