ಶಿಗ್ಗಾಂವಿ: ಕನಕದಾಸ, ಪುರಂದರದಾಸ ಸೇರಿದಂತೆ ಹಲವರ ಕೀರ್ತನೆಗಳಲ್ಲಿ ಸಾಂವಿಧಾನಿಕ ಆಶಯಗಳು ಕಾಣಸಿಗುತ್ತವೆ ಎಂದು ಲೇಖಕಿ ಡಾ. ಕೆ.ಆರ್. ಸಿದ್ದಗಂಗಮ್ಮ ತಿಳಿಸಿದರು.
ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ: ಸಾಂವಿಧಾನಿಕ ಆಶಯಗಳು ಎಂಬ ವಿಚಾರಗೋಷ್ಠಿಯಲ್ಲಿ ದಾಸ ಸಾಹಿತ್ಯ ಸಾಂವಿಧಾನಿಕ ಆಶಯಗಳು ಎಂಬ ವಿಷಯದ ಕುರಿತು ಮಾತನಾಡಿ, ದಾಸ ಸಾಹಿತ್ಯ ಪರಂಪರೆಯಲ್ಲಿ ಸಹ ಜನಮುಖಿಯಾದ ವಿಚಾರಧಾರೆಗಳು ಕಾಣಬಹುದು ಎಂದರು.ಹಿರಿಯ ಜಾನಪದ ವಿದ್ವಾಂಸ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು, ಜಾನಪದ ಸಾಹಿತ್ಯ ಸಂವಿಧಾನಿಕ ಆಶಯಗಳು ಎಂಬ ವಿಷಯದ ಕುರಿತು ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ಸಹ ಸಾಂವಿಧಾನಿಕ ಆಶಯಗಳು ಜೀವಂತಿಕೆಯಿಂದ ಕಾಣಸಿಗುತ್ತವೆ. ಸಂವಿಧಾನದ ಆಶಯಗಳು ಎಂದರೆ ಮಾನವೀಯ ಮೌಲ್ಯಗಳು ಎಂದರ್ಥ ಎಂದರು.
ಚಿಂತಕ ಡಾ. ಕರಿಯಪ್ಪ ಮಾಳಿಗೆ ಅವರು ತತ್ವಪದ ಸಾಹಿತ್ಯದ ಸಂವಿಧಾನಿಕ ಆಶಯಗಳ ಕುರಿತು ಮಾತನಾಡಿ, ತತ್ವಪದ ಸಾಹಿತ್ಯ ಕೂಡ ಜೀವಪರವಾಗಿದೆ. ಇವು ಬದುಕಿನಲ್ಲಿ ಭರವಸೆ ಮೂಡಿಸುತ್ತವೆ. ತತ್ವಪದಗಳು ಬದುಕಿಗೆ ಬೆಳಕಾಗಿವೆ. ನಾವು ಮರೆತ ಕಾಲು ದಾರಿ ಅವು ಎಂದರು.ವಿಮರ್ಶಕ ಡಾ. ಜಿ. ಪ್ರಶಾಂತ ನಾಯಕ ಅವರು, ನವೋದಯ ಸಾಹಿತ್ಯದ ಕುರಿತು ಮಾತನಾಡಿ, ತಮ್ಮದೇ ಪ್ರತಿಭೆ, ಕಾಳಜಿಯಿಂದ ಬರೆಯುತ್ತ ಬಿಎಂಶ್ರೀ, ಕುವೆಂಪು ಸೇರಿದಂತೆ ಅನೇಕರು ನವೋದಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಸಮಾನತೆಯ ಸಂವಿಧಾನದ ಆಂಶಗಳು ವಾಲ್ಕೀಕಿ ಅವರ ಸಾಹಿತ್ಯದಿಂದಲೇ ಆರಂಭವಾಗುತ್ತದೆ ಎಂದರು.ವಿದ್ವಾಂಸ ಡಾ. ಎ.ಬಿ. ರಾಮಚಂದ್ರಪ್ಪ ಅವರು ದಲಿತ ಬಂಡಾಯ ಸಂವಿಧಾನಿಕ ಆಶಯಗಳ ಕುರಿತು ಮಾತನಾಡಿ, ಸಾಹಿತ್ಯವನ್ನು ಬರೀ ಸಾಹಿತ್ಯವೆಂದು ನೋಡದೇ ಸಾಮಾಜಿಕರಿಸಿ ನೋಡಿದ ಜ್ಞಾನದ ಶಿಸ್ತು ನವ್ಯ ಸಾಹಿತ್ಯದಲ್ಲಿ ನೋಡಬಹುದು ಎಂದರು.ಗೋಷ್ಠಿ ಬಳಿಕ ಶಿಬಿರಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಜಾನಪದ ವಿವಿಯ ಕುಲಪತಿ ಡಾ. ಟಿ.ಎಂ. ಭಾಸ್ಕರ್, ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ, ಜಾನಪದ ವಿವಿಯ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಡಾ. ಮಲ್ಲಿಕಾರ್ಜುನ ಮಾನ್ಪಡೆ ಇತರರು ಇದ್ದರು.ಅಂಗವಿಕಲರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ
ರಾಣಿಬೆನ್ನೂರು: ತಾಲೂಕಿನ ಹಿರೇಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗವಿಕಲರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್‌ಗಳನ್ನು ತಾಪಂ ಇಒ ಪರಮೇಶ ವಿತರಿಸಿದರು.ಈ ಸಮಯದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ 1200 ಅಂಗವಿಕಲರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್ ವಿತರಿಸಲಾಗಿದೆ. ನರೇಗಾ ಮಾರ್ಗಸೂಚಿ ಪ್ರಕಾರ ಅಂಗವಿಕಲ ಫಲಾನುಭವಿಗಳಿಗೆ ಒಂದು ಕುಟುಂಬವನ್ನಾಗಿ ಪರಿಗಣಿಸಿ ವರ್ಷದಲ್ಲಿ 100 ದಿನ ನರೇಗಾದಡಿ ಕೂಲಿ ಕೆಲಸ ನೀಡಲಾಗುವುದು ಎಂದರು.ಗ್ರಾಪಂ ಅಧ್ಯಕ್ಷ ಕೆಂಚಪ್ಪ ಸಂಗಾನವರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಅನುಸುಯಾ ಚಿಕ್ಕಬಿದರಿ, ಸದಸ್ಯ ಚಂದ್ರಪ್ಪ ಓಲೇಕಾರ, ಶಿವಪುತ್ರಪಗೌಡ ಪಾಟೀಲ, ಲಕ್ಷ್ಮಿ ಬಳ್ಳಾರಿ, ನೀಲಪ್ಪ ಚಂದಾಪುರ, ವನಜಾಕ್ಷಿ ಜಾಡರ, ಸಾಕಮ್ಮ ಸಂಗಾನವರ, ಅನ್ನಪೂರ್ಣ ಗೂರಪ್ಪಳವರ, ಲಕ್ಷ್ಮವ್ವ ಮೇಗಳಮನಿ, ಪ್ರದೀಪ್ ಕೆಂಪಾಪ್ಪನವರ, ಪಿಡಿಒ ಸಫಿವುಲ್ಲಾ, ಗ್ರಾಪಂ ಕಾರ್ಯದರ್ಶಿ ಮಂಜುನಾಥ್ ಹಳ್ಳದ, ಐಈಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ, ಡಿಇಒ ಸಣ್ಣನಿಂಗಪ್ಪ, ಅಂಗವಿಕಲ ಸಂಯೋಜಕ ಮಂಜುನಾಥ ಚಲವಾದಿ, ಬಿಎಫ್‌ಟಿ ಪರಶುರಾಮ ಅಂಬಿಗೇರ ಇದ್ದರು.
ಕಾರ್ಯಕ್ರಮದಲ್ಲಿ ಸುಮಾರು 65 ಜನ ಅಂಗವಿಕಲರಿಗೆ ಜಾಬ್ ಕಾರ್ಡ್ ವಿತರಿಸಲಾಯಿತು.