ಅತಿಯಾದ ಮಳೆಗೆ ಹಾಳಾದ ಹೆಸರು ಕಾಳು, ಸಂಕಷ್ಟದಲ್ಲಿ ರೈತ ಸಮೂಹ

KannadaprabhaNewsNetwork |  
Published : Aug 30, 2025, 01:01 AM IST
ಪೊಟೋ- ತಾಲೂಕಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆಯು ಅತಿಯಾದ ಮಳೆಗೆ ಹೆಸರು ಕಾಳು ಬೂದು ಬಣ್ಣಕ್ಕೆ ತಿರುಗಿರುವುದನ್ನು ತೋರಿಸುತ್ತಿರುವ ರೈತರು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಗೆ ರೈತರು ಬೆಳೆದ ಹೆಸರು ಬೆಳೆಯು ಹಾಳಾಗಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿಯಾಗಿದೆ.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಗೆ ರೈತರು ಬೆಳೆದ ಹೆಸರು ಬೆಳೆಯು ಹಾಳಾಗಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿಯಾಗಿದೆ.

ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೊಯ್ಲಿಗೆ ಬಂದಿದ್ದ ಹೆಸರು ಕಾಯಿಗಳು ಬೂದು ಬಣ್ಣಕ್ಕೆ ತಿರುಗುವ ಮೂಲಕ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಅತಿಯಾದ ಮಳೆಗೆ ಹೊಲದಲ್ಲಿ ಕಾಲು ಇಡಲು ಆಗದಂತೆ ಸ್ಥಿತಿ ನಿರ್ಮಾಣವಾಗಿ ಕಟಾವಿಗೆ ಬಂದ ಹೆಸರ ಕಾಯಿ ಬಿಡಿಸಲು ಮಳೆ ಅವಕಾಶ ನೀಡಿಲ್ಲ. ರೈತರು ಒಕ್ಕಲು ಮಾಡಿದ ಹೆಸರು ಕಾಳುಗಳಲ್ಲಿ ಅರ್ಧ ಕಾಳುಗಳು ಬೂದು ಬಣ್ಣಕ್ಕೆ ತಿರುಗಿದ್ದರಿಂದ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ರೈತ ಸಮೂಹ.

ರೈತರು ಎಕರೆಗೆ 10-15 ಸಾವಿರ ಖರ್ಚು ಮಾಡಿ ಬೆಳೆದ ಹೆಸರು ಬೆಳೆ ಈಗ ಕೊಳೆತು ಹೋಗಿ ಹಣ ಸಹಿತ ವಾಪಾಸ್ ಬರದಂತ ಸ್ಥಿತಿ ನಿರ್ಮಾಣವಾಗಿ ರೈತ ಸಮೂಹಕ್ಕೆ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು 8-10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಹೆಸರು ಬೀಜ ಬಿತ್ತನೆ ಮಾಡಲಾಗಿದೆ. ರೈತರಿಗೆ ಆರ್ಥಿಕವಾಗಿ ಅಲ್ಪ ಮಟ್ಟಿನ ಲಾಭ ತಂದುಕೊಡುವ ಪ್ರಮುಖ ಬೆಳೆಯಾದ ಹೆಸರು ಬೆಳೆ ಈಗ ಕೈಕೊಟ್ಟಿರುವುದು ಹಿಂಗಾರು ಹಂಗಾಮಿನ ಬಿತ್ತನೆಗೆ ಹೊಡೆತ ನೀಡಿದಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆ ಅತಿಯಾದ ಮಳೆಯಿಂದ ಹಾಳಾಗಿ ಹೋಗಿ ರೈತರ ಹೊಟ್ಟಿಗೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಹೆಸರು ಕಾಳುಗಳು ಬೂದು ಬಣ್ಣಕ್ಕೆ ತಿರುಗುವ ಮೂಲಕ ರೈತರು ಕಣ್ಣೀರು ಹಾಕುವಂತೆ ಮಾಡಿದೆ. ಸರ್ಕಾರ ಕೂಡಲೆ ಮಧ್ಯಂತರ ಪರಿಹಾರ ಘೋಷಣೆ ಮಾಡಬೇಕು ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಹೇಳಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ