ಪದವೀಧರರ ಕ್ಷೇತ್ರ ಉತ್ತರ ಕರ್ನಾಟಕದ ಪರ ಗಟ್ಟಿ ಧ್ವನಿ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Oct 20, 2026, 01:45 AM IST
ಗದಗ ಡಿಜಿಎಂ ಆಯುರ್ವೇದಿಕ್‌ ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರ ಶಾಸಕ ಎಚ್.ಕೆ. ಪಾಟೀಲ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಪ್ರಜ್ಞಾವಂತರ ಕ್ಷೇತ್ರವಾಗಿರುವ ಪದವೀಧರ ಕ್ಷೆತ್ರ ಕರ್ನಾಟಕ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಹೋರಾಟ ಮಾಡುವಲ್ಲಿ ತನ್ನದೆ ಇತಿಹಾಸ ಹೊಂದಿದ ವಿಶೇಷ ಕ್ಷೇತ್ರ ಪಶ್ಚಿಮ ಪದವೀಧರ ಕ್ಷೇತ್ರವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಪ್ರಜ್ಞಾವಂತರ ಕ್ಷೇತ್ರವಾಗಿರುವ ಪದವೀಧರ ಕ್ಷೆತ್ರ ಕರ್ನಾಟಕ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಹೋರಾಟ ಮಾಡುವಲ್ಲಿ ತನ್ನದೆ ಇತಿಹಾಸ ಹೊಂದಿದ ವಿಶೇಷ ಕ್ಷೇತ್ರ ಪಶ್ಚಿಮ ಪದವೀಧರ ಕ್ಷೇತ್ರವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಡಿಜಿಎಂ ಆಯುರ್ವೇದಿಕ್‌ ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಾನು 24 ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಉತ್ತರ ಕರ್ನಾಟಕ ಅಭಿವೃದ್ಧಿಯ ದೃಷ್ಠಿಯಿಂದ ಈ ಕ್ಷೇತ್ರ ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಪದವೀಧರರ ಧ್ವನಿಯಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುವ ನಿಟ್ಟನಲ್ಲಿ ನಮ್ಮ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು ಅಪಾರ ಅನುಭವವನ್ನು ಹೊಂದಿದ್ದಾರೆ. ಅವರಿಗೆ ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ.

ಈ ಚುನಾವಣೆ ನಮ್ಮೇಲ್ಲರ ದೃಷ್ಟಿಯಿಂದ ಮಹತ್ವದ ಚುನಾವಣೆಯಾಗಿದೆ. ಹಿಂದಿನ ನನ್ನ ಚುನಾವಣೆಗೆ ಈ ಸಂಸ್ಥೆಯ ಎಲ್ಲ ಪದವೀಧರರು ಮತ ಹಾಕುವ ಮೂಲಕ ನನಗೆ ರಾಜಕೀಯ ಶಕ್ತಿ ನೀಡಿದ್ದಿರಿ. ಪ್ರಜ್ಞಾವಂತರಾದ ತಾವೆಲ್ಲರೂ ನಿಯಮಬದ್ಧವಾಗಿ ಮತ ಕುಲಗೆಡದಂತೆ ಮತದಾನ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪದವೀಧರ ಮತದಾರರ ಶ್ರೇಯೋಭಿವೃದ್ಧಿಗಾಗಿ ಎಚ್.ಕೆ. ಪಾಟೀಲರು ಹಲವು ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿದ್ದಾರೆ, ಶೈಕ್ಷಣಿಕವಾಗಿ ಇಂದು ಉತ್ತರ ಕರ್ನಾಟಕ ವಿಶೇಷ ಬದಲಾವಣೆ ವಿವಿಗಳ ಸ್ಥಾಪನೆ, ಮೂಲ ಸೌಕರ್ಯಗಳ ಅಭಿವೃದ್ಧಿಯ ಮೂಲಕ ವಿಶೇಷ ಸ್ಥಾನ ಪಡೆಯಲು ಎಚ್.ಕೆ. ಪಾಟೀಲರ ದೂರದೃಷ್ಟಿ ಕಾರಣವಾಗಿದ್ದು, ಪದವೀಧರ ಹಿತ ಕಾಯುವ ಜಾಣ್ಮೆ, ಬದ್ಧತೆ ಹೊಂದಿರುವ ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಬೇಕು ಎಂದರು.

ಈ ವೇಳೆ ಅಶೋಕ ಮಂದಾಲಿ, ಬಸವರಾಜ ಕಡೇಮನಿ ಸೇರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತ ಮತದಾನ ನಡೆಸಲು ಕ್ರಮ ವಹಿಸಿ: ಡಿಸಿ ಶ್ರೀಧರ್
ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್