ಲಿಂ.ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಅದ್ಧೂರಿ ರಥೋತ್ಸವ

KannadaprabhaNewsNetwork |  
Published : Apr 18, 2026, 03:00 AM IST
ಫೋಟೋ: 16 ಜಿಎಲ್ಡಿ1- ಗುಳೇದಗುಡ್ಡ  ಪಟ್ಟಣದ ಮರಡಿಮಠದ ಮೌನಯೋಗಿ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳವರ ಭವ್ಯ ರಥೋತ್ಸವ ಶುಕ್ರವಾರ ಬಹಳಷ್ಟು ಸಡಗರ, ಸಂಭ್ರಮದಿಂದ ನಡೆಯಿತು. | Kannada Prabha

ಸಾರಾಂಶ

ಗುಳೇದಗುಡ್ಡ ಪಟ್ಟಣದ ಮರಡಿಮಠದ ಲಿಂ.ಮೌನಯೋಗಿ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳವರ ಭವ್ಯ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಮರಡಿಮಠದ ಲಿಂ.ಮೌನಯೋಗಿ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳವರ ಭವ್ಯ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.

ರಥೋತ್ಸವದ ನಿಮಿತ್ತ ಬೆಳಗ್ಗೆ ಮೌನಯೋಗಿ ಕಾಡಸಿದ್ದೇಶ್ವರ ಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಇದಕ್ಕೂ ಮೊದಲು ಜಂಗಮ ವಟುಗಳಿಗೆ ಅಯ್ಯಾಚಾರ, ಶಿವದೀಕ್ಷೆ ಕಾರ್ಯಕ್ರಮ ಬಹಳಷ್ಟು ಶ್ರದ್ಧೆ, ಭಕ್ತಿಯಿಂದ ನಡೆದವು. ರಥೋತ್ಸವ ಸಂದರ್ಭದಲ್ಲಿ ಮಂಜುನಾಥ ಹೊಸಮನಿ ಅವರ ಪುರವಂತಿಕೆ ಸೇವೆ ಗಮನ ಸೆಳೆಯಿತು.

ಭವ್ಯ ರಥೋತ್ಸವದಲ್ಲಿ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಮುರುಘಾಮಠದ ಕಾಶೀನಾಥ ಶ್ರೀಗಳು, ಗುರುಸಿದ್ದೇಶ್ವರ ಬೃಹನ್ಮಠದ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ರುದ್ರಮುನಿ ದೇವರು, ಬಿಲ್ಲಕೇರಿಯ ಸಿದ್ದಲಿಂಗ ಶ್ರೀಗಳು, ಮಾಜಿ ಶಾಸಕ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುತ್ತಣ್ಣ ಕಳ್ಳಿಗುಡ್ಡ, ಪ್ರಭುಸ್ವಾಮಿ, ಜಂಗಮ ಸಮಾಜದ ಅಧ್ಯಕ್ಷ ಶಿವಾನಂದ ಮಳ್ಳಿಮಠ, ಮಹೇಶ ಸೂಳಿಬಾವಿ, ಮುತ್ತಣ್ಣ ದೇವರಮನಿ, ಪ್ರಶಾಂತ ಜವಳಿ, ಚಂದ್ರಶೇಖರ ತಾಂಡೂರ, ಡಾ. ಚಂದ್ರಕಾಂತ ಜವಳಿ, ಡಾ.ಮಠ, ಪ್ರಕಾಶ ಅಂಕದ, ರಾಜಶೇಖರ ಪಾಗಿ, ಶಿವಾನಂದ ಜವಳಿ, ಮಲ್ಲಕಾರ್ಜುನ ಹಿರೇಮಠ, ಪ್ರಕಾಶ ಮುರಗೋಡ, ಶಾಂತವೀರ ಶಿಂಧೆ ಸೇರಿ ತೆಗ್ಗಿ, ತೋಗುಣಸಿ, ಕೋಟೆಕಲ್, ಕೆಲೂಡಿ, ತಿಮ್ಮಸಾರ ಗ್ರಾಮಗಳ ಭಕ್ತರು ಸೇರಿದಂತೆ ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಕ್ಷೇತ್ರದಲ್ಲಿ ಮಕ್ಕಳ ಬಳಕೆ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ
ಅಂಚೆ ಕಚೇರಿ ವಿಲೀನ ವಿರೋಧಿಸಿ ಪ್ರತಿಭಟನೆ