ಕನ್ನಡಪ್ರಭ ವಾರ್ತೆ ಆನವಟ್ಟಿ
ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಪ್ರಯಕ್ತ ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಟ್ಟು-ಸಾವಿನ ಮಧ್ಯ ಬರುವ ಬದುಕಿನ ಸನ್ನಿವೇಷಗಳನ್ನು ಜಾನಪದರು ತಮ್ಮ ಪದಗಳ ಮೂಲಕ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಂತಹ ಜಾನಪದ ಸಾಹಿತ್ಯ, ಸಿನಿಮಾ ಜನಪ್ರಿಯತೆಯಿಂದ ಮರೆಯಾಗಬಾರದು. ಇಂದಿನ ಯುವ ಪೀಳಿಗೆ ಜಾನಪದ ಲೋಕಕ್ಕೆ ಮರಳಿ ಬರಬೇಕು ಎಂದರು.ಸಿನಿಮಾ ನಟ ನಾಗೇಶ್ವರ್ ವಿಜಾಪುರ್ ಮಾತನಾಡಿ, ಜಗತ್ತಿನ ಜಾನಪದ ಸಾಹಿತ್ಯ ಸಂಗ್ರಹ ಕರ್ನಾಟಕದಲ್ಲೇ ಹೆಚ್ಚು ಇರುವುದು. ನೀತಿ ಕಥೆಗಳು, ಬುದ್ದಿ ಚುರುಕುಗೊಳಿಸುವ ಒಗಟುಗಳು, ಗಾದೆಗಳು ಇನ್ನೂ ಅನೇಕ ವಿಧಗಳನ್ನು ಒಳಗೊಂಡ ಜಾನಪದ ಸಾಹಿತ್ಯ ಕಡೆಗಣನೆಗೆ ಒಳಗಾಗದೆ ಯುವ ಪೀಳಿಗೆ ಬೆಳಸುವ ಕಡೆ ಗಮನ ನೀಡಬೇಕು. ಜಾನಪದ ಕಲಾವಿದರಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳು ವಿವಿಧ ಜಾನಪದ ಗೀತೆಗಳನ್ನು ಹಾಡಿ, ನೃತ್ಯ ಮಾಡಿದರು. ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೆ. ಗುಡ್ಡಪ್ಪ ಜೋಗಿ ಹಾಗೂ ಸಿನಿಮಾ ನಟ ನಾಗೇಶ್ವರ್ ವಿಜಾಪುರ್ ಅವರನ್ನು ಸನ್ಮಾನಿಸಲಾಯಿತು.
ಸಿನಿಮಾ ಹಾಗೂ ಧಾರವಾಹಿ ನಟ ಡಾ. ನಾಗೇಶ್ವರ್ ವಿಜಾಪುರ್, ಸಮಾಜ ಸೇವಕ ಕಾರ್ತಿಕ್ ಸಾಹುಕಾರ್, ಪ್ರಾಂಶುಪಾಲ ಆರ್.ಸಿ ಭೀಮಪ್ಪ ಜಾನಪದ ಸಾಹಿತ್ಯ ಬಗೆಗೆ ಮಾತನಾಡಿದರು. ಉಪನ್ಯಾಸಕ ಶ್ರೀಕಾಂತ್, ರಾಘವೇಂದ್ರ ನಾಯಕ್ ಇದ್ದರು.