ಡಿಜಿಟಲ್ ಕಾಲದಲ್ಲೂ ಕನ್ನಡ ಬೆಳವಣಿಗೆಯು ಖುಷಿ ತಂದಿದೆ: ಸಾಧನಾ

KannadaprabhaNewsNetwork |  
Published : Nov 08, 2026, 02:00 AM IST
ಚಿತ್ರ 6ಬಿಡಿಆರ್53 | Kannada Prabha

ಸಾರಾಂಶ

ಜಾಗತಿಕ ಮತ್ತು ಡಿಜಿಟಲ್ ಕಾಲದಲ್ಲಿ ಕನ್ನಡ ಬೆಳವಣಿಗೆಯನ್ನು ಕಂಡು ಖುಷಿಯಾಗುತ್ತಿದೆ. ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌ನಲ್ಲೂ ಕನ್ನಡದ ಬಳಕೆ ಮಾಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ ಎಂದು ಹಿರಿಯ ಸಾಹಿತಿಗಳಾದ ಸಾಧನಾ ರಂಜೋಳಕರ್ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಜಾಗತಿಕ ಮತ್ತು ಡಿಜಿಟಲ್ ಕಾಲದಲ್ಲಿ ಕನ್ನಡ ಬೆಳವಣಿಗೆಯನ್ನು ಕಂಡು ಖುಷಿಯಾಗುತ್ತಿದೆ. ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌ನಲ್ಲೂ ಕನ್ನಡದ ಬಳಕೆ ಮಾಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ ಎಂದು ಹಿರಿಯ ಸಾಹಿತಿಗಳಾದ ಸಾಧನಾ ರಂಜೋಳಕರ್ ನುಡಿದರು.

ಅವರು ಬೀದರ್‌ನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ‘ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ ಕುರಿತು’ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ಗೂಗಲ್, ಮೆಟಾ ಮತ್ತು ಮೈಕ್ರೋಸಾಫ್ಟ್‌ ಅಂತಹ ಜಾಗತಿಕ ಸಂಸ್ಥೆಗಳು ಕನ್ನಡ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿವೆ. ನೌಕರಿಯಲ್ಲಿ ಕನ್ನಡದವರಿಗೆ ಅಧ್ಯತೆ ಕೊಡಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ರಮೇಶ ಬಿರಾದಾರ ಆಶಯನುಡಿಗಳನ್ನಾಡಿದರು. ವಿಶೇಷ ಉಪನ್ಯಾಸಕರಾಗಿ ಬಿ.ವಿ.ಭೂಮರಡ್ಡಿ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಬೀದರ್‌ನ ಇತಿಹಾಸ ವಿಭಾಗದ ಮುಖಸ್ಥರಾದ ಡಾ.ಶಿವಲೀಲಾ ವೀರಯ್ಯ ಮಾತನಾಡಿದರು. ಪ್ರಾಚಾರ್ಯರಾದ ವಿಜಯಕುಮಾರ ತೋರಣೆಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಇಂತಹ ಉಪನ್ಯಾಸಗಳು ಪ್ರೇರಣಾದಾಯಿಯಾಗಿವೆ ಎಂದರು.

ಜಗದೇವಿ ಸಿ. ದುಬಲಗುಂಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕರಾದ ಮಯೂರ ಬಸವರಾಜ ಮಾತನಾಡಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕರಾದ ಡಾ. ಮಕ್ತುಂಬಿ ಎಂ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ