ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಷಟ್ ಎಂದರೆ 6, ಸ್ಥಲ ಎಂದರೆ ಹಂತ. ಶರಣರು ಭಕ್ತಸ್ಥಲ, ಮಹೇಶ್ವರಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿ ಸ್ಥಲ, ಶರಣಸ್ಥಲ, ಐಕ್ಯಸ್ಥಲ ಎಂದು ಷಟ್ ಸ್ಥಲಗಳನ್ನು ನೀಡಿದ್ದಾರೆ. ಷಟ್ ಸ್ಥಲಗಳನ್ನು ಸಾಧನೆ ಮಾಡಿದಾಗ ಲಿಂಗಾಂಗ ಸಾಮರಸ್ಯ ಹೊಂದಬಹುದು ಎಂದು ಶರಣರು ವೈಜ್ಞಾನಿಕವಾಗಿ ತೋರಿಸಿಕೊಟ್ಟಿದ್ದಾರೆ. ಈ ಷಟ್ ಸ್ಥಲಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಲಿಂಗಾಂಗ ಸಾಮರಸ್ಯ ಪಡೆಯಲು ಸಾಧ್ಯ ಎಂದರು.
ಷಟ್ ಸ್ಥಲಗಳು ಮಾನವನ ಆತ್ಮೋದ್ದಾರ, ಔನ್ಯತ್ಯ ಉಂಟು ಮಾಡುತ್ತವೆ. ಬಸವಾದಿ ಶರಣರು ನೀಡಿದ ಮಹತ್ವ ಪೂರ್ವ ಹಂತಗಳಾಗಿವೆ. ಇವುಗಳ ಪಾಲನೆ, ಸ್ವಾಧ್ಯಾಯ ಮಾಡಬೇಕು. ಇವು ಧರ್ಮ ತಾತ್ವಿಕ, ಧಾರ್ಮಿಕ ನೀತಿಯನ್ನು ತಿಳಿಸುತ್ತವೆ. ಸತ್ಯ, ಜೀವ ಜಗತ್ತನ್ನು ತಿಳಿಸುತ್ತವೆ. ಭಕ್ತಸ್ಥಲ ಆರಂಭದ ಹಂತವಾಗಿದೆ. ನಂತರ ಮಹೇಶ್ವರಸ್ಥಲ 2ನೇ ಹಂತವಾಗಿದೆ. ಷಟ್ ಸ್ಥಲದಲ್ಲಿ ತತ್ವ ನಿಷ್ಠೆ, ಅಚಲ ಶ್ರದ್ಧೆ ಇಟ್ಟುಕೊಳ್ಳಬೇಕು. ಏನಾದರೂ ಸಿದ್ಧಿಸಿಕೊಳ್ಳಬೇಕಾದರೆ ಏಕಾಗ್ರತೆ ಅಗತ್ಯವಿದೆ. ಕ್ರಿಯೆಯಿಂದ ಮಹೇಶ್ವರ ಸ್ಥಲ ಕೂಡಿದೆ. ದ್ವೇಷಕ್ಕೆ ಅವಕಾಶ ಕೊಡದೆ ಸ್ಥಲಗಳನ್ನು ಸಾಧಿಸಬೇಕು. ಶರಣರ ಅನುಭವ ಮಂಟಪದಲ್ಲಿ ತಮ್ಮತನದ ಹುಡುಕಾಟ ಮಾಡುತ್ತಿದ್ದರು. ಯಾವುದೇ ಆಸೆ ಹೊಂದದೇ ಇರುವವರೇ ಶರಣರಾಗಿದ್ದಾರೆ. ಭಾವವನ್ನು ನಿರ್ಭಾವ ಮಾಡಿಕೊಂಡು ನಿಸಂದೇಹವಾಗಿ ನಿಶ್ಚಿಂತವಾಗಿ, ನಿರ್ಲೀಪ್ತವಾಗಿ ಷಟ್ ಸ್ಥಲಗಳನ್ನು ಸಾಧಿಸಬೇಕೆಂದ ಅವರು, ಭಕ್ತಸ್ಥಲ, ಮಹೇಶ್ವರಸ್ಥಲದ ಕುರಿತು ಹೇಳಿದರು.ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಗುರುನಾಥ ದಡ್ಡೆ ಮಾತನಾಡಿ, ಬಸವೇಶ್ವರರು ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾನತೆಯನ್ನು ತಂದರು. ಕಾಯಕ, ದಾಸೋಹ, ಅನುಭಾವ ತತ್ವ ಸಮಾಜದಲ್ಲಿ ಜಾರಿಗೆ ತಂದರು. ಬಸವೇಶ್ವರರು ರಚಿಸಿರುವ ವಚನಗಳಲ್ಲಿರುವ ದಿವ್ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾದರೆ ಅವರಿಗೆ ನಿಜವಾಗಿ ಗೌರವ ಸಲ್ಲಿಸದಂತಾಗುತ್ತದೆ. 3 ದಿನಗಳ ಕಾಲ ಪ್ರಾಧಿಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳಲ್ಲಿ ಜನತೆ ಹೆಚ್ಚು ಭಾಗವಹಿಸಿ ಶರಣರ ವಿಚಾರಗಳನ್ನು ಅರಿತುಕೊಳ್ಳುವಂತಾಗಬೇಕು ಎಂದರು.
ಎಸ್.ಎಂ.ಬಿಸ್ಟಗೊಂಡ ಸ್ವಾಗತಿಸಿದರು. ವೈ.ಡಿ.ದೊಡಮನಿ, ಎಲ್.ಎಸ್.ಹಿರೇಮಠ ನಿರೂಪಿದರು.