ಮನೆಯೇ ಮೊದಲ ಪಾಠಶಾಲೆ, ಸಂಸ್ಕಾರಕ್ಕೆ ಪೋಷಕರೇ ಗುರುಗಳು: ರುಕ್ಕಯ್ಯ ಪೂಜಾರಿ

KannadaprabhaNewsNetwork |  
Published : Nov 02, 2026, 04:00 AM IST
ಮನೆಯೇ ಮೊದಲ ಪಾಠಶಾಲೆ, ಸಂಸ್ಕಾರಕ್ಕೆ ಪೋಷಕರೇ ಗುರುಗಳು: ರುಕ್ಕಯ್ಯ ಪೂಜಾರಿ | Kannada Prabha

ಸಾರಾಂಶ

ಮನೆ ಎಂಬುದು ಮಕ್ಕಳ ಮೊದಲ ಪಾಠಶಾಲೆಯಾಗಿದ್ದು, ಪೋಷಕರಿಂದಲೇ ಉತ್ತಮ ಸಂಸ್ಕಾರ ಕಲಿಯಬೇಕು. ಹೆತ್ತವರ ಮಾತಿಗೆ ಬೆಲೆ ನೀಡಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಹೇಳಿದರು.

ಮೂಡುಬಿದಿರೆ ; ಮನೆ ಎಂಬುದು ಮಕ್ಕಳ ಮೊದಲ ಪಾಠಶಾಲೆಯಾಗಿದ್ದು, ಪೋಷಕರಿಂದಲೇ ಉತ್ತಮ ಸಂಸ್ಕಾರ ಕಲಿಯಬೇಕು. ಹೆತ್ತವರ ಮಾತಿಗೆ ಬೆಲೆ ನೀಡಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಳ್ವಾಸ್ ಕಾಲೇಜು ಮೂಡುಬಿದಿರೆ ಇದರ ನೇತೃತ್ವದಲ್ಲಿ, ಇರುವೈಲು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ‘ವ್ಯಸನ ಮತ್ತು ಕ್ಷಯರೋಗ ಮುಕ್ತ ಯುವಜನತೆ’ ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಎನ್‌ಎಸ್‌ಎಸ್ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತೆ ನಿಶಾ ಇರುವೈಲು ಮಾತನಾಡಿ, ಶಿಬಿರದ ಐದು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.

ಮಾಜಿ ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ದಿನೇಶ್ ಶೆಟ್ಟಿ ದೊಡ್ಡಗುತ್ತು, ಎಸ್‌ಡಿಎಂಸಿ ಉಪಾಧ್ಯಕ್ಷೆ ಮರಿಯಾ ಲೂಸಿಯಾ ನೊರೊನ್ಹ, ಫಲ್ಗುಣಿ ಯುವಕ ಮಂಡಲದ ಅಧ್ಯಕ್ಷ ಸುಧೇಶ್, ತುಷಾರ್ ಆರ್.ವಿ., ಶಿಬಿರಾಧಿಕಾರಿ ಸುದೀಪ್ ಬುನ್ನನ್ ಹಾಗೂ ವಸುಧಾ ಭಟ್ ಉಪಸ್ಥಿತರಿದ್ದರು.ಮಾನ್ಯ ಹೆಗ್ಡೆ ನಿರೂಪಿಸಿದರು. ಕ್ಷಮಾ ಸ್ವಾಗತಿಸಿದರು. ಅಪೇಕ್ಷಾ ಡಿ. ಪೂಜಾರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡದಲ್ಲಿ ಸಚಿವರ ಕಾರಿಗೆ ಡೀಸಿ ಡ್ರೈವರ್‌ !
ಮೊದಲ ಸ್ವದೇಶಿ ಬುಲೆಟ್‌ ರೈಲಿನ ನಿರ್ಮಾಣ ಬೆಂಗಳೂರಲ್ಲಿ ಆರಂಭ