ರಾಜಮನೆತನದ ಬಗ್ಗೆ ಸರ್ಕಾರದ ನಿಲುವು ಖಂಡನೀಯ : ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ

KannadaprabhaNewsNetwork |  
Published : Feb 13, 2025, 12:48 AM ISTUpdated : Feb 13, 2025, 12:56 PM IST
Vidhan soudha

ಸಾರಾಂಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿಕೆ

  ಸಿರಿಗೆರೆ : ಮೈಸೂರು ರಾಜವಂಸಸ್ಥ ಮನೆತನದ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿಲುವನ್ನು ನಾವು ಖಂಡಿಸುತ್ತೇವೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಸದ್ಧರ್ಮ ಸಿಂಹಾಸನಾರೋಹಣ ಮಾಡಿದ ತರಳಬಾಳು ಶ್ರೀಗಳು ಆಶೀರ್ಚನ ನೀಡಿದರು.

ರಾಜಮನೆತನವನ್ನು ಸರ್ಕಾರ ಗೋಳು ಹೊಯ್ದುಕೊಳ್ಳುತ್ತಿದೆ. ಮನೆತನದ ವಿರುದ್ಧ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ವಾಪಾಸು ಪಡೆದು ಅವರ ಜೊತೆಗೆ ಮುಕ್ತ ಸಂವಾದ ನಡೆಸಬೇಕು ಎಂದು ಹೇಳಿದರು.ಮೈಸೂರು ರಾಜಮನೆತನ ತಮ್ಮ ಬಹಳಷ್ಟು ಸಂಪತ್ತನ್ನು ಸರ್ಕಾರಕ್ಕೆ ಒಪ್ಪಿಸಿದೆ. ಹೀಗಿದ್ದರೂ ಅವರ ಮನೆತನವನ್ನು ಗೋಳು ಹೊಯ್ದುಕೊಳ್ಳುತ್ತಿದೆ. ರಾಜಮನೆತನದ ಬಗ್ಗೆ ಇಟ್ಟುಕೊಳ್ಳಬೇಕಾದ ಗೌರವ ಪ್ರಜಾಪ್ರಭುತ್ವದ ಕಾಲದಲ್ಲಿ ಉಳಿದಿಲ್ಲ ಎಂದರು.

ಇಂಗ್ಲೆಂಡಿನಲ್ಲಿ ರಾಜಪ್ರಭುತ್ವದ ಜೊತೆಗೆ ಪ್ರಜಾಪ್ರಭುತ್ವವೂ ಇದೆ. ಅದೇ ರೀತಿ ರಾಜಮನೆತನದವರನ್ನು ರಾಜ್ಯದ ಗವರ್ನರ್‌ ಆಗಿ ನೇಮಿಸಿಕೊಳ್ಳಬೇಕು. ರಾಜ್ಯ ಸರ್ಕಾರವು ಗವರ್ನರ್‌ ಸ್ಥಾನವನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಕೊಳಕು ರಾಜಕೀಯ ಎಂದರು.

ನಮ್ಮ ಮಠಕ್ಕೂ ಮೈಸೂರು ಅರಸು ಮನೆತನಕ್ಕೂ 6 ದಶಕಗಳ ಸಂಬಂಧ ಇದೆ. ಲಿಂಗೈಕ್ಯ ಗುರುಗಳ ಕಾಲದಲ್ಲಿ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಜಯಚಾಮರಾಜ ಒಡೆಯರ್‌ ಭಾಗಿಯಾಗಿ ವಚನಗಳ ಇಂಗ್ಲಿಷ್‌ ಅನುವಾದ ಕೃತಿಯನ್ನು ಬಿಡುಗಡೆ ಮಾಡಿದ್ದರು. ಈಗ ಇತಿಹಾಸದ ಕಾಲಚಕ್ರ ತಿರುಗಿದೆ. ರಾಜ ಮನೆತನದ ಮಹಾರಾಜರು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶರಣರ ವಚನ ಸಂಪುಟ ವೆಬ್‌ ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ ಎಂದರು.

ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್‌, ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌, ಎಂ.ಕೃಷ್ಣೇಗೌಡ, ಬಿ.ಎಂ.ಸುರೇಶ್‌, ಎಚ್.‌ಎಸ್.‌ಹರಿಶಂಕರ್‌, ವಾರಣಾಸಿಯ ಬೆಟಿನಾ ಬೊಯಮರ್‌, ರಷ್ಯಾದ ಗಲಿನ, ಬಿ.ವಿ.ಆರತಿ ಮುಂತಾದವರು ಭಾಗಿಯಾಗಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ