ಹಾಸನ : ಶೇ.80 ರಷ್ಟು ಹಾಸ್ಯದಿಂದ ಕೂಡಿರುವ ಮತ್ತು ಕುಟುಂಬ ಸಮೇತ ವೀಕ್ಷಣೆ ಮಾಡಬಹುದಾದ ಹಾಗೂ ಹಾಸನದ ನಿವಾಸಿ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ‘ಕೇದಾರ್ ನಾಥ್ ಕುರಿ ಫಾರಂ’ ಕನ್ನಡ ಚಲನಚಿತ್ರವು ಸೆ.೨೭ ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.
ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ ಚಿತ್ರದ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದು, ಎಲ್ಲರ ಮನ ಗೆಲ್ಲುವ ಸೆಂಟಿಮೆಂಟ್ ಪಾತ್ರ ನಿರ್ವಹಿಸಿದ್ದಾರೆ. ಶಿಬಾನಿ ಮೊದಲ ಬಾರಿಗೆ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಗ್ರಾಮೀಣ ಭಾಗದ ಹಿನ್ನೆಲೆ ಹೊಂದಿರುವ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ. ನಾಯಕ ನಟನು ಒಂದು ಕುರಿ ಫಾರಂನಲ್ಲಿದ್ದು, ನಂತರ ನಡೆಯುವ ಹಾಸ್ಯಮಯ ಘಟನೆಗಳು ಸಂಭವಿಸುತ್ತದೆ. ಈ ಚಿತ್ರದಲ್ಲಿ ಒಂದು ಹಾಡು ಮತ್ತು ಒಂದು ಫೈಟ್ ಇದೆ. ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಬೇಸರ ತರದೆ ಕೊಟ್ಟ ಹಣಕ್ಕೆ ಮನರಂಜನೆ ನೀಡಲಿದೆ ಎಂದು ತಿಳಿಸಿದರು.ನಾಯಕ ನಟ ಮಡೆನೂರು ಮನು ಮಾತನಾಡಿ, ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದಲ್ಲಿ ಶೇಕಡ ೮೦ ಭಾಗ ಹಾಸ್ಯ ಕಂಡು ಬಂದರೆ ಉಳಿದ ೨೦ ಭಾಗ ಕಥೆಯನ್ನು ಹೇಳುತ್ತದೆ. ಈ ಚಿತ್ರದಲ್ಲಿ ಉತ್ತಮವಾದ ಕಥೆಯಿದ್ದು, ಇದರಲ್ಲಿ ಮುಖ್ಯವಾಗಿ ಹಾಸ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.
ನಿರ್ಮಾಪಕ ಕೆ.ಎಮ್.ನಟರಾಜು, ಸಿದ್ದು ಮಂಡ್ಯ, ನಟಿ ಶಿವಾನಿ ಅಮರ್, ಹರಿಣಿ ಇತರರು ಹಾಜರಿದ್ದರು.