ಸಮಯದ ಸದ್ಬಳಕೆಯೇ ಸಾಧನೆಯ ಮಂತ್ರ-ಡಾ. ದಾನಮ್ಮನವರ

KannadaprabhaNewsNetwork |  
Published : Jan 16, 2026, 01:00 AM IST
ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಂದೀಪ ಅಗರ್ವಾಲ್, ರಾಜೇಂದ್ರ ಹೊಸಮಠ ಇತರರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರತಿಯೊಬ್ಬರು ಸಮಯದ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಬರುವ ತೊಂದರೆ ತಾಪತ್ರಯಗಳನ್ನು, ಕಷ್ಟ್ಟ-ಕಾರ್ಪಣ್ಯಗಳನ್ನು ಮೆಟ್ಟಿಲು ಮಾಡಿಕೊಂಡು ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಪ್ರತಿಯೊಬ್ಬರು ಸಮಯದ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಬರುವ ತೊಂದರೆ ತಾಪತ್ರಯಗಳನ್ನು, ಕಷ್ಟ್ಟ-ಕಾರ್ಪಣ್ಯಗಳನ್ನು ಮೆಟ್ಟಿಲು ಮಾಡಿಕೊಂಡು ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ತಾಲೂಕಿನ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಗುಜರಾತ ಅಂಬುಜಾ ಎಕ್ಸಪೋಟ್ಸ್‌ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳ ಶೌಚಾಲಯ, ಸ್ನಾನಗೃಹ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾಧನೆಯ ಶಿಖರವನ್ನು ಏರಿದ ಸ್ವಾಮಿ ವಿವೇಕಾನಂದ, ಮಹಾವಿಜ್ಞಾನಿ ಸಿ.ವಿ. ರಾಮನ್, ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ವ್ಯಕ್ತಿಗಳು ಮೊದಮೊದಲು ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ಸಮಯಾವಕಾಶ ಕಲ್ಪಿಸುವಲ್ಲಿ ಆ ಭಗವಂತ ಯಾರಿಗೂ ತಾರತಮ್ಯ ತೋರಿಲ್ಲ್ಲ, ಪ್ರತಿಯೊಬ್ಬರಿಗೂ ಲಭ್ಯವಿರುವÀ ಸಮಯಾವಕಾಶ 24*7 ಅಷ್ಟೇ. ಈ ಸಮಯವನ್ನು ಸಾಧ್ಯವಾದಷ್ಟು ಸದ್ಬಳಕೆ ಮಾಡಿಕೊಂಡುವರೆಲ್ಲರೂ ಸಾಧನೆಯ ಶಿಖರವನ್ನೇರಿ, ಮಹಾನ ಸಾಧಕರಾಗಿ ನಮಗೆ ಆದರ್ಶಪ್ರಾಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಜೀವನದಲ್ಲಿ ಗುರಿ ಸಾಧನೆಯೆಡೆಗೆ ಹೆಜ್ಜೆ ಹಾಕಬೇಕು ಎಂದರು.ಗುಜರಾತ್ ಅಂಬುಜಾ ಎಕ್ಸ್ಪೋಟ್ಸ್ ಲಿಮಿಟೆಡ್ ನಿರ್ದೇಶಕ ಸಂದೀಪ ಅಗರ್ವಾಲ್ ಮಾತನಾಡಿ, ನಮ್ಮ ಪ್ರಾಯೋಜನೆ ಇಲ್ಲಿ ಸಾರ್ಥಕ ಬಳಕೆಯಾಗುವಲ್ಲಿ ಅನುಮಾನವಿಲ್ಲ್ಲ. ಇಲ್ಲಿ ಗಾಂಧಿ ತತ್ವಾದರ್ಶಗಳು ಇನ್ನೂ ಜೀವಂತವಾಗಿರುವ ಪರಿಸರ ಕಂಡು ಪುಳಕೀತನಾಗಿದ್ದೇನೆ ಎಂದರು.ಗುಜರಾತ್ ಅಂಬುಜ ಎಕ್ಸಪೋಟ್ಸ್ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಹೊಸಮಠ ಮಾತನಾಡಿ, ಇದೊಂದು ಅಪರೂಪದ ವಿದ್ಯಾಸಂಸ್ಥೆಯಾಗಿದೆ ಎಂದು ಬಣ್ಣಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸಂದೀಪ ಅಗರ್ವಾಲ್, ರಾಜೇಂದ್ರ ಹೊಸಮಠ, ಮಾನವ ಸಂಪನ್ಮೂಲ ಅಧಿಕಾರಿ ಆನಂದ ಹರ್ತಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ ಧರ್ಮದರ್ಶಿ ಶಂಭುಲಿಂಗಪ್ಪ ಅರಳಿ, ದಯಾನಂದ ಕಲಕೋಟಿ, ಪ್ರಭುಲಿಂಗಪ್ಪ ಗೌರಿಮನಿ, ಎಂ.ಎಂ. ವಗ್ಗಣ್ಣನವರ, ಚಂದ್ರಶೇಖರ ಅರಳಿಹಳ್ಳಿ, ಹಿರಿಯ ವಿದ್ಯಾರ್ಥಿಗಳಾದ ನಾಗರಾಜ ನೀಲಣ್ಣನವರ, ಕೃಷಾಜೀ ಡೊಳ್ಳೆಣ್ಣನವರ, ಪ್ರಾಚಾರ್ಯ ಎಫ್.ಐ. ಶಿಗ್ಲಿ, ಮುಖ್ಯೋಪಾಧ್ಯಾಯ ಎನ್.ಎಂ. ಹಸರಡ್ಡಿ, ಗೀತಾ ಮರಡೂರ, ಜಿ.ಪಿ.ಕೋರಿ, ಗುರುಕುಲದ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಸ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ ಅಂಕಲಕೋಟಿ ವಂದಿಸಿದರು. ಶಾಂತವೀರಯ್ಯ ಹಿರೇಮಠ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಎಂ.ಐ. ಚಿಂದಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ