ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

KannadaprabhaNewsNetwork |  
Published : Feb 18, 2024, 01:33 AM IST
ಪೋಟೋ೧೭ಸಿಎಲ್‌ಕೆ೦೩ ಮೃತ ರಾಜ ಭಾವಚಿತ್ರ.  | Kannada Prabha

ಸಾರಾಂಶ

ಫೆ.೧೨ರಿಂದ ವ್ಯಕ್ತಿಯೊಬ್ಬ ಕಾಣೆಯಾಗಿದ್ದ ಪ್ರಕರಣವೊಂದು ತಳಕು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು, ಇದೀಗ ಫೆ.೧೭ರ ಶನಿವಾರ ಗೌರಸಮುದ್ರ ಕಾವಲಿನ ಬಳಿಯ ಗುಂಡಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೂರು ಗ್ರಾಮದ ರಾಜ (೪೫) ಎಂಬ ವ್ಯಕ್ತಿ ಫೆ.೧೨ರಿಂದ ಕಾಣೆಯಾಗಿದ್ದು, ಈ ಬಗ್ಗೆ ಆತನ ಸಹೋದರ ಮಂಜುನಾಥ ತಳಕು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಇದೀಗ ಫೆ.೧೭ರ ಶನಿವಾರ ಗೌರಸಮುದ್ರ ಕಾವಲಿನ ಬಳಿಯ ಗುಂಡಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಾಜನ ಸಹೋದರರಾದ ರಾಮಚಂದ್ರಪ್ಪ ಮತ್ತು ಮಂಜುನಾಥ, ರಾಜ ಸೋಮವಾರ ನಮ್ಮ ಮನೆಯಿಂದ ಹೊರಹೋದವನು ಮತ್ತೆ ವಾಪಸ್‌ ಬರಲಿಲ್ಲ. ಎಲ್ಲೆಡೆ ಹುಡುಕಾಡಿ ಸಿಗದೇ ಇದ್ದಾಗ ತಳಕು ಪೊಲೀಸರಿಗೆ ದೂರು ನೀಡಿದ್ದೆವು. ಆದರೆ, ಶನಿವಾರ ಬೆಳಗ್ಗೆ ಗೌರಸಮುದ್ರ ಕಾವಲಿನ ಗುಂಡಿಯಲ್ಲಿ ಯಾವುದೋ ಶವ ಇರುವುದಾಗಿ ಮಾಹಿತಿ ಬಂದಾಗ ಅಲ್ಲಿ ಹೋಗಿ ನೋಡಲಾಗಿ ಅದು ನಮ್ಮ ಸಹೋದರ ರಾಜ ಶವವಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಕೊಲೆ ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ: ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ರಾಜಣ್ಣ, ತಳಕು ವೃತ್ತ ನಿರೀಕ್ಷಕ ರಾಜಶೇಖರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ಲೋಕೇಶ್ ಪ್ರಕರಣ ದಾಖಲಿಸಿದ್ದಾರೆ. ಕೊಲೆ ರಹಸ್ಯವನ್ನು ಬೇಧಿಸಲು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಖಾಸಗಿ ಬಸ್ ನಿಲ್ದಾಣದಲ್ಲಿ ಅನಾಮಧೇಯ ಶವ ಪತ್ತೆ ಚಳ್ಳಕೆರೆ: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ನಿತ್ರಾಣಗೊಂಡ ಸುಮಾರು ೫೦ ವರ್ಷ ವಯಸ್ಸಿನ ವ್ಯಕ್ತಿಯ ಶವ ದೊರಕಿದ್ದು, ಈತನ ಬಲಗಾಲಿಗೆ ಗಾಯ ವಾಗಿದ್ದಲ್ಲದೆ, ಹೊಟ್ಟೆಗೆ ಅನ್ನ, ಆಹಾರವಿಲ್ಲದೆ ನಿತ್ರಾಣಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪಿಎಸ್‌ಐ ಕೆ.ಸತೀಶ್‌ನಾಯ್ಕ ಪ್ರಕರಣದ ವಿಚಾರಣೆ ನಡೆಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ