ಸತ್ಯ, ಅಹಿಂಸೆ ಸರಳತೆ, ಸೇವೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿಯವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಪ್ರೇಮ, ದಕ್ಷ ಆಡಳಿತದ ಆದರ್ಶಗಳು ಯುವಕರಿಗೆ ಪ್ರೇರಣೆ ಎಂದು ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ

ನಗರದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಆಳವಾದ ಧಾರ್ಮಿಕ ವ್ಯಕ್ತಿ, ಎಲ್ಲ ಧರ್ಮಗಳು ಒಂದೇ ಸತ್ಯದ ಬೇರೆ ಬೇರೆ ದಾರಿಗಳು ಎಂದು ನಂಬಿದ್ದರು, ಅವರು ಪ್ರಾರ್ಥನೆಗಳಲ್ಲಿ ಈಶ್ವರ ಅಲ್ಲಾ ತೆರೆ ನಾಮ ಎಂಬ ಭಜನೆ ಹಾಡುತ್ತಿದ್ದರು ಎಂದರು.
ದೇಶ ಕಂಡ ಅತ್ಯಂತ ಸರಳ ಸಜ್ಜನ ಪ್ರಾಮಾಣಿಕ ಪ್ರಧಾನಿ ಎಂದೇ ಹೆಸರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು, ದೇಶವನ್ನು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ಅಮೋಘವಾಗಿ ನಿಭಾಯಿಸಿದ ಕೀರ್ತಿ ಸಲ್ಲುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.