ಓಬವ್ವನ ಇತಿಹಾಸಕ್ಕೆ ಮರುಜೀವ ನೀಡಿದ ಗುಡೇಕೋಟೆ ಉತ್ಸವ

KannadaprabhaNewsNetwork |  
Published : Feb 25, 2024, 01:54 AM IST
ನಾಗರಹಾವು ಚಲನಚಿತ್ರದಲ್ಲಿ ಓಬವ್ವಳ ಪಾತ್ರದಲ್ಲಿ ನಟಿ ಜಯಂತಿ | Kannada Prabha

ಸಾರಾಂಶ

ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದ ಒನಕೆ ಓಬವ್ವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯವರು ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಓಬವ್ವ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಚಿತ್ರದುರ್ಗದ ಕೋಟೆಗೆ ನುಗ್ಗುತ್ತಿದ್ದ ಹೈದರಾಲಿ ಕಡೆಯ ಸೈನಿಕರನ್ನು ಒನಕೆಯಿಂದ ವಧೆ ಮಾಡಿದ ಓಬವ್ವ ಇತಿಹಾಸದಲ್ಲಿ ಚಿರಸ್ಥಾಯಿ ಆಗಿದ್ದಾಳೆ.

ನಾಗರ ಹಾವು ಚಲನಚಿತ್ರದಲ್ಲಿ ಕನ್ನಡ ನಾಡಿನ ವೀರರಮಣಿಯ... ಗಂಡು ಭೂಮಿಯ ವೀರನಾರಿಯ ಚರಿತೆಯ ನಾನು ಹೇಳುವೆ ಎನ್ನುವ ಗೀತೆಯಿಂದಲೇ ಇಂದಿಗೂ ಓಬವ್ವ ಕನ್ನಡ ನಾಡಿನ ಜನಮಾನಸದಲ್ಲಿ ಉಳಿದಿದ್ದಾಳೆ ಎನ್ನಬಹುದು. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಓಬವ್ವನ ತವರು. ಗುಡೇಕೋಟೆ ಉತ್ಸವದ ಮೂಲಕ ಓಬವ್ವನನ್ನು ಇನ್ನಷ್ಟು ಮನೆ ಮನಕ್ಕೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ತ.ರಾ.ಸು. ಅವರು ತಮ್ಮ ಐತಿಹಾಸಿಕ ಕಾದಂಬರಿ ದುರ್ಗಾಸ್ಥಮಾನದಲ್ಲಿ ಚಿತ್ರಿಸಿದ್ದಾರೆ. ನಾಗರಹಾವು ಚಲನಚಿತ್ರದಲ್ಲಿ ಓಬವ್ವ ಹೈದರಾಲಿ ಕಡೆಯ ಸೈನಿಕರನ್ನು ಒನಕೆಯಿಂದ ವಧೆ ಮಾಡಿದ ದೖಶ್ಯವನ್ನು ಹಿರಿಯ ನಟಿ ಜಯಂತಿ ಮೂಲಕ ಮನೋಜ್ಞವಾಗಿ ಚಿತ್ರೀಕರಿಸಿದ್ದು, ಕೊನೆಗೆ ಓಬವ್ವಳನ್ನು ಹೈದರಾಲಿ ಕಡೆಯ ಸೈನಿಕನೊಬ್ಬನು ಮೋಸದಿಂದ ಖಡ್ಗದಿಂದ ಇರಿದು ಸಾಯಿಸುತ್ತಾನೆ. ಇದು ಸಿನಿಮಾದಲ್ಲಿ ಪ್ರೇಕ್ಷಕರನ್ನು ಭಾವನಾತ್ಮಕ ಲೋಕಕ್ಕೆ ಒಯ್ಯುವ ಜಾಣ್ಮೆಯನ್ನು ಸಿನಿಮಾದಲ್ಲಿ ಮಾಡಿದ್ದಾರೆ. ಆದರೆ ಓಬವ್ವ ಆ ಸಂದರ್ಭದಲ್ಲಿ ವಾಸ್ತವವಾಗಿ ಸಾಯುವುದಿಲ್ಲ. ಆನಂತರ ಹಲವು ವರ್ಷಗಳ ಕಾಲ ಬದುಕಿರುತ್ತಾಳೆ. ಮದಕರಿನಾಯಕ ಓಬವ್ವನ ಸಾಹಸಕ್ಕೆ ಮೆಚ್ಚಿ ಬಿರುದಾವಳಿ ನೀಡುತ್ತಾನೆ. ಸ್ವತಃ ಮದಕರಿನಾಯಕನೇ ಹಾಡಿ ಹೊಗಳುತ್ತಾನೆ. ಅವಳಿಗೆ ಬಹಳಷ್ಟು ಜನರ ಜೀವವನ್ನು ತೆಗೆದನಲ್ಲ ಎನ್ನುವ ಪಾಪಪ್ರಜ್ಞೆ ಕಾಡುತ್ತದೆ. ಅಶೋಕನ ತರಹ ಮನಃ ಪರಿವರ್ತನೆ ಆಗುತ್ತದೆ. ಆನಂತರದ ದಿನಗಳಲ್ಲಿ ಸಾವನ್ನಪ್ಪುತ್ತಾಳೆ ಎಂಬುದನ್ನು ಇತಿಹಾಸಕಾರರ ಅಭಿಪ್ರಾಯ. ಇಂತಹ ಗಟ್ಟಿಗಿತ್ತಿ ಮಹಿಳೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ನೆಲದಲ್ಲಿ ಹುಟ್ಟಿ ಬೆಳೆದಿದ್ದಳು ಎಂಬುದೇ ಎಲ್ಲರಿಗೂ ಹೆಮ್ಮೆ. ಇದೇ ನೆಲದಲ್ಲಿ ಓಬವ್ವನ ನೆನಪಿಸುವ ಗುಡೇಕೋಟೆ ಉತ್ಸವ ನಡೆಯುತ್ತಿರುವುದು ಚರಿತ್ರೆಯಿಂದ ಮರೆಯಾಗುತ್ತಿದ್ದ ಓಬವ್ವನ ಇತಿಹಾಸಕ್ಕೆ ಮರುಜೀವ ಬಂದಂತಾಗಿದೆ ಎಂದೇ ಹೇಳಬಹುದು. ಓಬವ್ವ ಹುಟ್ಟಿಬೆಳೆದ ನೆಲದಲ್ಲಿ ಚಿತ್ರದುರ್ಗ ಪಾಳೇಗಾರರ ಸಮಕಾಲೀನರಾದ ಗುಡೇಕೋಟೆ ಪಾಳೇಗಾರರು ಆಳ್ವಿಕೆ ನಡೆಸಿದ್ದು, ಇಂತಹ ನೆಲದಲ್ಲಿ ಓಬವ್ವ ಹುಟ್ಟಿದ್ದಾಳೆ ಎಂದರೆ ನಮಗೆ ಹೆಮ್ಮೆ. ಇತಿಹಾಸಕಾರರು ಓಬವ್ವನ ಚರಿತ್ರೆಗೆ ಹೆಚ್ಚು ಆಸಕ್ತಿ ತೋರಿಸಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಉತ್ಸವಗಳ ಮೂಲಕ ಇ ಚರಿತ್ರೆಯಲ್ಲಿ ಓಬವ್ವಗೆ ಸೂಕ್ತ ಸ್ಥಾನಮಾನ ಸಿಗಬೇಕಿದೆ. ಮಕ್ಕಳ ಪಠ್ಯದಲ್ಲಿ ಓಬವ್ವನ ಚರಿತ್ರೆ ಬರಬೇಕಿದೆ. ಈ ಮೂಲಕ ದಿಟ್ಟ ಮಹಿಳೆಯ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕಿದೆ ಎಂದು ಹಂಪಿ ಕನ್ನಡ ವಿವಿ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ