-ಕಳೆದ 3 ದಿನದಿಂದ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಬಸವಳಿದಿತ್ತು ಕಲಬುರಗಿ । ಬುಧವಾರ 1 ಗಂಟೆಕಾಲ ಸುರಿದ ಮಳೆ ಕನ್ನಡಪ್ರಭ ವಾರ್ತೆ ಕಲಬುರಗಿ
ಸಂಜೆ ಹೊತ್ತು ಏಕಾಏಕಿ ಕಲಬುರಗಿ ಧರೆಗಿಳಿದ ವರುಣ ದೇವ ಬಿಟ್ಟು ಬಿಡದಂತೆ 1 ಗಂಟೆಗೂ ಹೆಚ್ಚಿನ ಅವಧಿ ಬಿರುಸಿನಂದ ಸುರಿದ. ಗುಗುಡು, ಬಿರುಗಾಳಿಯ ಅಬ್ಬರವೂ ಜೋರಾಗಿತ್ತು. ಹೀಗಾಗಿ 1 ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ನಗರದಲ್ಲಿ ತಂಪು ವಾತಾವರಣ ಮೂಡಿದ್ದರಿಂದ ಜನತೆ ನಿಟ್ಟುಸಿರುವ ಬಿಟ್ಟರು. ಕಳೆದ 3 ದಿನದಿಂದಲಂತೂ ಸೆಖೆ, ಹಬಿಸಿಗಾಳಿ, ಉಷ್ಣ ಅಲೆಯಿಂದಾಗಿ ಬಸವಳಿದಿದ್ದ ನಗರವಾಸಿಗಳು ಈ ಮಳೆಯಿಂದಾಗಿ ಕಲಬುರಗಿ ಕೂಲ್ ಆಯ್ತು ಎಂದು ಆಡಿಕೊಂಡರು.
ಮಲೆ ಸುರಿದಿದ್ದರಿಂದ ನೀರು ರಸ್ತೆಯಲ್ಲಿ ರಭಸವಾಗಿ ಹರಿದ ಕಾರಣ ರಿಂಗ್ ರಸ್ತೆಯ ನಾಗನಹಳ್ಳಿ ಬಳಿ ಕೆಲಹೊತ್ತು ಸಂಚಾರ ಬಂದ್ ಆಗಿತ್ತು. ಇನ್ನು ಕೋರಂಟಿ ಹನುಮಂತ ದೇವರ ಮಂದಿರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ರೇಲ್ವೆ ಮೇಲ್ ಸೇುವೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.ಇದಲ್ಲದೆ ನಗರದ ಹಳೆ ಜೇವರ್ಗಿ ರಸ್ತೆ, ಮಾರುಕಟ್ಟೆ ಪ್ರದೇಶ, ಜನತಾ ಕಾಲೋನಿ, ಶರಣಬಸವೇಶ್ವರ ಕೆರೆ ಸುತ್ತಲಿನ ಪ್ರದೇಶ ಇಲ್ಲೆಲ್ಲಾ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.