ಭಾರತದ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಠವಾದ ಸಂವಿಧಾನವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆಯ ಉಪನ್ಯಾಸಕ ವಿಜಯಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಭಾರತದ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಠವಾದ ಸಂವಿಧಾನವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆಯ ಉಪನ್ಯಾಸಕ ವಿಜಯಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು. ಭಾರತ ಆತ್ಮವಾಗಿ ಸಂವಿಧಾನವಿದೆ. ಮೂಲಭೂತ ಆಶಯಗಳನ್ನು ಅಳವಡಿಸಲಾಗಿದೆ. ಸಮಾಜವಾದದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಾರಲಾಗಿದೆ. ಸಾಮಾನ್ಯನಿಗೂ ಒಂದೇ, ಮತ, ಒಂದೇ ಕಾನೂನು, ರಾಷ್ಟ್ರಪತಿಗಳಿಗೂ ಒಂದೇ ಮತ, ಒಂದೇ ಕಾನೂನು ಇದೆ ಎಂದು ಅವರು ಹೇಳಿದರು.
ಸಬ್ ಇನ್ಸ್ ಪೆಕ್ಟರ್ ಮೂರ್ತಿ ಮಾತನಾಡಿ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಾರಿದ ಶಾಸನವಾಗಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಕಾರ್ಯಗಳನ್ನು ತಿಳಿಸಿಕೊಟ್ಟ ಗ್ರಂಥವಾಗಿದೆ ಎಂದರು. ಈ ವೇಳೆ ವಕೀಲರಾದ ಬಿ.ಎಚ್.ಚೇತನ್ ಕುಮಾರ್, ಮೋಹನ್ ಕುಮಾರ್ ಮತ್ತು ಡಾ.ಪ್ರಿಯಾಂಕ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಲ್ಲೂರು ತಿಮ್ಮೇಶ್ ವಹಿಸಿದ್ದರು. ಮುಖಂಡರಾದ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ವಿ.ಟಿ.ವೆಂಕಟರಾಮಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಪ್ರಾಂಶುಪಾಲ ನಂಜೇಗೌಡ, ರಾಮಕೃಷ್ಣಪ್ಪ, ಮಾಯಸಂದ್ರ ಸುಬ್ರಹ್ಮಣ್ಯ, ಬೆಸ್ಕಾನ ಎಇ ನಾರಾಯಣಪ್ಪ, ನಿವೃತ್ತ ಶಿಕ್ಷಕ ಬೋರಪ್ಪ, ಟಿಬಿ ಕ್ರಾಸ್ ಗೋವಿಂದರಾಜು, ಸಫ್ಜಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.