ವಿಶ್ವ ಆರೋಗ್ಯ ದಿನದ ರಾಷ್ಟ್ರೀಯ ಕ್ವಿಜ್ ಕಾರ್ಯಕ್ರಮ

KannadaprabhaNewsNetwork |  
Published : Apr 11, 2024, 12:45 AM IST
42 | Kannada Prabha

ಸಾರಾಂಶ

ಸ್ಪರ್ಧೆಯು ನಾಲ್ಕು ತಂಡಗಳಿದ್ದವು, ಪ್ರತಿಯೊಂದು ತಂಡವು ಮೂರು ವಿದ್ಯಾರ್ಥಿಗಳಿಂದ ಕೂಡಿತ್ತು, ಇವರನ್ನು ಏ. 2ರ ಅರ್ಹತಾ ಸುತ್ತಿನಲ್ಲಿ ಆಯ್ಕೆ ಮಾಡಲಾಗಿತ್ತು. ಕ್ವಿಜ್ನಲ್ಲಿ ನಾಲ್ಕು ಸುತ್ತುಗಳಿದ್ದವು ಮತ್ತು ಒಂದು ಟೈಬ್ರೇಕರ್ ಸುತ್ತು ಕೂಡ ನಡೆಯಿತು. ಮೊದಲ ಬಹುಮಾನವನ್ನು ಫೇಸ್ 2 ಪಾರ್ಟ್ 2 ಎಂಬಿಬಿಎಸ್ ವಿದ್ಯಾರ್ಥಿಗಳಾದ ಅರುಷಿ ಕೌಶಿಕ್, ಅಬೋರಾ ಬಾಗಿಶ್ ಮತ್ತು ಪೂರ್ಣ ಬನ್ಸಲ್ ಗೆದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರು ವಿಭಾಗದ ಸಮುದಾಯ ವೈದ್ಯಕೀಯ ಇಲಾಖೆಯು ಐಎಪಿಎಸ್ಎಂ (ಭಾರತೀಯ ಪ್ರಿವೆಂಟಿವ್ ಸೋಷಿಯಲ್ ಮೆಡಿಸಿನ್ ಅಸೋಸಿಯೇಷನ್) ಜೊತೆಗೂಡಿ 2024ರ ವಿಶ್ವ ಆರೋಗ್ಯ ದಿನದ ರಾಷ್ಟ್ರೀಯ ಕ್ವಿಜ್ ನ್ನು ಕಾಲೇಜಿನ ಗ್ಯಾಲರಿ 3ನಲ್ಲಿ ನಡೆಯಿತು. ಒಟ್ಟು 112 ಮಂದಿ, ಅವರಲ್ಲಿ 100 ಎಂಬಿಬಿಎಸ್ ವಿದ್ಯಾರ್ಥಿಗಳು, 6 ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಮತ್ತು 6 ಉಪನ್ಯಾಸಕರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸ್ಪರ್ಧೆಯು ನಾಲ್ಕು ತಂಡಗಳಿದ್ದವು, ಪ್ರತಿಯೊಂದು ತಂಡವು ಮೂರು ವಿದ್ಯಾರ್ಥಿಗಳಿಂದ ಕೂಡಿತ್ತು, ಇವರನ್ನು ಏ. 2ರ ಅರ್ಹತಾ ಸುತ್ತಿನಲ್ಲಿ ಆಯ್ಕೆ ಮಾಡಲಾಗಿತ್ತು. ಕ್ವಿಜ್ನಲ್ಲಿ ನಾಲ್ಕು ಸುತ್ತುಗಳಿದ್ದವು ಮತ್ತು ಒಂದು ಟೈಬ್ರೇಕರ್ ಸುತ್ತು ಕೂಡ ನಡೆಯಿತು. ಮೊದಲ ಬಹುಮಾನವನ್ನು ಫೇಸ್ 2 ಪಾರ್ಟ್ 2 ಎಂಬಿಬಿಎಸ್ ವಿದ್ಯಾರ್ಥಿಗಳಾದ ಅರುಷಿ ಕೌಶಿಕ್, ಅಬೋರಾ ಬಾಗಿಶ್ ಮತ್ತು ಪೂರ್ಣ ಬನ್ಸಲ್ ಗೆದ್ದರು.

ಮೊದಲ ರನ್ನರ್-ಅಪ್ ಬಹುಮಾನವನ್ನು ಶಶಾಂಕ್ ಮಿಶ್ರಾ, ಶ್ರೇಯಾ ವಖರಿಯಾ ಮತ್ತು ಶ್ರಿಷ್ಟಿ ದತ್ತಾ ಗೆದ್ದರು ಮತ್ತು ಎರಡನೇ ರನ್ನರ್-ಅಪ್ ಬಹುಮಾನವನ್ನು ಸನಾ ಚಹಲ್, ಸಮ್ಯುಕ್ತಾ ಕೃಷ್ಣ ಪದ್ಮನಾಭ ಮತ್ತು ಸಾಗರ್ ಶಾಜಿ, ಎಲ್ಲ ಫೇಸ್ 2 ಪಾರ್ಟ್ 1 ಎಂಬಿಬಿಎಸ್ ವಿದ್ಯಾರ್ಥಿಗಳು ಗೆದ್ದರು. ಡಾ. ಕೋಡೀಸ್ವರನ್ ಮತ್ತು ಡಾ. ಪಿ.ವಿ. ಮನ್ರಿಷಾ ಕ್ವಿಜ್ ಮಾಸ್ಟರ್ಸ್ ಆಗಿದ್ದು, ಕ್ವಿಜ್ ಸುಗಮವಾಗಿ ನಡೆಸಿಕೊಟ್ಟರು.

ಕಾರ್ಯಕ್ರಮವು ಬಹುಮಾನ ವಿತರಣಾ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು,

ಉಪಪ್ರಾಂಶುಪಾಲ ಡಾ. ಪ್ರವೀಣ್ ಕುಲಕರ್ಣಿ, (ಪ್ಯಾರಾ-ಕ್ಲಿನಿಕಲ್), ಡಾ. ಡಿ. ಸುನಿಲ್ ಕುಮಾರ್, ವಿಭಾಗದ ಮುಖ್ಯಸ್ಥ ಮತ್ತು ಡಾ.ಎಂ. ಶ್ವೇತಾಶ್ರೀ, ಸಹಾಯಕ ಪ್ರಾಧ್ಯಾಪಕಿ ಮತ್ತು ಕ್ವಿಜ್ ಗೆ ನೋಡಲ್ ವ್ಯಕ್ತಿ, ಬಹುಮಾನಗಳನ್ನು ವಿತರಿಸಿದರು. ಡಾ. ಎಂ.ಆರ್. ಮೈಥಿಲಿ, ಡಾ. ಸುನಿತಾ ಸಿಂಗ್, ಡಾ.ಎಸ್. ರಶ್ಮಿ ಮತ್ತು ವಿಭಾಗದ ಪದವೀಧರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ