73ನೇ ವರ್ಷದ ಅದ್ಧೂರಿ ಕರಗ ಮಹೋತ್ಸವ ಸಂಪನ್ನ

KannadaprabhaNewsNetwork |  
Published : May 20, 2024, 01:30 AM IST
ಫೋಟೋ: 19 ಹೆಚ್‌ಎಸ್‌ಕೆ 1ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಕರಗ ಮಹೋತ್ಸವ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವೇಳೆ ಗ್ರಾಮಸ್ಥರು ಕರಗಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಶ್ರೀ ಪಟಾಲಮ್ಮ ಮತ್ತು ಶ್ರೀ ಮುತ್ಯಾಲಮ್ಮ ದೇವಿಯ ದೇವಾಯಲದಲ್ಲಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿ ಎರಡನೇ ಬಾರಿಗೆ ಕರಗ ಹೊತ್ತ ಕರಗದ ಪೂಜಾರಿ ಮುನಿರಾಜು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕರಗ ಹೊತ್ತು ಮನೆಗಳ ಬಳಿ ಬಂದಾಗ ಮಹಿಳೆಯರು ಕರಗಕ್ಕೆ ಆರತಿ ಎತ್ತಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಐತಿಹಾಸಿಕ ಪ್ರಸಿದ್ಧಿ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 73ನೇ ವರ್ಷದ ಹೂವಿನ ಕರಗವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.

ಶ್ರೀ ಪಟಾಲಮ್ಮ ಮತ್ತು ಶ್ರೀ ಮುತ್ಯಾಲಮ್ಮ ದೇವಿಯ ದೇವಾಯಲದಲ್ಲಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿ ಎರಡನೇ ಬಾರಿಗೆ ಕರಗ ಹೊತ್ತ ಕರಗದ ಪೂಜಾರಿ ಮುನಿರಾಜು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕರಗ ಹೊತ್ತು ಮನೆಗಳ ಬಳಿ ಬಂದಾಗ ಮಹಿಳೆಯರು ಕರಗಕ್ಕೆ ಆರತಿ ಎತ್ತಿ ಪೂಜೆ ನೆರವೇರಿಸಿದರು.

ಕಳೆದ ವಾರದಿಂದ ಅನೇಕ ಪೂಜಾ ಕಾರ‍್ಯಕ್ರಮಗಳೊಂದಿಗೆ ಕರಗ ಮಹೋತ್ಸವವನ್ನು ಆಚರಿಸಲಾಯಿತು. ಕರಗದ ಪ್ರಯುಕ್ತ ಗ್ರಾಮ ದೇವತೆ ಹಾಗೂ ಗ್ರಾಮದ ಇತರೆ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹೂವಿನ ಕರಗ ಮಹೋತ್ಸವದ ಹಿಂದಿನ ದಿನ ದ್ರೌಪದಮ್ಮನವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಾಲಯದ ಬಳಿ ಸಾವಿರಾರು ಜನ ನೆರೆದಿದ್ದು, ಕರಗವನ್ನು ವೀಕ್ಷಿಸಲು ಕಾತುರತೆಯಿಂದ ಕಾಯುತ್ತಿದ್ದರು. ಕರಗವು ದೇವಾಲಯದಿಂದ ರಾತ್ರಿ ಸುಮಾರು 11:30ರ ಸಮಯದಲ್ಲಿ ಹೊರಬರುತ್ತಿದ್ದಂತೆ ಭಕ್ತರೆಲ್ಲರೂ ಕರಗಕ್ಕೆ ನಮಸ್ಕರಿಸಿದರು. ನಂತರ ಕರಗ ಘಮ ಘಮಿಸುವ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡು ದೇವಾಲಯದ ಸುತ್ತ ನೃತ್ಯಮಾಡುತ್ತ, ‘ಕುಮಾರ ಮಕ್ಕಳ ಗೋವಿಂದ ಗೋವಿಂದ’ ಎಂಬ ಘೋಷಣೆ ಕೂಗುತ್ತಾ, ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಂಚರಿಸಿತು. ನಂತರ ಬೆಳಗ್ಗೆ ಸುಮಾರು 9:30ರ ಸಮಯದಲ್ಲಿ ಅಗ್ನಿಕೊಂಡ ಪ್ರವೇಶಿಸಿ ಮಹಾಮಂಗಳಾರತಿ ನಡೆಸಲಾಯಿತು. ದೇವರ 25 ಪಲ್ಲಕ್ಕಿಗಳು ಸಾಲಾಗಿ ನಿಂತು ನೋಡಲು ತುಂಬಾ ಆಕರ್ಷಕವಾಗಿದ್ದವು.

ಗ್ರಾಮದಲ್ಲಿ ವಾತಾವರಣದೊಂದಿಗೆ ನಾನಾ ಕಡೆಗಳಲ್ಲಿ ಆಯೋಜಿಸಿದ್ದ ವಾದ್ಯಗೋಷ್ಠಿಯು ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದಂತಿತ್ತು. ಸಾವಿರಾರು ಭಕ್ತರು ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ಕರಗ ಬರುವ ದಾರಿಯಲ್ಲಿ ಜನಸ್ತೋಮ ತುಂಬಿ ತುಳುಕುತ್ತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!