ಬಸವಾದಿ ಶರಣರ ಸಂದೇಶ ಸಾರುವುದೇ ಹಿಂದು ಸಮಾವೇಶದ ಉದ್ದೇಶ: ಕನ್ಹೇರಿ ಮಠದ ಸ್ವಾಮೀಜಿ

KannadaprabhaNewsNetwork |  
Published : Nov 04, 2026, 01:30 AM IST
3ುಲು15,16 | Kannada Prabha

ಸಾರಾಂಶ

ಕೆಲವರು ಲಿಂಗಾಯತ ಧರ್ಮ ಒಡೆಯಲು ಮುಂದಾದರು. ಹಿಂದು ಧರ್ಮ ಒಡೆಯಲು ಮುಂದಾಗಿ ಮುಖ್ಯಮಂತ್ರಿಯಾಗಲು ಹೊರಟ ಮಹಾನುಭಾವರೂ ರಾಜ್ಯದಲ್ಲಿ ಇದ್ದಾರೆ.

ಗಂಗಾವತಿ: ಬಸವಾದಿ ಶರಣರ ಸಂದೇಶ ಸಾರುವುದೇ ಹಿಂದೂ ಸಮಾವೇಶದ ಉದ್ದೇಶವಾಗಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜರುಗಿದ ಬೃಹತ್ ಹಿಂದೂ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ ಅವರು, ಬಸವಣ್ಣನವರು ಸಮಾನತೆಗೆ ಹೋರಾಡಿದರು, ಜಾತ್ಯತೀತವಾಗಿ ಇರಬೇಕೆಂದು ಮಾರ್ಗದರ್ಶನ ನೀಡಿದರು. ಆದರೆ ಕೆಲವರು ಬಸವಣ್ಣನವರ ಹೆಸರಿನಲ್ಲಿ ದುರಾಲೋಚನೆ ಇಟ್ಟುಕೊಂಡು ಸಮುದಾಯವನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕೆಲವರು ಲಿಂಗಾಯತ ಧರ್ಮ ಒಡೆಯಲು ಮುಂದಾದರು. ಹಿಂದು ಧರ್ಮ ಒಡೆಯಲು ಮುಂದಾಗಿ ಮುಖ್ಯಮಂತ್ರಿಯಾಗಲು ಹೊರಟ ಮಹಾನುಭಾವರೂ ರಾಜ್ಯದಲ್ಲಿ ಇದ್ದಾರೆ. ಸಾಣೆಹಳ್ಳಿ ಸ್ವಾಮೀಜಿಯೊಬ್ಬರು ಸಭೆಯೊಂದರಲ್ಲಿ ಜಗುಲಿ ಮೇಲೆ ಇರುವ ದೇವರಿಗೆ ಮ್ಯೂಜಿಯಂ ಅಂತ ಹೇಳಿದ್ದಾರೆ. ಇವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೋ ಎನೋ ತಿಳಯದಂತಾಗಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ವಿಜಯಪುರದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಮುಸ್ಲಿಂ ಸಮುದಾಯಕ್ಕೆ ನಾವು -ನೀವು ಒಂದೇ ಎಂದಿದ್ದಾರೆ. ನಮ್ಮ ನಿಮ್ಮ ಆಚರಣೆ ಒಂದೇ ಇದೆ ಎಂದು ಹೇಳಿಕೆ ನೀಡಿರುವ ಇವರಿಗೆ ಏನೆನ್ನಬೇಕು? ಇನ್ನೊರ್ವ ಸ್ವಾಮಿ ಚರ್ಚಿನಲ್ಲಿ ಬಸವ ಜಯಂತಿ ಆಚರಿಸಬೇಕೆಂದು ಕರೆ ಕೊಟ್ಟಿದ್ದಾರೆ, ಇವರು ಫಾದರ್ ಆಗಲು ಲಾಯಕ್ಕು ಎಂದರು. ಕಳೆದ ಒಂದು ವರ್ಷದಿಂದ ಕೆಲವರು ತಮ್ಮ ಬೆನ್ನು ಹತ್ತಿ ಯಾವುದೇ ಕಾರಣಕ್ಕೂ ಕಾಡಸಿದ್ದೇಶ್ವರ ಸ್ವಾಮೀಜಿ ತಮ್ಮ ಜಿಲ್ಲೆಗಳಿಗೆ ಬರಬಾರದು, ಇವರು ಬಂದರೆ ಅನಾಹುತವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಲ್ಲಿ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರೂ ಇದ್ದಾರೆ ಎಂದರು. ಆದರೆ ತಾವು ಹೋದ ಎಲ್ಲೂ ಏನೂ ನಡೆದಿಲ್ಲ, ಸೌಹಾರ್ದ, ಸಹಕಾರದಿಂದಲೇ ಎಲ್ಲರೂ ಇದ್ದಾರೆ ಎಂದರು.

ಏಷ್ಯಾ ಖಂಡದಲ್ಲಿ ಅಕ್ಕಿ ಪ್ರಸಿದ್ಧಿ ಪಡೆದಿದೆ. ಗಂಗಾವತಿ ನಗರವೂ ಪ್ರಸಿದ್ಧಿ ಪಡೆದ ನಗರವಾಗಿದೆ, ಸಾವಯವ ಕೃಷಿಗೆ ಆದ್ಯತೆ ನೀಡಿರಿ ಎಂದು ಶ್ರೀಗಳು ಇಲ್ಲಿನ ರೈತರಿಗೆ ಕಿವಿಮಾತು ಹೇಳಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನೇರಿ ಮಠವು ಅಧ್ಯಾತ್ಮಿಕ ಕೇಂದ್ರದ ಜೊತೆಗೆ ಕೃಷಿಗೆ ಆದ್ಯತೆ ನೀಡಿದೆ. ಸಾವಯವದ ಬಗ್ಗೆ ಶ್ರೀಗಳು ಪಣ ತೊಟ್ಟಿದ್ದಾರೆ. ಸ್ವಾಮೀಜಿಗಳ ಸಂಪೂರ್ಣ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಿಂದೂ ಸಮಾವೇಶಕ್ಕೆ ಸರ್ವರೂ ಸಹಕಾರ ನೀಡಿದ್ದಾರೆ ಎಂದರು. ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು. ಬಸವಕಲ್ಯಾಣದ ಮುಚಳಾಂಭ ಸ್ವಾಮೀಜಿಯವರು ಮಾತನಾಡಿದರು.

ಅಂದ್ರಪ್ರದೇಶ ಕರ್ನೂಲಿನ ಸ್ವಾಮೀಜಿ, ನಂದಿಪುರ ಸ್ವಾಮೀಜಿ, ಅಂಜನಾದ್ರಿ ವಿದ್ಯಾದಾಸ ಬಾಬಾ, ಆನೆಗೊಂದಿ ದುರ್ಗಾದೇವಿ ದೇಗುಲದ ಬ್ರಹ್ಮಾನಂದ ಸ್ವಾಮಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಡೇಸ್ಗೂರು, ಬಸವರಾಜ ಕ್ಯಾವಟರ್, ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ, ಮಾಜಿ ಸಂಸದ ಶಿವರಾಮಗೌಡ, ಜಿ. ವೀರಪ್ಪ, ರಮೇಶ ವೈದ್ಯ, ವಿರೂಪಾಕ್ಷಪ್ಪ ಸಿಂಗನಾಳ, ನವೀನ್ ಗುಳಗಣ್ಣನವರ್, ಶ್ರವಣ ಕುಮಾರ್ ರಾಯ್ಕರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚು ಸ್ವಾಮೀಜಿಗಳು ವೇದಿಕೆಯಲ್ಲಿದ್ದರು.

ಅಪಾರ ಸಂಖ್ಯೆಯಲ್ಲಿ ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಸದಾನಂದ ಶೇಟ್ ಪ್ರಾರ್ಥಿಸಿದರು, ರಾಘವೇಂದ್ರ ದಂಡಿನ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌