- ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನಾಗರಿಕರ ಕುಂದುಕೊರತೆ ಜನಸ್ಪಂದನ ಸಭೆ । ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸಿದ ಅಧ್ಯಕ್ಷರು
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರಸಭೆಗೆ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ 73 ಲಕ್ಷ ರು.ಗಳ ಕರ ವಸೂಲಿ ಮೂಲಕ ನಗರಸಭೆಗೆ ಆದಾಯ ಹಾಗೂ ಹದಗೆಟ್ಟ ರಸ್ತೆಗಳ ರಿಪೇರಿ ಸೇರಿದಂತೆ ''''ನಗರಸಭೆ ನಡೆ, ವಾರ್ಡ್ ಕಡೆ'''' ಅಭಿಯಾನದ ಮೂಲಕ ಚರಂಡಿ ಸ್ವಚ್ಛತೆ, ಕುಡಿಯುವ ನೀರು, ಮೂಲ ಸೌಕರ್ಯಗಳ ವಿಚಾರವಾಗಿ ಮುತುವರ್ಜಿ ವಹಿಸುವಲ್ಲಿ ಲಲಿತಾ ಅನಪುರ, ಜನಸ್ಪಂದನ ಮೂಲಕ ಜನಮನ ಸೆಳೆದರುನಾಗರಿಕರ ಕುಂದುಕೊರತೆಗಳ ಆಲಿಸಲು, ಮೇ 8 ರಿಂದ ''''ಜನಸ್ಪಂದನ'''' ಹಮ್ಮಿಕೊಳ್ಳುವುದಾಗಿ ''''ಕನ್ನಡಪ್ರಭ'''' ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದ ಅವರು, ಈ ಕಾರ್ಯಕ್ರಮದ ಆಯೋಜನೆ ಮೂಲಕ ನೂರಾರು ಜನರ ಅಹವಾಲುಗಳನ್ನು ಆಲಿಸಿ, ಪರಿಹಾರಕ್ಕೆ ಮುಂದಾಗಿದ್ದಾರೆ.ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ನೇತೃತ್ವದಲ್ಲಿ ನಿಗದಿಯಂತೆ ಬೆಳಗ್ಗೆ 11ಕ್ಕೆ ಜನಸ್ಪಂದನ ಸಭೆ ಆರಂಭಗೊಂಡಿತು. ಯಾದಗಿರಿ ನಗರದ 31 ವಾರ್ಡ್‌ಗಳಿಂದ ನೂರಾರು ಜನರು ಆಗಮಿಸಿ, ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ಗುಣಮಟ್ಟದ ರಸ್ತೆಗಳು, ವಿಳಂಬವಾಗುತ್ತಿರುವ ನಗರಸಭೆಯಲ್ಲಿನ ಸಾರ್ವಜನಿಕ ಕೆಲಸಗಳು ಶೀಘ್ರ ಆಗಬೇಕೆಂಬ ಬೇಡಿಕೆಗಳು ಸೇರಿದಂತೆಯೇ ವಿವಿಧ ಹತ್ತಾರು ಸಮಸ್ಯೆಗಳನ್ನು ಹೊತ್ತು ತಂದ ಜನರ ಅಹವಾಲಗಳನ್ನು ಸ್ವೀಕರಿಸಿದ ಅವರು, ತಕ್ಷಣದಲ್ಲೇ ಬಗೆಹರಿಯಬಹುದಾದ ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.
ತರಕಾರಿ ವ್ಯಾಪಾರಿಗಳು ತಮಗೆ ಆಗುತ್ತಿರುವ ಮಾರಾಟ ಸಮಸ್ಯೆ ವಿವರಿಸಿ, ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ತಮ್ಮನ್ನು ಕೆಲಸ ಮಾಡಲು ಬಿಡದೆ ತೊಂದರೆ ನೀಡಲಾಗುತ್ತಿದೆ ಎಂದು ಬೈಲು ಪತ್ತಾರ ಸಮಾಜದವರು ಹೇಳಿದಾಗ ಕೂಡಲೇ, ಅವರಿಗಿರುವ ಸಮಸ್ಯೆ ಕೇಳಿ ಬಗೆಹರಿಸುವಂತೆ ಪೌರಾಯುಕ್ತರಿಗೆ ಅಧ್ಯಕ್ಷರು ಸೂಚಿಸಿದರು.
ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಕಲುಷಿತ ನೀರು ರಸ್ತೆಗೆ ಹರಿದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮಲ್ಲಮ್ಮಳ ಮನವಿಗೆ ನಿತ್ಯವೂ ಶುಚಿ ಕೆಲಸ ಮಾಡಬೇಕೆಂದು ಅಧ್ಯಕ್ಷರು ಹೇಳಿದರು.
.......ಕೋಟ್.........
ಕು. ಲಲಿತಾ ಅನಪುರ, ಅಧ್ಯಕ್ಷರು, ನಗರಸಭೆ ಯಾದಗಿರಿ.
ಫೋಟೊ: 8ವೈಡಿಆರ್13
-----
ಫೋಟೊ:8ವೈಡಿಆರ್14 : ಯಾದಗಿರಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಅವರು ನಾಗರಿಕರ ಕುಂದುಕೊರತೆಗಳ ಅಹವಾಲುಗಳ ಆಲಿಸುವ ಜನಸ್ಪಂದನ ಸಭೆ ನಡೆಸಿದರು.