ಬೀರೂರು:ಕಡೂರು ತಾಲೂಕಿನ ನಿಡಗಟ್ಟ ಗ್ರಾಮದ ಆರಾಧ್ಯದೈವ ಶ್ರೀ ಸೀತಾರಾಮ ಆಂಜನೇಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾ ಧಿಗಳ ಸಮ್ಮುಖದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
₹1.7ಕೋಟಿ ವೆಚ್ಚದ ನೂತನ 43 ಅಡಿ ಎತ್ತರದ ನೂತನ ತೇರಲ್ಲಿ ಉತ್ಸವಕನ್ನಡಪ್ರಭ ವಾರ್ತೆ, ಬೀರೂರು:ಕಡೂರು ತಾಲೂಕಿನ ನಿಡಗಟ್ಟ ಗ್ರಾಮದ ಆರಾಧ್ಯದೈವ ಶ್ರೀ ಸೀತಾರಾಮ ಆಂಜನೇಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾ ಧಿಗಳ ಸಮ್ಮುಖದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.ನಿಡಗಟ್ಟದ ಆಂಜನೇಯನೆಂದರೆ ತಾಲೂಕು ಹಾಗೂ ರಾಜ್ಯದಲ್ಲೇ ಭಕ್ತರ ಕಷ್ಟ ಈಡೇರಿಸಕೆ ಹೆಸರಾದ ದೇಗುಲದದಲ್ಲಿ ಕಳೆದ ರಾಮನವಮಿಯಂದು ಆರಂಭವಾದ ಜಾತ್ರೋತ್ಸವ ಕಳೆದ ಮಾ.28ರಂದು ಪಂಚಾಮೃತಾ ಭಿಷೇಕ, ಪುಣ್ಯಾಹ ದೇವತಾ ಪ್ರಾರ್ಥನೆ, ಮೃತಿಕ ಸಂಗ್ರಹಣೆ ಅಂಕುರಾರ್ಪಣೆ ನಡೆದವು.ಮಾ.30ರ ಸೋಮವಾರ ಬೆಳಗ್ಗೆ ಸಂಪೋತ್ಸವ, ಸಂಜೆ ನಿತ್ಯ ಹೋಮಗಳು ಬಲಿ , ಗರುಡೋತ್ಸವ, ಚಂದ್ರಮಂಡಲೋತ್ಸವ ನಡೆಯಿತು. ಮಾ.31ರ ಮಂಗಳವಾರ ಬೆಳಗ್ಗೆ 9ಕ್ಕೆ ಸೀತಾರಾಮ ಕಲ್ಯಾಣೋತ್ಸವ ಮಧ್ಯಾಹ್ನ ಶ್ರೀಕೃಷ್ಣ ಗಮದೋತ್ಸನ ನಡೆಯಿತು. ಸಂಜೆ 5.30ಕ್ಕೆ ನೂತನ ರಥದಲ್ಲಿ ದೇವರನ್ನು ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಿಂದ ಬೀರದೇವರ ಗುಡಿಯಿಂದ ಎಳೆಯಲಾಗುವುದು. ನಂತರ ಬುಧವಾರ ಮತ್ತೆ ಭಕ್ತಾಧಿ ಗಳೆಲ್ಲ ಸೇರಿ ವಾಪಾಸು ದೇವಾಲಯಕ್ಕೆ ರಥ ತರುವ ಪದ್ಧತಿ ರೂಡಿಯಲ್ಲಿದೆ.
ಆಗಮಿಕರಾದ ರಾಮಪ್ರಸಾದ್, ದೇವಾಲಯ ಕಮಿಟಿ ಅಧ್ಯಕ್ಷ ಎನ್.ಪಿ.ಕೃಷ್ಣಮೂರ್ತಿ, ಸದಸ್ಯರಾದ ನಿಂಗಪ್ಪ, ಉದಯ ಕುಮಾರ್, ಬಸವರಾಜು, ನಾಗರಾಜು, ನೀಲಕಂಠಪ್ಪ, ನಂಜುಂಡಪ್ಪ, ಸುರೇಶ್, ಸಿದ್ದರಾಮಪ್ಪ, ಜಯಣ್ಣ, ರವಿಗೌಡ್ರು, ಗೋವಿಂದಪ್ಪ, ಹೇಮರಾಜು, ಲೋಕೇಶ್ ಸೇರಿದಂತೆ ದೇವಾಲಯದ ಕಮಿಟಿ ಸದಸ್ಯರು ಮತ್ತು ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.-- ಬಾಕ್ಸ್ --43ಅಡಿ ಅತಿ ಎತ್ತರದ ತೇರು:ನಿಡಗಟ್ಟ ಗ್ರಾಮದ ಸೀತಾರಾಮ ಆಂಜನೇಯ ದೇವಾಲಯ ಸಮಿತಿ, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಒಗ್ಗೂಡಿ ಉಡುಪಿಯ ಶಿಲ್ಪಿ ರಾಜಶೇಖರ್ ಹೆಬ್ಬಾರ್ ಗೆ ನೂತನ ತೇರು ನಿರ್ಮಾಣ ವಹಿಸಿದ್ದರು. ಸುಮಾರು ₹1.7 ಕೋಟಿ ವೆಚ್ಚದಲ್ಲಿ ರಥ ನಿರ್ಮಾಣ ಮಾಡಲು ತಾಲೂಕಿನಲ್ಲೇ ಅತಿ ಎತ್ತರದ 43 ಅಡಿಯ ಸುಂದರ ತೇರು ನಿಮಿಧಸಿರುವುದು ರಥೋತ್ಸವಕ್ಕೆ ಮೆರುಗು ತಂದಿದೆ.31 ಬೀರೂರು 5ಕಡೂರು ತಾಲೂಕಿನ ನಿಡಗಟ್ಟ ಗ್ರಾಮದ ಆರಾಧ್ಯದೈವ ಶ್ರೀ ಸೀತಾರಾಮ ಆಂಜನೇಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.