ಹನೂರಿನಲ್ಲಿ ಅರಣ್ಯ ಇಲಾಖೆಯಿಂದ ರೈತ ಸಂಘದ ನಾಮಫಲಕ ತೆರವು

KannadaprabhaNewsNetwork | Published : Oct 4, 2024 1:03 AM

ಸಾರಾಂಶ

ರೈತ ಸಂಘದ ನಾಮಫಲಕ ತೆರವುಗೊಳಿಸಲು ಬಂದ ಅರಣ್ಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ ಘಟನೆ ಹನೂರಿನ ಗಡಿ ಗ್ರಾಮ ಆಲಂಬಾಡಿ ಗ್ರಾಮದಲ್ಲಿ ಜರುಗಿದೆ.

ಕನ್ನಡ ಪ್ರಭ ವಾರ್ತೆ ಹನೂರು ರೈತ ಸಂಘದ ನಾಮಫಲಕ ತೆರವುಗೊಳಿಸಲು ಬಂದ ಅರಣ್ಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ ಘಟನೆ ಗಡಿ ಗ್ರಾಮ ಆಲಂಬಾಡಿ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಗೋಪಿನಾಥ ಗ್ರಾಪಂ ವ್ಯಾಪ್ತಿಯ ಅಪ್ಪು ಕಾ ಪಟ್ಟಿ ಪುಗಮ್ಅತ್ತೂರು ಗ್ರಾಮಗಳಲ್ಲಿ ಅಳವಡಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ನಾಮಫಲಕಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ, ನಂತರ ಆಲಂಬಾಡಿ ಗ್ರಾಮದಲ್ಲಿ ಅಳವಡಿಸಲಾಗಿದ್ದ ನಾಮಪಲಕ ತೆರವುಗೊಳಿಸಲು ಮುಂದಾಗಿದ್ದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನಡುವೆ ವಾಗ್ವಾದ ನಡೆದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಅರಣ್ಯಾಧಿಕಾರಿಗಳ ಉದ್ಧಟತನ ಗ್ರಾಮಸ್ಥರ ಆರೋಪ:

ವಲಯ ಅರಣ್ಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಅರಣ್ಯದಂಚಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಅಳವಡಿಸಿದ್ದ ನಾಮಪಲಕಗಳನ್ನು ತೆರವುಗೊಳಿಸಿದ್ದು, ಆಲಂಬಾಡಿ ಗ್ರಾಮದಲ್ಲಿ ನಾಮಫಲಕ, ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಪ್ರಸಂಗ ಜರುಗಿದೆ.

ಕಳೆದ ತಿಂಗಳು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಗಡಿ ಗ್ರಾಪಂ ವ್ಯಾಪ್ತಿಯ ಆಲಂಬಾಡಿ ಮಾರಿಕೋಟೆ ಪುದು ಕಾಡು ಆಲಂಬಡಿ ಗ್ರಾಮಗಳಲ್ಲಿ ನಾಮಫಲಕಗಳ ಅನಾವರಣಗೊಳಿಸಿ ಸಂಘಟನೆಯ ಮೂಲಕ ಸಭೆ ಮಾಡಲಾಗಿತ್ತು. ಕಾಡಂಚಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಮುನ್ನಾ ಅರಣ್ಯ ಅಧಿಕಾರಿಗಳ ಉದ್ಧಟತನವನ್ನು ಪ್ರಶ್ನಿಸಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬುವ ಮೂಲಕ ಅರಣ್ಯ ಅಧಿಕಾರಿಗಳನ್ನು ಗ್ರಾಮದಲ್ಲಿ ಗ್ರಾಮಸ್ಥರ ಒಕ್ಕಲೆಬ್ಬಿಸುವ ನೋಟಿಸ್ ಜಾರಿಗೊಳಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಗಡಿ ಗ್ರಾಮದಲ್ಲಿರುವ ಜನರನ್ನು ಒಕ್ಕಲುಬ್ಬಿಸುವ ಹುನ್ನಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಾಮಫಲಕಗಳನ್ನು ತರವುಗೊಳಿಸಲು ಮುಂದಾಗಿದ್ದು ತಲತಲಾಂತರ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಜನರಿಗೆ ಗಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ನಮಗೆ ಈ ಗ್ರಾಮದಲ್ಲಿ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಪತ್ರಿಕೆಗೆ ತೋಡಿಕೊಂಡರು.

ಅರಣ್ಯ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಗಡುವು:

ಗ್ರಾಮದಲ್ಲಿ ಅಳವಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ನಾಮಫಲಕವನ್ನು ಬುಧವಾರದ ಒಳಗೆ ತೆರವುಗೊಳಿಸುವಂತೆ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನಡುವೆ ವಾಗ್ಧವಾದ ನಡೆದಿತ್ತು. ಗಡಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮೇಲೆ ನಿರಂತರವಾಗಿ ಮಾಡುತ್ತಿರುವ ದಬ್ಬಾಳಿಕೆ ಕಿರುಕುಳದಿಂದ ಈಗಾಗಲೇ ಜನತೆ ಬೇಸತ್ತಿದ್ದಾರೆ. ಜೊತೆಗೆ ಇಲ್ಲಿನ ಗ್ರಾಮಸ್ಥರನ್ನು ಒಕ್ಕಲಿಸುವ ಹುನ್ನಾರದಿಂದ ಬಂಡವಾಳ ಶಾಹಿಗಳ ಪರವಾಗಿ ಅರಣ್ಯ ಅಧಿಕಾರಿಗಳು ರಾಜ್ಯದ ದಟ್ಟ ಅರಣ್ಯದ ಮಧ್ಯಭಾಗದಲ್ಲಿರುವ ಖನಿಜ ಸಂಪತ್ತು ತೆಗೆಯಲು ಅರಣ್ಯ ಕಾಯ್ದೆಯನ್ನೇ ಬದಲಾವಣೆ ಮಾಡಿ ಅವರಿಗೆ ನೀಡಿದ್ದಾರೆ. ಇತ್ತ ಕಡು ಬಡತನದಲ್ಲಿ ಗ್ರಾಮದಲ್ಲಿ ವಾಸಿಸುವ ಜನರನ್ನು ಒಕ್ಕಲುಪಿಸುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಸಂಘಟನೆ ಸಹಿಸುವುದಿಲ್ಲ. ರಾಜ್ಯ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಈ ಘಟನೆಯ ಬಗ್ಗೆ ಸಂಘಟನೆಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ಹೇಳಿದರು.

Share this article