ಗಳಿಸಿದ ವಿದ್ಯೆ ಸಮಾಜಕ್ಕೆ ಬಳಕೆಯಾಗಬೇಕು: ರಟ್ಟೀಹಳ್ಳಿ ಶ್ರೀ

KannadaprabhaNewsNetwork |  
Published : Jan 03, 2025, 12:30 AM IST
ಫೋಟೊ ಶೀರ್ಷಿಕೆ: 2ಆರ್‌ಎನ್‌ಆರ್2ರಾಣಿಬೆನ್ನೂರು ತಾಲೂಕಿನ ಜೋಯಿಸರಹರಳಹಳ್ಳಿ ಶ್ರೀ ಗುರುಶಾಂತೇಶ್ವೇರ ಬೆಟ್ಟದಲ್ಲಿ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ.ಶಿವಯೋಗಿ ದೇವರು ಹಾಗೂ ಜಿ.ಬಿ.ಮಾಸಣಗಿ ಇವರುಗಳನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಸಾಧಕರ ಬದುಕಿನಲ್ಲಿ ಸಾಧನೆಯ ಗೊಂದಲಗಳನ್ನು ತಮ್ಮ ತಪೋಬಲದಿಂದ ಹಾನಗಲ್ ಕುಮಾರಸ್ವಾಮಿಗಳು ಪರಿಹರಿಸಿದ್ದಾರೆ ಎಂದು ಹಾವೇರಿಯ ಹುಕ್ಕೇರಿಮಠ ಸದಾಶಿವ ಮಹಾಸ್ವಾಮಿಗಳು ನುಡಿದರು.

ರಾಣಿಬೆನ್ನೂರು: ಸಾಧಕರ ಬದುಕಿನಲ್ಲಿ ಸಾಧನೆಯ ಗೊಂದಲಗಳನ್ನು ತಮ್ಮ ತಪೋಬಲದಿಂದ ಹಾನಗಲ್ ಕುಮಾರಸ್ವಾಮಿಗಳು ಪರಿಹರಿಸಿದ್ದಾರೆ ಎಂದು ಹಾವೇರಿಯ ಹುಕ್ಕೇರಿಮಠ ಸದಾಶಿವ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಜೋಯಿಸರಹರಳಹಳ್ಳಿ ಶ್ರೀ ಗುರುಶಾಂತೇಶ್ವರ ಬೆಟ್ಟದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲಿಂ ಶ್ರೀ ಗುರುಶಾಂತ ಶಿವಯೋಗಿಗಳ ಜೀವಂತ ಸಮಾಧಿ ಜೀರ್ಣೋದ್ಧಾರ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಕಾರ್ತಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸಂಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸಿದರು. ಇಂತಹ ಪಾವನ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವೆಲ್ಲಾ ಗಮನಹರಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಗಳಿಸಿದ ವಿದ್ಯೆ ಸಮಾಜಕ್ಕೆ ಬಳಕೆಯಾಗಬೇಕು. ವಿದ್ಯೆ ಜ್ಞಾನ ನೀಡುವಂತಾಗಬೇಕು. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ರೂಢಿಸಬೇಕು. ವೀರಶೈವ ಆಚಾರ ವಿಚಾರ ಪರಂಪರೆಯಲ್ಲಿ ಅಗಾಧವಾದ ಅದಮ್ಯ ಜ್ಞಾನವಿದೆ ಎಂದರು. ಲಿಂ. ಗುರುಶಾಂತ ಶಿವಯೋಗಿಗಳ ಜೀವಂತ ಸಮಾಧಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎಚ್. ಮುದ್ದಪ್ಪಳವರ ಅಧ್ಯಕ್ಷತೆ ವಹಿಸಿದ್ದರು.ಲಿಂ. ಕುಮಾರ ಮಹಾಸ್ವಾಮಿಗಳವರ ಜೀವನ ಸಾಧನೆ ಕುರಿತು ಬೆಳಗಾವಿಯ ಕಾರಂಜಿ ಮಠದ ಡಾ.ಶಿವಯೋಗಿ ದೇವರು ಹಾಗೂ ಲಿಂ.ಗುರುಶಾಂತ ಶಿವಯೋಗಿಗಳವರ ಜೀವನ ಮತ್ತು ಸಾಧನೆ ಕುರಿತು ಜಿಲ್ಲಾ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಉಪನ್ಯಾಸ ನೀಡಿದರು.ಶ್ರೀ ಮಠದ ಭಜನಾ ಸಂಘದವರು ಸಂಗೀತ ಸುಧೆಯನ್ನು ಹರಿಸಿದರು.ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಶಂಕರಗೌಡ ಚೌಡಪ್ಪಳವರ, ಚನ್ನಬಸಮ್ಮ ಹೊಟ್ಟಿಗೌಡರ, ಗದಿಗೆಪ್ಪಗೌಡ ಹೊಟ್ಟಿಗೌಡರ, ಡಾ. ಕೆ.ಎಚ್. ಮುಕ್ಕಣ್ಣವರ, ಜಗದೀಶ ಮಳಿಮಠ, ಸಿದ್ದು ಹೊರಕೇರಿ, ಡಾ. ಕಾಂತೇಶ ಗೋಡಿಹಾಳ, ಎಸ್.ಎಚ್. ಪಾಟೀಲ, ನವ್ಯ ನಾರದ, ಡಾ. ಮಂಜುನಾಥ ಮುದ್ದೆಮ್ಮನವರ, ವಿ.ಎಸ್.ಬಡಿಗೇರ, ಕುಮಾರ ಶಂಕ್ರಿಕೊಪ್ಪ, ಬಸನಗೌಡ ಉಮ್ಮನಗೌಡ್ರ, ಶ್ರೀಧರ ಅಗಸೀಬಾಗಿಲ, ಎಸ್.ಎಂ. ಪಾಟೀಲ, ಸೋಮಶೇಖರ ಪಾಟೀಲ, ಪ್ರಕಾಶ ಉಜ್ಜಮ್ಮನವರ, ಸುರೇಶ ಮಾಗನೂರ, ಜಿ.ಎಸ್. ಮುದ್ದಪ್ಪಳವರ, ಹೊನ್ನಪ್ಪ ತಳವಾರ, ಬಸವರಾಜ ಚೌಡಪ್ಪಳವರ, ರುದ್ರಪ್ಪ ಮಾರೇರ ಹಾಗೂ ಸ್ಥಳೀಯ ನಾಗರಿಕರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಶ್ರೀಮಠದ ಹಲವಾರು ಭಕ್ತರು ಉಪಸ್ಥಿತರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ