ಓದುವ ಸಂಸ್ಕೃತಿಯಿಂದ ಸಿಗುವ ಸಂತೋಷ ಬೇರೆ ಮಾಧ್ಯಮದಿಂದ ಸಿಗದು: ಡಾ.ಸಿಪಿಕೆ

KannadaprabhaNewsNetwork | Published : Apr 13, 2025 2:06 AM

ಸಾರಾಂಶ

ಓದುವ ಸಂಸ್ಕೃತಿಯಿಂದ ಸಿಗುವ ಸಂತೋಷ ಬೇರೆ ಮಾಧ್ಯಮದಿಂದ ಸಿಗದು. ವತ್ತು ಪುಸ್ತಕಗಳ ಬಹಳ ಮುಖ್ಯ. ಇವು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಆದರೆ ಪ್ರಸ್ತುತ ಪುಸ್ತಕ ಓದುವ ಸಂಸ್ಕೃತಿ ಮರೆಯಾಗಿ ಬೇರೆ ಬೇರೆ ಮಾಧ್ಯಮಗಳನ್ನು ಗಮನಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಓದುವ ಸಂಸ್ಕೃತಿಯಿಂದ ಸಿಗುವ ಸಂತೋಷ ಬೇರೆ ಮಾಧ್ಯಮದಿಂದ ಸಿಗದು ಎಂದು ಹಿರಿಯ ಕವಿ ಡಾ.ಸಿ.ಪಿ. ಕೃಷ್ಣಕುಮಾರ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಅಕ್ಷರ ನಾದ ಪಬ್ಲಿಕೇಷನ್ಸ್‌ ವತಿಯಿಂದ ವಿಜಯನಗರ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕವಿ ಕಾವ್ಯ ಕಥಾ ಸಂಗಮ- ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಪುಸ್ತಕಗಳ ಬಹಳ ಮುಖ್ಯ. ಇವು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಆದರೆ ಪ್ರಸ್ತುತ ಪುಸ್ತಕ ಓದುವ ಸಂಸ್ಕೃತಿ ಮರೆಯಾಗಿ ಬೇರೆ ಬೇರೆ ಮಾಧ್ಯಮಗಳನ್ನು ಗಮನಿಸಲಾಗುತ್ತದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸಾಹಿತ್ಯ ಕೃತಿಗಳು ಹಾಗೂ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಟಿವಿ, ಮೊಬೈಲ್‌ ಬಳಕೆ ಕಡಿಮೆ ಮಾಡಿ, ಓದುವ ಕಡೆಗೆ ಗಮನ ನೀಡಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ. ತ್ಯಾಗರಾಜು, ಸಂಪದಸಾಲು ಸಂಪಾದಕ ವೆಂಕಟೇಶ್‌ ಸಂಪ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯಾಧ್ಯಕ್ಷೆ ಮಂಜುಳಾ ಪಾವಗಡ, ಲೇಖಕಿಯರಾದ ಪುಷ್ಪಾ ನಾಗತಿಹಳ್ಳಿ, ಬಿ.ಎ. ಪಾರ್ವತಿ, ನೀವಿಯಾ ಗೋಮ್ಸ್‌, ಮಧುಸೂದನ್‌ ಆಚಾರ್‌ ಮುಖ್ಯ ಅತಿಥಿಗಳಾಗಿದ್ದರು.

ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಶ್ರುತಿ ಮಧುಸೂದನ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ತಾರಾ ಸಂತೋಷ್‌ ಸ್ವಾಗತಿಸಿದರು. ವೀಣಾ ಸುಧೀಂದ್ರ ಪ್ರಾರ್ಥನಾ ಗೀತೆ, ನಿಮಿಷಾ ಕರಣಂ ಸ್ವಾಗತ ನೃತ್ಯ, ವೀಣಾ ಸುಧೀಂದ್ರ ಹಾಗೂ ಎಸ್‌. ಮಹೇಶ್ವರಿ ಕನ್ನಡಾಂಬೆಗೆ ನಮನ ನೃತ್ಯ ಪ್ರದರ್ಶಿಸಿದರು. ಸೌಮ್ಯಾ ಕೋಠಿ ನಿರೂಪಿಸಿದರು.

ರಾಜ್ಯ ಮಟ್ಟದ ಅಕ್ಷರನಾದ ಆದಿಕವಿ ಪಂಪ ಪ್ರಶಸ್ತಿ, ಅಕ್ಷರನಾದ ಹೊನ್ನ ಹೊತ್ತಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾಹಿತಿಗಳು ಪಾಲ್ಗೊಂಡಿದ್ದರು.

Share this article