ಸಾಗರ: ಶುಂಠಿ ಬೆಳೆಗೆ ನೀರು ಹರಿಸಲು ಹೊಲಕ್ಕೆ ಹೋಗಿದ್ದಾಗ ಪಕ್ಕದ ಗುಡಿಸಲಿನ ಎದುರು ನಿಂತಿದ್ದ ವ್ಯಕ್ತಿ ಮೇಲೆ ಬೇಟೆಗೆ ಬಂದಿದ್ದ ಅಪರಿಚಿತರು ತೊಡೆಗೆ ಗುಂಡು ಹೊಡೆದು ಗಾಯಗೊಳಿಸಿದ ಘಟನೆ ತಾಲೂಕಿನ ಮಾಲ್ವೆಯಲ್ಲಿ ಬುಧವಾರ ರಾತ್ರಿ 8.40ರ ವೇಳೆಗೆ ನಡೆದಿದೆ.
ಸ್ಥಳೀಯರಾದ ದೇವರಾಜ್ ಹಾಗೂ ರವಿ ಅವರ ಅಣ್ಣ ತೇಜು ಸಹಾಯದಿಂದ ಬಿಂದು ನಗರದ ಖಾಸಗಿ ಆಸ್ಪತ್ರೆಗೆ ರವಿ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಡತೊಡೆಗೆ ತೀವ್ರವಾದ ಗಾಯವಾಗಿದ್ದು, ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಡುಪ್ರಾಣಿಗಳ ಬೇಟೆಗೆ ಬಂದಿದ್ದ ಅಪರಿಚಿತರು ರವಿ ಅವರ ಕಾಲಿಗೆ ಗುಂಡು ಹೊಡೆದು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಬಿಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆದಿದೆ.- - - ಫೋಟೋ: ಗನ್.ಜೆಪಿಜಿ(ಸಾಂದರ್ಭಿಕ ಚಿತ್ರ)