25 ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು,ಶ್ರೀ ಪುರಂದರದಾಸರ ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಕಾರ್ಯಕ್ರಮ
ಶ್ರೀ ತ್ಯಾಗರಾಜರ ಕೃತಿಗಳಲ್ಲಿ ಒಂದಾದ ಪಂಚರತ್ನ ಕೃತಿ ಅತ್ಯಂತ ರಮಣೀಯವಾದುದು ಎಂದು ಶ್ರೀ ರಾಮಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ಹೇಳಿದ್ದಾರೆ.
ಶ್ರೀ ರಾಮಸೇವಾ ಪ್ರತಿಷ್ಠಾನ ದಿಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಏರ್ಪಾಡಾಗಿದ್ದ 25 ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವಾಗ್ಗೆಯಕರರಾದ ತ್ರಿಮೂರ್ತಿಗಳಲ್ಲಿ ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿ ತಮ್ಮ ಇಷ್ಟದೈವ ಶ್ರೀ ರಾಮನ ದಿವ್ಯ ತಾರಕ ನಾಮವನ್ನು ತಮ್ಮ ಜೀವಿತಕಾಲ ಪೂರ್ಣವಾಗಿ ಉಪಾಸಿಸಿ ರಾಮನಾಮವನ್ನು, ರಾಮನ ದಿವ್ಯಾ ರೂಪವನ್ನು ಒಂದಾಗಿ ತಿಳಿದು ವೇದ ಇತಿಹಾಸ ಪುರಾಣಗಳ ತತ್ತ್ವಕಾ ಭಾವ ರಹಸ್ಯವನ್ನು, ಉಪನಿಷತ್ ರಹಸ್ಯ ವನ್ನು ಅನುಭವಿಸಿ ತಮ್ಮ ನಾದ ಸುಧಾರಸದಿಂದ ತ್ಯಾಗಬ್ರಹ್ಮಹೋಪನಿಷದ್ ಎಂಬ ಪ್ರಸಿದ್ಧ ಕೃತಿಗಳನ್ನು ಅನುಗ್ರಹಿಸಿದ್ದಾರೆ ಎಂದರು.ತಮ್ಮ ಈ ಸಂಗೀತ ಸೇವೆಯಲ್ಲೇ ಶ್ರೀ ರಾಮನನ್ನು ಕಂಡಂತ ಸದ್ಗುರು ಶ್ರೀ ತ್ಯಾಗರಾಜರು ಕರ್ನಾಟಕ ಶಾಸ್ತಿಯ ಸಂಗೀತ ದಲ್ಲಿ ಗೆಯವೂ, ಸಾಹಿತ್ಯವೂ ಭಾವಪುಷ್ಟಿಯಿಂದ ತುಂಬಿದೆ ಎಂದು ಹೇಳಿದರು. ಸದ್ಗುರು ಶ್ರೀ ತ್ಯಾಗರಾಜರು ಶ್ರೀ ರಾಮನಲ್ಲಿ ಇಟ್ಟಿದ್ದ ಭಕ್ತಿ ಸೂರ್ಯ, ಚಂದ್ರ ಇರುವರೆವಿಗೂ ಇರುತ್ತದೆ. ಈ ಮಂದಿರದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮ ಶ್ರದ್ಧಾ ಭಕ್ತಿ ಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮ ದಲ್ಲಿ ಶ್ರೀ ಪುರಂದರ ದಾಸರ, ಭಕ್ತ ಕನಕದಾಸರ ಕೃತಿಗಳನ್ನು ಹಾಡಲಾಯಿತು. ವಿದ್ವಾನ್ ಉಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
20ಕೆಟಿಆರ್.ಕೆ.1ಃ