ಮಾಗಡಿ: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಮಂಚನಬೆಲೆ ಜಲಾಶಯದ ಪಂಪ್ ಹೌಸ್‌ಗಳಲ್ಲಿ ನಡೆಯುತ್ತಿಲ್ಲ ಶುದ್ಧೀಕರಣದ ಪ್ರಕ್ರಿಯೆಯಿಂದ ಪಟ್ಟಣದ ಜನತೆ ಕಾವೇರಿ ನೀರು ಕುಡಿಯುವ ಸಮಯ ಬಂದಿಲ್ಲ, ಶುದ್ಧ ನೀರು ಘಟಕಗಳ ಮೊರೆ ಹೋಗಬೇಕಿದೆ.
ಜಲಾಶಯಕ್ಕೆ ಕಾವೇರಿ ನೀರು: ಕೆಲವು ತಿಂಗಳ ಹಿಂದೆ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಾಲಕೃಷ್ಣ ಅವರು ಕಣ್ವ ಜಲಾಶಯದ ಮೂಲಕ ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ಪೂರೈಕೆಗೆ ಚಾಲನೆ ನೀಡಲಾಗಿದ್ದು ಪುರಸಭೆಯವರು ಪಟ್ಟಣಕ್ಕೆ ಶುದ್ಧ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿ ಪಟ್ಟಣದ ಜನತೆಗೆ ಶುದ್ಧ ಕಾವೇರಿ ನೀರು ಪೂರೈಕೆ ಮಾಡಬೇಕಿದೆ.ಕೋಟ್...........
ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಜಲಾಶಯಕ್ಕೆ ಭೇಟಿ ನೀಡಿ ಹಾಲಂ ಮತ್ತು ಬ್ಲೀಚಿಂಗ್ ಪೌಡರ್ ಹಾಕಿಸಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿದೆ. ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆ.-ಶಿವರುದ್ರಯ್ಯ, ಮುಖ್ಯಾಧಿಕಾರಿಗಳು, ಪುರಸಭೆ, ಮಾಗಡಿಕೋಟ್.........ಮಂಚನಬೆಲೆ ಜಲಾಶಯದಿಂದ ಪ್ರತಿದಿನವೂ ನೀರು ಪೂರೈಕೆ ಆಗಬೇಕು. ಪಂಪ್ ಹೌಸ್‌ಗಳಲ್ಲಿ ಸೂಕ್ತ ರೀತಿಯಲ್ಲಿ ಶುದ್ಧೀಕರಣ ನಡೆಯುವಂತೆ ನೋಡಿಕೊಳ್ಳಬೇಕು. ವಾರಕ್ಕೆ ಎರಡು ದಿನ ಮಂಚನಬೆಲೆ ನೀರು ಪೂರೈಸಬೇಕು. ಇಲ್ಲವಾದರೆ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.-ಅಶ್ವತ್ಥ್, ಸದಸ್ಯ ಪುರಸಭೆ, ಮಾಗಡಿ
ಪೋಟೋ 9ಮಾಗಡಿ1:ಮಾಗಡಿ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಮಂಚನಬೆಲೆಯಿಂದ ಪೂರೈಕೆಯಾಗುತ್ತಿರುವ ಕಲುಷಿತ ನೀರು.
ಪೋಟೋ 9ಮಾಗಡಿ2:ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ ನೋಟ.