ಮನುಷ್ಯ ಕಂಡುಹಿಡಿದ ಮೌಲಿಕ ಸಂಶೋಧನೆ ಪುಸಕ್ತದ ಆವಿಷ್ಕಾರ

KannadaprabhaNewsNetwork |  
Published : Apr 16, 2024, 01:04 AM IST
ಗಜೇಂದ್ರಗಡ ಚಿತ್ರಕ್ಷಾರ ಪುಸಕ್ತ ಬಿಡುಗಡೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಲೇಖಕಿ ಹರಿಶ್ರೀಯವರ ಬರಹದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಲೇಖಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸ

ಗಜೇಂದ್ರಗಡ: ಮನುಷ್ಯ ಕಂಡುಹಿಡಿದ ಅತ್ಯಂತ ಮೌಲಿಕ ಮತ್ತು ದೊಡ್ಡ ಸಂಶೋಧನೆ ಎಂದರೆ ಪುಸ್ತಕದ ಆವಿಷ್ಕಾರ ಎಂದು ನಿವೃತ್ತ ಉಪನ್ಯಾಸಕ ಬಿ.ಎ. ಕೆಂಚರಡ್ಡಿ ಹೇಳಿದರು.

ಪಟ್ಟಣದ ರೋಣ ರಸ್ತೆಯ ರೇವಡಿ ಅವರ ಪ್ಲಾಟ್‌ನಲ್ಲಿ ಭಾನುವಾರ ನಡೆದ ಕನ್ನಡ ಪ್ರಕಾಶನ ಪ್ರಕಟಿಸಿದ ಲೇಖಕಿ ಹರಿಶ್ರೀ ವೈ.ಜೆ ಅವರ ಚಿತ್ರಾಕ್ಷರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುಕ್ ಬ್ರಹ್ಮ್ ಸಂಪಾದಕ ದೇವು ಪತ್ತಾರ ಮಾತನಾಡಿ, ಕೇಳಿದಾಗ, ಕೇಳಿದ ಸಮಯದೊಳಗೆ ಕೇಳಿದಷ್ಟೇ ಶಬ್ದಗಳ ಮಿತಿಯೊಳಗೆ ಲೇಖನ ಬರೆದುಕೊಟ್ಟ ಶ್ರೇಯ ಲಲಿತಕಲಾ ಮೀಮಾಂಸಕ ಕೆ.ವಿ. ಸುಬ್ರಮಣ್ಯಂ ಅವರಿಗೆ ಸಲ್ಲುತ್ತದೆ. ಇದು ಅವರ ಸಾಹಿತ್ಯ ಬದ್ಧತೆಗೆ ಸಾಕ್ಷಿಯಾಗಿದೆ. ಮೂರುವರೆ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಕಲಾಸಾಹಿತ್ಯದ ಕುರಿತು ಕೆವಿಎಸ್ ಅವರು ಬರೆದಿದ್ದು, ಅವೆಲ್ಲ ಸಂಕಲನಗೊಂಡು ಸಂಪುಟಗಳಾಗಿ ಪ್ರಕಟವಾದರೆ ಕನ್ನಡ ಸಾಹಿತ್ಯ ಮತ್ತು ಕಲಾಲೋಕದಲ್ಲಿ ಮಹತ್ವದ ದಾಖಲೆಯಾಗುತ್ತವೆ. ಎಲ್ಲ ಲೇಖನಗಳನ್ನು ತಮ್ಮ ಗ್ರಂಥಾಲಯ ಮತ್ತು ಪತ್ರಿಕೆಗಳಿಂದ ಆಯ್ದು ಕೊಟ್ಟರೆ, ಆ ಗ್ರಂಥಗಳನ್ನು ಯಾರದರೂ ಪ್ರಕಟಿಸಲಿದ್ದಾರೆ. ಕಲಾ ಲೋಕದ ವಿವಿಧ ಆಯಾಮಗಳ ದಾಖಲೆಗಳ ಕುರಿತಾಗಿ ಬರೆದ ಬರಹಗಳ ಮೌಲ್ಯದ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿ ಸಭಿಕರ ಗಮನ ಸೆಳೆದ ಅವರು, ಮಯೂರ ಪತ್ರಿಕೆಯಲ್ಲಿ ಕೆವಿಎಸ್ ಅವರ ಲಲಿತಕಲಾ ಬರಹಗಳಿಗೆ ಚಿತ್ರಾಕ್ಷರ ಎಂಬ ಹೆಸರಿನಿಂದ ಪ್ರಕಟಿಸಿದ್ದೆವು. ಆ ಹೆಸರೇ ಈ ಪುಸ್ತಕದ್ದು ಎಂದುಕೊಂಡಿದ್ದೆ. ಆದರೆ ಅದೇ ಹೆಸರಿನ ಪತ್ರಿಕೆಯನ್ನು ಸುಬ್ರಮಣ್ಯಂ ಅವರೆ ಪ್ರಕಟಿಸಿದ್ದರಂತೆ ಎಂದು ಮುಕ್ತವಾಗಿ ನುಡಿಯುವುದರ ಜತೆಗೆ ಅವರ ಚಿತ್ರಗಳ ಬಗೆಗೂ ಮಾತಾಡಿದರು.

ಚಿತ್ರಾಕ್ಷರ ಪುಸ್ತಕ ಪ್ರಕಟಿಸಿ ಪ್ರಕಾಶಿಸಿದ ಕಲಾವಿದ ಪುಂಡಲೀಕ ಕಲ್ಲಿಗನೂರ ಪುಸ್ತಕ ಪ್ರಕಟಣೆಯ ಸಂತೋಷವನ್ನು ಹಂಚಿಕೊಳ್ಳುವುದರ ಜತೆಗೆ ಕೆಲವು ಸವಾಲುಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮಂಜುಳಾ ರೇವಡಿ ಲೇಖಕಿ ಹರಿಶ್ರೀಯವರ ಬರಹದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಲೇಖಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದು ಕಂಡು ಬಂದಿತು.ಇತ್ತ ಬೆಂಗಳೂರಿನ ಹೊರಗಡೆಗೆ ಪುಸ್ತಕಗಳನ್ನು ಪ್ರಕಟಿಸಿ ಪ್ರಕಾಶಿಸಿದ ಕನ್ನಡ ಪ್ರಕಾಶನದ ಬಗೆಗೆ ಸಭಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದವು.

ಈ ವೇಳೆ ಕೆ.ವಿ.ಸುಬ್ರಹಣ್ಯಂ, ಲೇಖಕಿ ಹಿರಿಶ್ರೀ ವೈ.ಜೆ, ವಿಜಯ್ ಕಿರೇಸೂರ್ ಹಾಗೂ ಎ.ಎಸ್. ಮಕಾನದಾರ, ಅಮರೇಶ ಗಾಣಿಗೇರ, ಆರ್.ಕೆ. ಬಾಗವಾನ, ಅಶೋಕ ಕಲ್ಲಿಗನೂರ, ಶರಣಪ್ಪ ಉಪ್ಪಿನಬೇಟಗೇರಿ ಸೇರಿ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ