ಇಷ್ಟಲಿಂಗವು ಪರಶಿವನ ಸಾಕಾರ ರೂಪ: ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

KannadaprabhaNewsNetwork |  
Published : Sep 11, 2026, 02:30 AM IST
ಪೊಟೋ-ಪಟ್ಟಣದ ಅಕ್ಕಮಹಾದೇವಿ ದೇವಸ್ಥಅನದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು.  | Kannada Prabha

ಸಾರಾಂಶ

ಇಷ್ಟಲಿಂಗಕ್ಕೆ ಅತ್ಯಂತ ಪವಿತ್ರವಾದ ಹಾಗೂ ಮಹತ್ವದ ಸ್ಥಾನವಿದೆ. ಇಷ್ಟಲಿಂಗವು ಕೇವಲ ಒಂದು ಆರಾಧನಾ ಮೂರ್ತಿಯಲ್ಲ ಅದು ಪರಶಿವನ ಸಾಕಾರ ರೂಪ ಮತ್ತು ಆತ್ಮದ ಸಂಕೇತವಾಗಿದೆ.

ಶ್ರಾವಣ ಸಂಜೆ ಕಾರ್ಯಕ್ರಮದ ಸಾನಿಧ್ಯ ಲಕ್ಷ್ಮೇಶ್ವರದ ಕರೇವಾಡಿಮಠ ಶ್ರೀ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಇಷ್ಟಲಿಂಗಕ್ಕೆ ಅತ್ಯಂತ ಪವಿತ್ರವಾದ ಹಾಗೂ ಮಹತ್ವದ ಸ್ಥಾನವಿದೆ. ಇಷ್ಟಲಿಂಗವು ಕೇವಲ ಒಂದು ಆರಾಧನಾ ಮೂರ್ತಿಯಲ್ಲ ಅದು ಪರಶಿವನ ಸಾಕಾರ ರೂಪ ಮತ್ತು ಆತ್ಮದ ಸಂಕೇತವಾಗಿದೆ ಎಂದು ಲಕ್ಷ್ಮೇಶ್ವರದ ಕರೇವಾಡಿಮಠ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಸೋಮವಾರ ಸಂಜೆ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ನಿರಾಕಾರ ಮತ್ತು ಅಗೋಚರನಾದ ಪರಶಿವನನ್ನು ಬ್ರಹ್ಮಾಂಡದ ರೂಪದಲ್ಲಿ ಕರಸ್ಥಲಕ್ಕೆ ತಂದು ಪೂಜಿಸುವ ವಿಶಿಷ್ಟ ಸಾಧನವೇ ಇಷ್ಟಲಿಂಗ ಪೂಜೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು ಎಂದು ಹೇಳಿದರು. ‌‌

ಉಪನ್ಯಾಸಕ ಶರಣಯ್ಯ ಹಿರೇಮಠ ಮಾತನಾಡಿ, ಇಷ್ಟಲಿಂಗ ಪೂಜೆ ಮಾಡುವುದರಿಂದ ಅಂತರಂಗ ಮತ್ತು ಬಹಿರಂಗ ಶುದ್ಧಿ ಆಗಲು ನಾವೆಲ್ಲರೂ ಶ್ರದ್ಧೆಯಿಂದ ದಿನಾಲೂ ಲಿಂಗ ಪೂಜೆ ಮಾಡಬೇಕು. ದೇವರು ಎಲ್ಲೋ ಗುಡಿಗಳಲ್ಲಿ ಇಲ್ಲ ಆತನು ನಮ್ಮೋಳಗೆ ಇದ್ದಾನೆ ಎಂದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಶಾಂತಮ್ಮ ರಿತ್ತಿ, ಸುವರ್ಣಬಾಯಿ ಬಹದ್ದೂರ್ ದೇಸಾಯಿ, ಕದಳಿ‌ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ರತ್ನಾ ಕರ್ಕಿ, ಮಹದಾನಂದ ಕೊಣ್ಣೂರ, ಜಯಶ್ರೀ ಮುತ್ತಿಕಟ್ಟಿ, ಪಾರ್ವತಿ ಕಳ್ಳಿಮಠ, ಅಶ್ವಿನಿ ಅಕ್ಕಲಕೋಟಿ, ವೀಣಾ ಹತ್ತಿಕಾಳ, ಅಂಕಿತಾ ಅರಳಿ, ಗಂಗಾಧರ ಅರಳಿ, ಬಸವರಾಜ ಸಂಗಪ್ಪಶೆಟ್ಟರ, ಶಂಕರ ಶಿಳ್ಳಿನ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

80 ಡೆಸಿಬಲ್‌ ಮೀರಿದರೆ ಡಿಜೆ ಬಾಕ್ಸ್‌ ವಶ, ಪ್ರಕರಣ ದಾಖಲು
ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್‌ ಪೂಜಾರಿ ದ.ಕ. ಕಾಂಗ್ರೆಸ್‌ ಅಧ್ಯಕ್ಷ