- ದಕ್ಷಿಣ, ಉತ್ತರ, ಕಲ್ಯಾಣ ಕರ್ನಾಟಕ ಪ್ರದೇಶಗಳು ಸಂದಿಸುವಂಥ ಪ್ರದೇಶ
- ಸಾರಥಿ ಗ್ರಾಪಂನ ಚಿಕ್ಕಬಿದರಿ ಗ್ರಾಮದ ತುಂಗಭದ್ರಾ ನದಿ ಸೇರುವ ಜಾಗ
- ಚರಿತ್ರೆಯಲ್ಲಿ ಕನ್ನಡದ ಹೆಸರಿನ ಊರು ಹುಟ್ಟುಹಾಕಿದ ನಾವು ದ್ರಾವಿಡ ಕನ್ನಡಿಗರು ಚಳವಳಿ ಸಂಸ್ಥೆ- - -
ಹರಿಹರ: ಭೌಗೋಳಿಕವಾಗಿ ರಾಜ್ಯದ ಮಧ್ಯ ಬಿಂದುವಾಗಿರುವ ತಾಲೂಕಿನ ಸಾರಥಿ ಗ್ರಾಮ ಪಂಚಾಯಿತಿಯ ಚಿಕ್ಕಬಿದರಿ ಗ್ರಾಮದ ತುಂಗಭದ್ರಾ ನದಿ ಸೇರುವ ಜಾಗವನ್ನು ''''''''ಕನ್ನಡದೂರು'''''''' ಎಂಬುದಾಗಿ ಸಾರಥಿ ಗ್ರಾಮ ಪಂಚಾಯಿತಿಯಿಂದ ಅನುಮೊದನೆ ಸಿಲುಕಿದೆ.ನಾವು ದ್ರಾವಿಡ ಕನ್ನಡಿಗರು ಚಳವಳಿಯ ಮನವಿಯಂತೆ ಹೆಸರಿಸಲಾಗಿದೆ ಎಂದು ಸಾರಥಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರುಶುರಾಮ ಅವರು ಅಧಿಕೃತ ಪತ್ರ ನೀಡಿದರು ಎಂದು ಚಳವಳಿ ಮುಂದಾಳು, ಮಂಡ್ಯದ ಅಬಿ ಒಕ್ಕಲಿಗ ತಿಳಿಸಿದ್ದಾರೆ.
ಕನ್ನಡದೂರು ಭೌಗೋಳಿಕ ಪ್ರದೇಶವು ದಕ್ಷಿಣ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶವು ಸಂದಿಸುವ ಜಾಗವಾಗಿದೆ. ಕಳೆದ ನ.1ರಂದು ನದಿದಡದಲ್ಲಿ ರಾಜ್ಯೋತ್ಸವ ಆಚರಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗಿತ್ತು.ಡಿ.6ರಂದು ದ್ರಾವಿಡ ಕನ್ನಡಿಗರು ಚಳವಳಿ ಸಂಸ್ಥೆ ನೇತೃತ್ವದಲ್ಲಿ ಸ್ಥಳಿಯರನ್ನು ಒಳಗೊಂಡು ಸಾರಥಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಡಿ.29ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಕೆಪಿಆರ್ ಕಾಯ್ದೆ-93ರ ಪ್ರಕಾರ ನಮ್ಮ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚರಿತ್ರೆಯಲ್ಲಿ ಮೊದಲ ಬಾರಿಗೆ ಕನ್ನಡದ ಹೆಸರಿನಲ್ಲಿ ಒಂದು ಊರನ್ನು ನಮ್ಮ ಸಂಸ್ಥೆಯು ಸ್ಥಳೀಯರ ಸಹಕಾರದಿಂದ ಹುಟ್ಟುಹಾಕಿದೆ. ಈ ಊರಿನ ಅಭಿವೃದ್ಧಿಗೆ ಕನ್ನಡಿಗರೆಲ್ಲರ ಸಹಕಾರದ ಅಗತ್ಯವಿದೆ. ಈ ಪ್ರದೇಶದ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲಿದೆ.ಈ ಆಯಕಟ್ಟಿನ ಪ್ರದೇಶದಲ್ಲಿ ಮೊದಲಿಗೆ ಸೇತುವೆ ನಿರ್ಮಾಣ ಆಗಬೇಕು. ಅಲ್ಲಿ ಅತಿ ಎತ್ತರದ ಕನ್ನಡಧ್ವಜ ಕಂಬ ಸ್ಥಾಪಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
- - --30HRR.01:
ಹರಿಹರ ತಾಲೂಕಿನ ಸಾರಥಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಅವರು ದ್ರಾವಿಡ ಕನ್ನಡಿಗರು ಚಳವಳಿ ಮುಂದಾಳು ಮಂಡ್ಯದ ಅಬಿ ಒಕ್ಕಲಿಗ ಅವರಿಗೆ ಕನ್ನಡದೂರು ಹೆಸರು ಘೋಷಿಸಿದ ಪತ್ರ ನೀಡಿದರು.