ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಪಟ್ಟಣದ ಕನ್ನಡ ಭವನದಲ್ಲಿ ಬುಧವಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರ ಗೊಳಿಸಲು ಹಾಗೂ ಕೈ ಬಿಟ್ಟ ಕೆರೆಗಳಿಗೆ ನೀರುಣಿಸಲು ರೈತರ ನಡೆ ಸಿರಿಗೆರೆ ಕಡೆ ಮಠದ ಕಡೆ ಎನ್ನುವ ಕಾರ್ಯಕ್ರಮದ ಭಾಗವಾಗಿ ರಾಜ್ಯ ರೈತ ಸಂಘ ಸೇರಿದಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸದಾ ಬರಕ್ಕೆ ತುತ್ತಾಗುವ ತಾಲೂಕಿನಲ್ಲಿ ಪ್ರಮುಖ ಜಲ ಮೂಲಗಳು ಇಲ್ಲದೆ ರೈತರು ಮಳೆಯನ್ನೇ ನಂಬಿ ಬದುಕುವಂತಾಗಿದೆ. ಪ್ಲೋರೈಡ್ ಸಮಸ್ಯೆಯಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಸಾವಿರ ಅಡಿ ಕೊರೆದರೂ ಬೋರ್‌ವೆಲ್ ಗಳಲ್ಲಿ ನೀರು ಸಿಗುತ್ತಿಲ್ಲ.ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೈರಾಣಾಗುತ್ತಿದ್ದಾರೆ. ಹಾಗಾಗಿ ಬಯಲು ಸೀಮೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತೀವ್ರಗೊಳಿಸಿ ಜಿಲ್ಲೆಯನ್ನು ಸಂಪೂರ್ಣ ನಿರಾವರಿಯನ್ನಗಿಸಲು ಸರ್ಕಾರಕ್ಕೆ ಒತ್ತಡ ತರುವುದು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ. ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಸಚಿವರ ವಿಧಾನ ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ನಡೆಸುವ ಹೋರಾಟಕ್ಕೆ ಪ್ರತಿಯೊಬ್ಬರು ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ತಿಳಿಸಿದರು.ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಇಲ್ಲದಿರುವುದೇ
ಈ ಸಂಬಂಧ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಸಿರಿಗೆರೆ ಶ್ರೀಗಳು ನಿರಂತರ ಪ್ರಯತ್ನದಿಂದಾಗಿ ಅಲ್ಲಿನ ಕೆರೆಗಳಿಗೆ ನೀರು ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಪ್ರಕಾರವಾಗಿ ಯೋಜನೆಯ ಕಾಮಗಾರಿ ತ್ವರಿತ ಗೊಳಿಸಲು ಜ.13ರಂದು ಸೋಮವಾರ ಪಾದಯಾತ್ರೆಯ ಮೂಲಕ ಸಿರಿಗೆರೆಗೆ ತೆರಳಿ ಶ್ರೀಗಳಿಗೆ ಮನವಿ ಸಲ್ಲಿಸಲಾಗುವುದು. ಈ ಮಹತ್ವದ ಕಾರ್ಯಕ್ಕೆ ಪ್ರತಿಯೊಬ್ಬರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ವಿ.ಮಾರನಾಯಕ, ಕೃಷಿಕ ಸಮಾಜದ ಭಕ್ತ ಪ್ರಹ್ಲಾದ್, ರೈತ ಸಂಘದ ಮರ್ಲಹಳ್ಳಿ ರವಿ ಕುಮಾರ್, ಕೋನಸಾಗರ ಮಂಜುನಾಥ, ವಕೀಲ ರಾಜಶೇಖರ ನಾಯಕ, ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್, ಕೆ.ಟಿ.ಗಂಗಾಧರ, ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ಲಾ,ಡಿ. ಸಿ.ನಾಗರಾಜ, ದಾನಸೂರ ನಾಯಕ ಇದ್ದರು.