ನಾಳೆ ಶಾಲೆಗಳಲ್ಲಿ ಮೊಳಗಲಿದೆ ಮಕ್ಕಳ ಕಲರವ

KannadaprabhaNewsNetwork |  
Published : May 29, 2026, 02:45 AM IST
ಇಂದು ಶಾಲೆಗಳಲ್ಲಿ ಮೊಳಗಲಿದೆ ಮಕ್ಕಳ ಕಲರವ! | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕುಗಳ ಎಲ್ಲ ಶಾಲೆಗಳು ಇಂದು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೊತ್ಸವ ಹಾಗೂ ದಾಖಲಾತಿ ಪ್ರಕ್ರಿಯೆಗೆ ಸಂಪೂರ್ಣ ಸಜ್ಜಾಗಿದ್ದು, ಶಾಲೆಗಳ ಆವರಣಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕುಗಳ ಎಲ್ಲ ಶಾಲೆಗಳು ಇಂದು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೊತ್ಸವ ಹಾಗೂ ದಾಖಲಾತಿ ಪ್ರಕ್ರಿಯೆಗೆ ಸಂಪೂರ್ಣ ಸಜ್ಜಾಗಿದ್ದು, ಶಾಲೆಗಳ ಆವರಣಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

ತಾಲೂಕಿನ ಅತೀ ದೊಡ್ಡ ಶಾಲೆಯೆಂಬ ಕೀರ್ತಿಗೆ ಭಾಜನವಾಗಿರುವ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿಶೇಷ ಸ್ಥಾನ ಗಳಿಸಿದೆ. ಪ್ರಸ್ತುತ ೧ ರಿಂದ ೧೨ನೇ ತರಗತಿಗಳಲ್ಲಿ ೧೪೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಪಿಯು ವಿಭಾಗಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚುತ್ತಿದ್ದು, ಪ್ರವೇಶ ಬೇಡಿಕೆ ಹಾಗೂ ಶಾಲೆಯ ಮೇಲೆ ಪಾಲಕರು ಇಟ್ಟಿರುವ ವಿಶ್ವಾಸ ಗಟ್ಟಿಗೊಳಿಸಿದೆ. ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ತಂತ್ರಜ್ಞಾನ ಆಧರಿತ ಕಲಿಕೆ, ಕ್ರೀಡಾ ಕೊಠಡಿ, ವಿಶಾಲ ಆಟದ ಮೈದಾನ, ಗ್ರಂಥಾಲಯ, ಉದ್ಯಾನ ಸೇರಿ ಹತ್ತಾರು ಸೌಲಭ್ಯಗಳಿಂದ ಕೂಡಿದ ಶಾಲೆಯ ಪ್ರವೇಶಕ್ಕೆ ೨-೩ ದಿನ, ರಾತ್ರಿ ಪಾಲಕರು ಸರದಿಯಲ್ಲಿ ನಿಂತ ದಾಖಲೆ ರಾಜ್ಯಾದ್ಯಂತ ಗಮನ ಸೆಳೆದಿತ್ತು. ಸರ್ಕಾರಿ ಶಾಲೆಗಳು ಮೊದಲಿನ ಕೊರತೆಗಳನ್ನು ಕಳಚಿಕೊಂಡು ಮೇಲೆದ್ದು ದಾಖಲೆಯ ಶೇ.೧೦೦ರ ಫಲಿತಾಂಶ ನೀಡಿದ ಶ್ರೇಯಸ್ಸು ಹೊಂದಿರುವುದರಿಂದ ೨೦೨೬-೨೭ನೇ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವಕ್ಕೆ ಮಧುವಣಗಿತ್ತಿಯಂತೆ ಮಕ್ಕಳ ಸ್ವಾಗತಕ್ಕೆ ಸಜ್ಜಾಗಿದೆ. ಬಹುತೇಕ ಶಾಲೆಗಳಲ್ಲಿ ಇಂದು ಪಾಲಕರ ಸಭೆಗಳು ಆಯೋಜನೆಗೊಂಡಿವೆ. ಬಿಇಒ ಅಶೋಕ ಬಸಣ್ಣವರ ಹಾಗೂ ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ ಪ್ರಾರಂಭೋತ್ಸವದಲ್ಲಿ ಯಾವುದೇ ಚ್ಯುತಿಯಾಗದಂತೆ ವ್ಯವಸ್ಥೆಗೊಳಿಸಿ ಸಿಬ್ಬಂದಿ ಸಜ್ಜುಗೊಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇ20 ಪೆಟ್ರೋಲ್‌ನಿಂದ ಮೈಲೇಜ್‌ ತಗ್ಗಿದ ದೂರು ಬಂದಿಲ್ಲ
ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ವರದಿ