ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕುಪ್ಪಳಿಯ ಕವಿಮನೆ ಆವರಣದಲ್ಲಿ ನಿರ್ಮಿಸಲಾದ ವಿಶ್ವಮಾನವ ಸಂದೇಶ ಫಲಕವನ್ನು ಗುರುವಾರ ಅನಾವರಣಗೊಳಿಸಿ ಅವರು ಮಾತನಾಡಿ, ಕುಪ್ಪಳಿಗೆ ಭೇಟಿ ನೀಡುವ ವಿದೇಶಿಯರಿಗೂ ಕವಿ ಪರಿಚಯ ಸುಲಭವಾಗುವಂತೆ ಬಹಳ ಅಚ್ಚುಕಟ್ಟಾಗಿ ಫಲಕ ನಿರ್ಮಿಸಲಾಗಿದೆ. ಅನೇಕರಿಗೆ ಇದು ಸ್ಪೂರ್ತಿ, ಪ್ರೇರಣೆ ನೀಡಲಿದೆ ಎಂದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್, ಕುವೆಂಪು ಸೈದ್ಧಾಂತಿಕವಾಗಿ ರಾಜೀ ಮಾಡಿಕೊಳ್ಳದ ಅತ್ಯುತ್ತಮ ಶಿಕ್ಷಕ. ಸಮಸ್ಯೆ, ಸವಾಲುಗಳನ್ನು ಗಟ್ಟಿಯಾದ ನಿರ್ಧಾರ ದಿಂದ ಪ್ರಕಟಿಸಿ ತಮ್ಮ ವೈಕ್ತಿತ್ವದ ಅನಾವರಣ ಮಾಡಿದ್ದಾರೆ. ಕರ್ನಾಟಕ ಏಕೀಕರಣ, ಆಡಳಿತ ಭಾಷೆಗೆ ಒತ್ತಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶರತ್ ಅನಂತಮೂರ್ತಿ, ವಿಶ್ವಮಾನವ ಸಂದೇಶ ಮಾನವೀಯತೆಯ ಮುಂದಿನ ಹೆಜ್ಜೆಗೆ ದಾರಿದೀಪವಾಗಿದೆ. ಸಮಾನತೆ ಮಾರ್ಗವನ್ನು ವಿಶ್ವಕ್ಕೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಪ್ರಮುಖರಾದ ಎಂ.ಸಿ.ನರೇಂದ್ರ, ಸಸಿತೋಟ ದಯಾನಂದ, ಡಿ.ಎಂ.ಮನುದೇವ್, ಕೊಳವಾರ ನಾರಾಯಣಮೂರ್ತಿ ಇದ್ದರು.