ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳ ಅನಾವರಣ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಡತನದಿಂದ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್, ಮಧ್ಯಮ ವರ್ಗದಿಂದ ಬಂದು ಇಡೀ ಸಮಾಜಕ್ಕೆ ಬದಲಾವಣೆ ಕ್ರಾಂತಿ ತಂದ ಬಸವಣ್ಣ ಹಾಗೂ ತಮ್ಮ ಸಿರಿವಂತಿಕೆ ತೊರೆದು ಸತ್ಯದ ಅನ್ವೇಷಣೆ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕಿನ ಹಾದಿ ತೋರಿದ ಬುದ್ಧರು ಪ್ರಸ್ತುತದ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು.ದೇಶದ ಇಂತಹ ಅನೇಕ ಮಹನೀಯರ ಬದುಕು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಪ್ರತಿಮೆಗಳು ಅನಾವರಣಗೊಳ್ಳುತ್ತಿರುವ ಜೊತೆಗೆ ಅವರ ತತ್ವಗಳು ಕೂಡ ಜ್ಞಾನವಾಗಬೇಕು. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತದ ದೃಷ್ಟಿಕೋನ ನಿಜಕ್ಕೂ ಪ್ರಶಂಸನೀಯ ಎಂದು ಬಣ್ಣಿಸಿದರು.
ಎಲ್ಲ ವರ್ಗದವರಿಗೆ ಸ್ವಾಭಿಮಾನದ ಬದುಕಿನೊಂದಿಗೆ ಸಮಾನತೆಯ ಅವಕಾಶಗಳನ್ನು ಕಲ್ಪಿಸಿ ಅಂಬೇಡ್ಕರ್, ತಮ್ಮ ವಚನಗಳ ಕ್ರಾಂತಿಯಿಂದ ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ್ಯ ಕ್ಕೆ ಮುನ್ನುಡಿ ಬರೆದ ಬಸವಣ್ಣ ಹಾಗೂ ಜ್ಞಾನದ ಪ್ರತಿರೂಪದ ಬುದ್ಧರ ನಮ್ಮ ಸಮಾಜದ ಬೆಳಕಾಗಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಿದರು. ಮೈಸೂರಿನ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಮುದ್ದೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಇಂದ್ರೇಶ್, ಬಿಜೆಪಿ ಮುಖಂಡ ಸಿದ್ದರಾಮಯ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಹಾಗೂ ವಿವಿಧ ಮಠಗಳು ಸ್ವಾಮೀಜಿ ಪಾಲ್ಗೊಂಡಿದ್ದರು.