ಇಳಿ ವಯಸ್ಸಿನಲ್ಲೂ ನರೇಗಾ ದುಡಿಮೆ ಬಿಡದ ಅಜ್ಜಿ!

KannadaprabhaNewsNetwork | Published : May 17, 2025 1:32 AM
Follow Us

ಸಾರಾಂಶ

ತಾಲೂಕಿನ ಬೈರನಹಟ್ಟಿ ಗ್ರಾಮದ ನಿವಾಸಿ ಶಾಂತಮ್ಮ ಕುಳಗೇರಿಯವರ ದುಡಿಮೆಗೆ ನರೇಗಾ ನೆರವಾಗಿದೆ. ಈ ಶಾಂತಮ್ಮಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು, ಸೊಸೆಯಂದಿರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳದೆ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಹಂಬಲಕ್ಕೆ ಮಕ್ಕಳು ಹಾಗೂ ಸೊಸೆಯಂದಿರ ಜೊತೆಗೆ ನರೇಗಾ ಯೋಜನೆಯಡಿ ದುಡಿಯುತ್ತಾ ನೆಮ್ಮದಿ ಬದುಕು ನಡೆಸುತ್ತಿದ್ದಾರೆ.

ಎಸ್‌.ಜಿ. ತೆಗ್ಗಿನಮನಿನರಗುಂದ:72 ವಯಸ್ಸು ದಾಟಿದರೂ, ಕೆಲಸ ಮಾಡುವ ಇವರ ಹುಮ್ಮಸ್ಸು ಮಾತ್ರ ಕುಗ್ಗಿಲ್ಲ!

ತಾಲೂಕಿನ ಬೈರನಹಟ್ಟಿ ಗ್ರಾಮದ ನಿವಾಸಿ ಶಾಂತಮ್ಮ ಕುಳಗೇರಿಯವರ ದುಡಿಮೆಗೆ ನರೇಗಾ ನೆರವಾಗಿದೆ. ಈ ಶಾಂತಮ್ಮಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು, ಸೊಸೆಯಂದಿರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳದೆ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಹಂಬಲಕ್ಕೆ ಮಕ್ಕಳು ಹಾಗೂ ಸೊಸೆಯಂದಿರ ಜೊತೆಗೆ ನರೇಗಾ ಯೋಜನೆಯಡಿ ದುಡಿಯುತ್ತಾ ನೆಮ್ಮದಿ ಬದುಕು ನಡೆಸುತ್ತಿದ್ದಾರೆ.

ಈ ಇಳಿ ವಯಸ್ಸಿನಲ್ಲೂ ದುಡಿದು ತಿನ್ನಬೇಕು ಎನ್ನುವ ಛಲಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. 5 ಎಕರೆ ಬೇಸಾಯ ಜಮೀನಿದೆ. ಜೀವನಕ್ಕೆ ಇಷ್ಟು ಸಾಕಾಗುವುದಿಲ್ಲ ಎಂಬುದು ಅರಿತು ಮಕ್ಕಳು ಸೊಸೆಯಂದಿರು ಬೇರೆಯವರ ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬೇಸಿಗೆಯಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟ ಎನ್ನುವುದನ್ನು ಅರಿತು ಮಕ್ಕಳು, ಸೊಸೆಯಂದಿರ ಜೊತೆಗೆ ನರೇಗಾದಲ್ಲಿ ಕೆಲಸ ಮಾಡುತ್ತಾ ಮಕ್ಕಳಿಗೆ ಆಸರೆಯಾಗುತ್ತಿದ್ದಾರೆ.ಶಾಂತಮ್ಮ ಸುಮಾರು 10 ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನರೇಗಾ ಕಾಮಗಾರಿಯಲ್ಲಿ ಉತ್ಸಾಹದಿಂದ ಕೂಲಿ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಗ್ರಾಮೀಣ ಭಾಗದ ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಷ್ಟು ರಿಯಾಯತಿ ನೀಡುವುದರ ಮೂಲಕ ಸಾಕಷ್ಟು ಬಡ ಕೂಲಿಕಾರರಿಗೆ ನರೇಗಾ ವರದಾನವಾಗಿದೆ.

ಆ ದೇವರು ದೇಹದಲ್ಲಿ ಇನ್ನೂ ದುಡಿಯುವ ಶಕ್ತಿ ಕೊಟ್ಟಿದ್ದಾನೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತೇವೆ. ಈ ದುಡಿಮೆಯಿಂದ ಬರುವ ಹಣದಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಭೈರನಹಟ್ಟಿ ನಿವಾಸಿ ಶಾಂತಮ್ಮ ಕುಳಗೇರಿ ಹೇಳಿದರು.