ಮೇಲ್ಮನೆ ಗೆಲುವಿಗೆ ಮೈತ್ರಿ ಕಾರ್ಯಕರ್ತರ ಪರಿಶ್ರಮ ಕಾರಣ

KannadaprabhaNewsNetwork |  
Published : Nov 01, 2026, 02:30 AM IST
31ಕೆಡಿವಿಜಿ12-ದಾವಣಗೆರೆಯಲ್ಲಿ ನೂತನ ಎಂಎಲ್‌ಸಿ ಕೆ.ಎಂ.ಸುರೇಶ್‌ರಿಗೆ ಅಭಿನಂದನಾ ಸಮಾರಂಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರು. | Kannada Prabha

ಸಾರಾಂಶ

ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಭರ್ಜರಿ ಐತಿಹಾಸಿಕ ಸಾಧನೆಯಾಗದ್ದು, ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶಗೆ ಉಭಯ ಪಕ್ಷಗಳ ಪರವಾಗಿ ಅಭಿನಂದಿಸುವ ಜೊತೆಗೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲಿ ಎಂದು ಕಾರವಾರ ಸಂಸದ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾರೈಸಿದ್ದಾರೆ.

- ಎಂಎಲ್‌ಸಿ ಸುರೇಶ್‌ ಜನರ ಧ್ವನಿಯಾಗಲಿ: ಅಭಿನಂದನಾ ಕಾರ್ಯಕ್ರಮದಲ್ಲಿ ಕಾಗೇರಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಭರ್ಜರಿ ಐತಿಹಾಸಿಕ ಸಾಧನೆಯಾಗದ್ದು, ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶಗೆ ಉಭಯ ಪಕ್ಷಗಳ ಪರವಾಗಿ ಅಭಿನಂದಿಸುವ ಜೊತೆಗೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲಿ ಎಂದು ಕಾರವಾರ ಸಂಸದ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾರೈಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನೂತನ ಎಂಎಲ್ಸಿ ಕೆ.ಎಂ.ಸುರೇಶ್‌ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮೇಲ್ಮನೆಯ ನಾಲ್ಕೂ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ನಾಲ್ಕೂ ಕ್ಷೇತ್ರ ಗೆದ್ದಿದ್ದು, ಕೆ.ಎಂ.ಸುರೇಶ, ಬೆಂಗಳೂರಲ್ಲಿ ಜೆಡಿಎಸ್ ಅಭ್ಯರ್ಥಿ ರಂಗನಾಥ, ಸಂಕನಗೌಡ, ಕಲಬುರಗಿಯಲ್ಲಿ ನಮೋಶಿ ಗೆಲುವು ಸಾಧಿಸಿದ್ದು ಕಾರ್ಯಕರ್ತರ ಪರಿಶ್ರಮ ಹಾಗೂ ಮತದಾರರ ವಿಶ್ವಾಸಕ್ಕೆ ಸಾಕ್ಷಿ ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ನಿರಂತರ ಶ್ರಮಿಸಿ ಮತದಾರರನ್ನು ಸಂಪರ್ಕಿಸಿದ್ದು, ಆ ಎಲ್ಲರ ಸಂಘಟಿತ ಪ್ರಯತ್ನದಿಂದಲೇ ಗೆಲುವು. ಆಗ್ನೇಯ ಪದವೀಧರ ಕ್ಷೇತ್ರ 5 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರ, 5 ಲೋಕಸಭಾ ಕ್ಷೇತ್ರ ಒಳಗೊಂಡ ವಿಶಾಲ ಕ್ಷೇತ್ರ. ಈ ಹಿಂದೆ ಪುರುಷೋತ್ತಮ, ಸಂಜೀವ ಶೆಟ್ಟಿ, ಮಲ್ಲಿಕಾರ್ಜುನಯ್ಯ, ಶಿವಯೋಗಿ ಸ್ವಾಮಿ, ಚಿದಾನಂದಗೌಡ ಅವರಂತಹ ಹಿರಿಯರು ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ ಎಂದು ತಿಳಿಸಿದರು.

ಹಿರಿಯರ ಆ ಪರಂಪರೆ ಮುಂದುವರಿಸುವ ಜವಾಬ್ದಾರಿ ನೂತನ ಎಂಎಲ್‌ಸಿ ಕೆ.ಎಂ. ಸುರೇಶ್ ಮೇಲಿದೆ. ಪರಿಷತ್‌ನಲ್ಲಿ ಪದವೀಧರರ ಸಮಸ್ಯೆ, ನಿರುದ್ಯೋಗ, ಯುವಜನರ ಆಶೋತ್ತರಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ತತ್ವದಡಿ ಯಾವುದೇ ತಾರತಮ್ಯವಿಲ್ಲದೇ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಗಮನಹರಿಸುವಂತೆ ಧ್ವನಿ ಎತ್ತಿ ಎಂದು ಕಾಗೇರಿ ಹೇಳಿದರು.

ನೂತನ ಎಲ್‌ಸಿ ಕೆ.ಎಂ.ಸುರೇಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜನಾಯ್ಕ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕಡ್ಲೆಬಾಳು ಧನಂಜಯ, ಆರ್.ಲಕ್ಷ್ಮಣ, ಶಂಕರಗೌಡ ಬಿರಾದರ್, ತಾರಕೇಶ್ ನಾಯ್ಕ ಇತರರು ಇದ್ದರು.

- - -

-31ಕೆಡಿವಿಜಿ12: ದಾವಣಗೆರೆಯಲ್ಲಿ ನೂತನ ಎಂಎಲ್‌ಸಿ ಕೆ.ಎಂ.ಸುರೇಶ್‌ರಿಗೆ ಅಭಿನಂದನಾ ಸಮಾರಂಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ